ಬೆಂಗಳೂರು: ‘ಎರಡನೇ ವರ್ಷದ ಎಂಜಿನಿಯರಿಂಗ್ ಕೋರ್ಸ್ ಅಥವಾ ಮೂರನೇ ಸೆಮಿಸ್ಟರ್ಗೆ ನೇರ ಪ್ರವೇಶ ಕಲ್ಪಿಸುವ ಡಿಸಿಇಟಿ-25 ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಗುರುವಾರ (ಜುಲೈ 24) ಆರಂಭವಾಗಿದೆ. ಕಾಲೇಜಿಗೆ ವರದಿ ಮಾಡಿಕೊಳ್ಳಲು ಇದೇ 30 ಕೊನೆ ದಿನ’ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.

ಅಭ್ಯರ್ಥಿಗಳು ಅವಶ್ಯವಿದ್ದಲ್ಲಿ ತಮ್ಮ ಆಯ್ಕೆಗಳನ್ನು (ಇಚ್ಛೆ) ಬದಲಿಸಿಕೊಳ್ಳಲು 26ರ ಬೆಳಿಗ್ಗೆ 11ಗಂಟೆವರೆಗೆ ಅವಕಾಶ ನೀಡಲಾಗಿದೆ. ಅಂದು ರಾತ್ರಿ 8 ಗಂಟೆಗೆ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶ ಪ್ರಕಟಿಸಲಾಗುವುದು. ಶುಲ್ಕ ಪಾವತಿ ಮತ್ತು ಸೀಟು ಖಾತರಿ ಚೀಟಿ ಡೌನ್ಲೋಡ್ ಮಾಡಿಕೊಳ್ಳಲು 28ರಂದು ಮಧ್ಯಾಹ್ನ 1ರಿಂದ 30ರ ಸಂಜೆ 4ಗಂಟೆವರೆಗೆ ಅವಕಾಶ ನೀಡಲಾಗಿದೆ. 30ರಂದು 6ಗಂಟೆಯ ಒಳಗೆ ಕಾಲೇಜಿಗೆ ವರದಿ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ಎಂ.ಇ, ಎಂ.ಟೆಕ್: ಪ್ರಸಕ್ತ ಸಾಲಿನಲ್ಲಿ ಎಂ.ಇ, ಎಂ.ಟೆಕ್ ಆಯ್ದ ಕೋರ್ಸ್ಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಜುಲೈ 28ರಂದು ದಾಖಲೆ ಪರಿಶೀಲನೆಗೆ ಪದವಿ ಪರೀಕ್ಷೆಯ ಎಲ್ಲ ಸೆಮಿಸ್ಟರ್ (ವರ್ಷಗಳ) ಅಂಕಪಟ್ಟಿಗಳು ಮತ್ತು ಇತರೆ ಮೂಲ ದಾಖಲೆಗಳೊಂದಿಗೆ ಕೆಇಎ ಕಚೇರಿಗೆ ಹಾಜರಾಗಬೇಕು.

ಜೈವಿಕ ತಂತ್ರಜ್ಞಾನ, ಕೆಮಿಕಲ್ ಎಂಜಿನಿಯರಿಂಗ್, ಪರಿಸರ ಎಂಜಿನಿಯರಿಂಗ್, ಪಾಲಿಮರ್ ವಿಜ್ಞಾನ ಮತ್ತು ಜವಳಿ ತಂತ್ರಜ್ಞಾನ ಮತ್ತು ವಾಸ್ತುಶಿಲ್ಪ ಕೋರ್ಸ್ಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ದಾಖಲೆಗಳ ಪರಿಶೀಲನೆಯು ಅಂದು ಬೆಳಿಗ್ಗೆ 11.30ರಿಂದ ಮಧ್ಯಾಹ್ನ 2ರವರೆಗೆ ನಡೆಯಲಿದೆ ಎಂದು ಪ್ರಸನ್ನ ತಿಳಿಸಿದ್ದಾರೆ.

ಪರಿಶೀಲನೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಮಾತ್ರ ಪದವಿ ಪರೀಕ್ಷೆಯಲ್ಲಿ ಪಡೆದಿರುವ ಅಂಕಗಳನ್ನು ಪರಿಗಣಿಸಿ ನಿಯಮಾನುಸಾರ ರ್ಯಾಂಕ್ ನೀಡಲಾಗುವುದು. ಎಂ.ಆರ್ಕಿಟೆಕ್ಟರ್ ಕೋರ್ಸ್ಗೆ ಅರ್ಜಿ ಹಾಕಿರುವ ಅಭ್ಯರ್ಥಿಗಳು ಪಿಜಿಸಿಇಟಿ-2025ರಲ್ಲಿ ಪಡೆದಿರುವ ಅಂಕಪಟ್ಟಿಯನ್ನು ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ತಿದ್ದುಪಡಿ ಅವಕಾಶ: ಪಿಜಿಸಿಇಟಿ-2025ಕ್ಕೆ ಆನ್ಲೈನ್ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿನ ಮಾಹಿತಿಯನ್ನು ಅರ್ಹತೆಗೆ ಅನುಗುಣವಾಗಿ ಬದಲಿಸಲು ಇದೇ 27ರವರೆಗೆ ಅವಕಾಶ ನೀಡಲಾಗುವುದು. ಮಾಹಿತಿಗಳನ್ನು ಬದಲಿಸಲು ಮುಂದಾಗುವ ಮೊದಲು ಅರ್ಜಿಯಲ್ಲಿ ಮುದ್ರಿತವಾಗಿರುವ ಮಾಹಿತಿಯನ್ನು ಕೂಲಂಕಷವಾಗಿ ಪರಿಶೀಲಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.