ಸುವರ್ಣ ವಿಧಾನಸೌಧ (ಬೆಳಗಾವಿ): ಹಿಂದುತ್ವವಾದದ ಮೂಲಕ ಪಕ್ಷ ಸಂಘಟನೆ ಬಲಗೊಳಿಸಿಕೊಳ್ಳುತ್ತಾ ಸಾಗಿರುವ ಸಂಘ ಪರಿವಾರ ಮತ್ತು ಬಿಜೆಪಿಗೆ ಪರ್ಯಾಯವಾಗಿ ಸಂವಿಧಾನದ ಆಶಯಗಳ ಪ್ರತಿಪಾದನೆಗೆ ಯುವಕರನ್ನು ಸಜ್ಜುಗೊಳಿಸಲು ಮುಂದಾಗಿರುವ ಕಾಂಗ್ರೆಸ್, ಬೆಳಗಾವಿ ಜಿಲ್ಲೆಯ ಘಟಪ್ರಭಾದಲ್ಲಿ ದೇಶದ ಮೊದಲ ತರಬೇತಿ ಕೇಂದ್ರವನ್ನು ಆರಂಭಿಸಲು ಮುಂದಾಗಿದೆ.

ಡಾ.ನಾ.ಸು.ಹರ್ಡೀಕರ್ ರಾಷ್ಟ್ರೀಯ ಸೇವಾದಳ ತರಬೇತಿ ಅಕಾಡೆಮಿ ಮತ್ತು ಶಿಕ್ಷಣ ಸಂಸ್ಥೆ ಹೆಸರಿನಲ್ಲಿ ತರಬೇತಿ ಕೇಂದ್ರ ಆರಂಭಿಸಲಾಗುತ್ತಿದ್ದು, ₹2 ಕೋಟಿ ವೆಚ್ಚದಲ್ಲಿ ತರಬೇತಿ ಸಭಾಂಗಣ ನಿರ್ಮಾಣ ಮಾಡಲಾಗಿದೆ. ಮೊದಲ ಹಂತದಲ್ಲಿ ‘ಕಾಂಗ್ರೆಸ್ ಸೇವಾ’ ತರಬೇತಿ, ರಾಷ್ಟ್ರಪ್ರೇಮ ಮೂಡಿಸಲು ‘ಜೈಜಗತ್’ ತರಬೇತಿ, ಎಲ್ಲರೂ ಒಂದಾಗಿ ಬಾಳುವ ಸಹಬಾಳ್ವೆ ಕಲಿಸಲು ‘ಸಂಗಂ’ ತರಬೇತಿ ನೀಡಲು ತಯಾರಿ ನಡೆಸಲಾಗಿದೆ.

ಒಮ್ಮೆಗೆ 500ಕ್ಕೂ ಹೆಚ್ಚು ಜನರಿಗೆ ತರಬೇತಿ ನೀಡಲು ಸ್ಥಳಾವಕಾಶ ಕಲ್ಪಿಸಲಾಗಿದೆ. ಯುವಕ–ಯುವತಿಯರಿಗೆ ಪ್ರತ್ಯೇಕ ವಸತಿ ವ್ಯವಸ್ಥೆಯೂ ಇರಲಿದೆ. ತರಬೇತಿಯ ಅವಧಿಯಲ್ಲಿ ಉಚಿತ ಊಟ–ಉಪಾಹಾರವನ್ನೂ ನೀಡಲು ಕಾಂಗ್ರೆಸ್ ಮುಂದಾಗಿದೆ.

ಸಂವಿಧಾನದ ಆಶಯಗಳಾದ ಸಮಾನತೆ, ಜಾತ್ಯತೀತತೆ, ಸಮಾಜವಾದ, ಸರ್ವಧರ್ಮ ಸಮನ್ವಯ, ಸ್ವಾತಂತ್ರ್ಯ, ಭ್ರಾತೃತ್ವ, ಮಹಾತ್ಮ ಗಾಂಧೀಜಿ ಹಾಗೂ ಕಾಂಗ್ರೆಸ್ ಪಕ್ಷದ ಆಶಯ, ತತ್ವ, ಬದುಕು ಸೇರಿದಂತೆ ರಾಷ್ಟ್ರೀಯ ಮೌಲ್ಯಗಳನ್ನು ಬಿತ್ತುವ ಕೆಲಸವನ್ನು ತರಬೇತಿಯ ಅವಧಿಯಲ್ಲಿ ಮಾಡಲಾಗುತ್ತದೆ. ರಾಜ್ಯದ ವಿವಿಧ ಜಿಲ್ಲೆಯ ಜನರು ಹಾಗೂ ಹೊರ ರಾಜ್ಯದವರಿಗೂ ತರಬೇತಿ ನೀಡುವ ಉದ್ದೇಶವನ್ನು ಕೇಂದ್ರ ಹೊಂದಿದೆ.

‘ಧರ್ಮ, ಹಿಂದುತ್ವದ ತಳಹದಿಯ ಮೇಲೆ ಯುವಜನರಲ್ಲಿ ಕೋಮುವಾದ ಬಿತ್ತುತ್ತಿರುವ, ಪೊಳ್ಳು ರಾಷ್ಟ್ರೀಯತೆ ಹೆಸರಲ್ಲಿ ಮತ್ತೊಂದು ಧರ್ಮ, ಜಾತಿ, ಸಮುದಾಯಗಳ ವಿರುದ್ಧ ವಿಷಬೀಜ ಬಿತ್ತುತ್ತಿರುವ, ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ವಿದ್ಯಾರ್ಥಿ ಸಮೂಹವನ್ನು ದಾರಿ ತಪ್ಪಿಸುವ ಆರ್ಎಸ್ಎಸ್, ಬಿಜೆಪಿಯ ತತ್ವ, ಸಿದ್ಧಾಂತಗಳಿಗೆ ಪರ್ಯಾಯವಾಗಿ ಭವಿಷ್ಯದ ಯುವಕರನ್ನು ಸಜ್ಜುಗೊಳಿಸುವ ತುರ್ತು ಅನಿವಾರ್ಯ ಇದೆ. ಆರ್ಎಸ್ಎಸ್ ಹಳ್ಳಿಹಳ್ಳಿಗಳಲ್ಲೂ ಕಬಂಧಬಾಹು ಚಾಚುತ್ತಿದೆ. ಇಂತಹ ಸಮಯದಲ್ಲಿ ಸಂಘಪರಿವಾರದ ಆಶಯಗಳಿಗೆ ವಿರುದ್ಧವಾಗಿ ಯುವ ಜನರಲ್ಲಿ ಜಾತ್ಯತೀತ ಮನೋಭಾವವನ್ನು ಬಿತ್ತಲು ತರಬೇತಿ ಕೇಂದ್ರ ಆರಂಭಿಸುತ್ತಿದ್ದೇವೆ’ ಎನ್ನುತ್ತಾರೆ ತರಬೇತಿ ಅಕಾಡೆಮಿ ಮತ್ತು ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರೂ ಆಗಿರುವ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್.

ದೇಶದ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಹೋರಾಟ ನಡೆಸಿದೆ. ಪಕ್ಷದ ಹಲವು ನಾಯಕರು ಹುತಾತ್ಮರಾಗಿದ್ದಾರೆ. ಸ್ವತಂತ್ರ ಭಾರತದ ಬಡತನ ನಿವಾರಣೆ, ಅಭಿವೃದ್ಧಿಗೆ ಪಕ್ಷ ಸಾಕಷ್ಟು ಕೊಡುಗೆ ನೀಡಿದೆ. ಎಂತಹ ಸಮಯದಲ್ಲೂ ಸಂವಿಧಾನದ ಆಶಯಗಳನ್ನು ಬಿಟ್ಟುಕೊಟ್ಟಿಲ್ಲ. ಆದರೆ, ಪ್ರಸ್ತುತ ಸನ್ನಿವೇಶದಲ್ಲಿ ಸೌಹಾರ್ದ, ಸಹಿಷ್ಣುತೆ ಮಾಯವಾಗುತ್ತಿದೆ. ಯುವಕರ ಮನಸ್ಸನ್ನು ಪರಿವರ್ತಿಸುವ ಅಗತ್ಯವಿದೆ. ಅದಕ್ಕಾಗಿ ಪಕ್ಷದ ಮೌಲ್ಯಗಳನ್ನು ಅರ್ಥ ಮಾಡಿಸಲು ಯೋಜನೆ ಸಿದ್ಧಪಡಿಸಲಾಗಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್, ಯುವ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಎನ್ಎಸ್ಯುಐ ಕಾರ್ಯಕರ್ತರ ಜತೆಗೆ, ಅಂಬೇಡ್ಕರ್ವಾದಿಗಳೂ ಸೇರಿದಂತೆ ಆರ್ಎಸ್ಎಸ್, ಬಿಜೆಪಿ ವಿರೋಧಿಸುವ ಎಲ್ಲರಿಗೂ ತರಬೇತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎನ್ನುತ್ತಾರೆ ಹರಿಪ್ರಸಾದ್.

ಹರ್ಡೀಕರ್ ಕರ್ಮಭೂಮಿಯಲ್ಲೇ ಹೊಸ ಕೇಂದ್ರ

ಸ್ವಾತಂತ್ರ್ಯ ಹೋರಾಟಗಾರ ಡಾ.ನಾರಾಯಣ ಸುಬ್ಬರಾವ್ ಹರ್ಡೀಕರ್ ಅವರು ಭಾರತ ಸೇವಾ ದಳ ಸ್ಥಾಪಿಸಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಹೊಸ ಸದಸ್ಯರ ಸೇರ್ಪಡೆ ಮಾಡುವಲ್ಲಿ ಈ ಘಟಕ ಮಹತ್ವದ ಪಾತ್ರ ವಹಿಸಿತ್ತು. ಸೇವಾದಳವು ಕಾಂಗ್ರೆಸ್ನ ಕೇಂದ್ರ ಸ್ವಯಂಸೇವಕ ಸಂಸ್ಥೆಯಾಗಿ ಸ್ವಯಂಸೇವಕರಿಗೆ ದೈಹಿಕ ತರಬೇತಿ ನೀಡುತ್ತಾ ಕೋಮು ಸೌಹಾರ್ದವನ್ನು ಉತ್ತೇಜಿಸುತ್ತಿತ್ತು. ಸಂಸ್ಥೆಯ ಸಂಸ್ಥಾಪಕರಾದ ಹರ್ಡೀಕರ್ ಅವರು ಘಟಪ್ರಭಾದಲ್ಲಿ ಕರ್ನಾಟಕ ಆರೋಗ್ಯ ಸಂಸ್ಥೆ ಸ್ಥಾಪಿಸಿ ಅಲ್ಲೇ ನೆಲೆನಿಂತು ಜನರ ಸೇವೆ ಮಾಡಿದರು. ಅವರ ನಿಧನದ ನಂತರ ಕರ್ನಾಟಕ ಆರೋಗ್ಯ ಸಂಸ್ಥೆ ಆವರಣದಲ್ಲೇ ಸಮಾಧಿ ಮಾಡಲಾಗಿದೆ. ಹಾಗಾಗಿ ಜಾತ್ಯತೀತ ಮೌಲ್ಯಗಳನ್ನು ಬಿತ್ತುವ ತರಬೇತಿ ಸಂಸ್ಥೆಯನ್ನು ಅದೇ ಆವರಣದ ಪ್ರತ್ಯೇಕ ಜಾಗದಲ್ಲಿ ಆರಂಭಿಸಲಾಗಿದೆ ಎನ್ನುತ್ತಾರೆ ಹರಿಪ್ರಸಾದ್.

ವರ್ಷಕ್ಕೆ 12 ತರಬೇತಿ ಶಿಬಿರ

ನೂತನ ತರಬೇತಿ ಕೇಂದ್ರದ ನಿರ್ಮಾಣಕ್ಕೆ ವಿಧಾನಪರಿಷತ್ ಸಮಸ್ಯ ಬಿ.ಕೆ.ಹರಿಪ್ರಸಾದ್ ತಮ್ಮ ಶಾಸಕರ ನಿಧಿಯಲ್ಲಿ ₹1 ಕೋಟಿಗೂ ಅಧಿಕ ಅನುದಾನ ವಿನಿಯೋಗಿಸಿದ್ದಾರೆ. ಕಾಂಗ್ರೆಸ್ನ ಹಲವು ಸದಸ್ಯರು ಅನುದಾನ ನೀಡಿದ್ದಾರೆ. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ವಿಶ್ವ ಸುಸಜ್ಜಿತ ಸಭಾಂಗಣ ವಸತಿ ಗೃಹಗಳು ಊಟದ ಸಭಾಂಗಣ ಸೇರಿದಂತೆ ಹಲವು ವಿಭಾಗಗಳನ್ನು ತರಬೇತಿ ಕೇಂದ್ರದ ಸಮುಚ್ಛಯ ಒಳಗೊಂಡಿದೆ. ಪ್ರತಿ ವರ್ಷ ಕನಿಷ್ಠ 12 ತರಬೇತಿ ಶಿಬಿರಗಳನ್ನು ಆಯೋಜಿಸಲು ಸಂಘಟಕರು ನಿರ್ಧರಿಸಿದ್ದಾರೆ. ಮಾನವ ಬಂಧುತ್ವ ವೇದಿಕೆ ಸಾಥ್ ನೀಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.