ಮಡಿಕೇರಿ: ನೈಸರ್ಗಿಕವಾಗಿ ಸ್ವಾದಭರಿತ ಕಾಫಿ ಬೆಳೆಸುವತ್ತ ಬೆಳೆಗಾರರು ಗಮನ ಹರಿಸಬೇಕು ಎಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ.ಸಿ.ಜಿ.ಕುಶಾಲಪ್ಪ ಕರೆ ನೀಡಿದರು.

ನಗರದ ಹೊರವಲಯದಲ್ಲಿನ ಕ್ಯಾಪಿಟಲ್ ರೆಸಾರ್ಟ್‌ನಲ್ಲಿ ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘಧ 18ನೇ ವಾಷಿ೯ಕ ಮಹಾಸಭೆಯಲ್ಲಿ ಮಾತನಾಡಿದ ಅವರು, ‘ವಿಯೆಟ್ನಾಂ, ಬ್ರಿಜೆಲ್ ದೇಶಗಳು ಬೃಹತ್ ಪ್ರಮಾಣದಲ್ಲಿ ಕಾಫಿಯ ಉತ್ಪಾದನೆ ಮಾಡಿದರೂ ಕೂಡ ಕಾಫಿ ಕೃಷಿಗೆ ಹೂಡಿಕೆ ಮಾಡಿದ ಮೂಲ ಬಂಡವಾಳವೇ ಅವರ ಕೈಗೆ ಎಟುಕುತ್ತಿಲ್ಲ. ಆ ದೇಶಗಳಲ್ಲಿ ಕಾಫಿ ಕೖಷಿಗೆ ಅತ್ಯಧಿಕ ಪ್ರಮಾಣದಲ್ಲಿ ರಾಸಾಯನಿಕಗಳ ಬಳಕೆ ಮಾಡುತ್ತಿರುವುದೇ ಇದಕ್ಕೆ ಕಾರಣ’ ಎಂದು ಹೇಳಿದರು.

ಕೊಡಗಿನ ಕಾಫಿ ಬೆಳೆಗಾರರು ಕೂಡ ರಾಸಾಯನಿಕಗಳ ಬಳಕೆಯನ್ನು ಕಡಿಮೆ ಮಾಡಿ ನೈಸರ್ಗಿಕವಾಗಿ ಕಾಫಿ ಕೃಷಿಯಲ್ಲಿ ತೊಡಗಬೇಕು. ಕೊಡಗು ಜಿಲ್ಲೆಯಲ್ಲಿ ನೈಸರ್ಗಿಕ ಅರಣ್ಯದಿಂದ ಆವೃತವಾದ ಪ್ರದೇಶಗಳಲ್ಲಿ ಕಾಫಿಯನ್ನು ಬೆಳೆಯುತ್ತಿದ್ದು, 360 ತಳಿಯ ವೈವಿಧ್ಯಮಯ ಮರಗಳು ಕೊಡಗಿನ ಕಾಫಿ ತೋಟಗಳಲ್ಲಿವೆ. ಇದರಿಂದ ವಿಶ್ವ ಗುಣಮಟ್ಟದ ಕಾಫಿಯನ್ನು ಬೆಳೆಯಲು ಕೊಡಗಿನ ಕಾಫಿ ಬೆಳೆಗಾರರಿಗೆ ಸಾಧ್ಯವಾಗಲಿದೆ. ಈ ರೀತಿಯಾಗಿ ಬೆಳೆಯುವ ಕಾಫಿಗೆ ವಿಶ್ವ ಮಾನ್ಯತೆಯೂ ಇದ್ದು, ಉತ್ತಮ ಬೆಲೆಯೂ ದೊರಕಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾಫಿ ಬೆಳೆಗಾರರು ಕಾಫಿ ಗಿಡದಿಂದ ಕಾಫಿ ಕಪ್‌ನವರೆಗೂ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದೂ ಕುಶಾಲಪ್ಪ ಸಲಹೆ ನೀಡಿದರು.

ಕಾಫಿ ಮಂಡಳಿಯ ಗುಣಮಟ್ಟ ತಜ್ಞ ವಿಕ್ರಂ ಕುಟ್ಟಯ್ಯ ಮಾತನಾಡಿ, ಎಲ್ಲಾ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗುತ್ತಲೇ ಇದ್ದರೂ ವಾಣಿಜ್ಯ ಬೆಳೆಯಾದ ಕಾಫಿ ಫಸಲಿನ ಬೆಲೆಯಲ್ಲಿ ಕಳೆದ 25 ವಷ೯ಗಳಲ್ಲಿ ಯಾವುದೇ ಗಮನಾರ್ಹ ಏರಿಕೆಯಾಗದೇ ಇರುವುದು ಬೆಳೆಗಾರರು ಚಿಂತಿಸಲೇಬೇಕಾದ ವಿಚಾರವಾಗಿದೆ ಎಂದು ಹೇಳಿದರು.

ವಿಶ್ವದ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಕಾಫಿಯ ಬೆಲೆ ನಿರೀಕ್ಷಿತ ಪ್ರಮಾಣದಲ್ಲಿ ಹೆಚ್ಚದೇ ಇರುವುದು ಕಳವಳಕಾರಿಯಾಗಿದೆ. 25 ವರ್ಷಗಳ ಹಿಂದೆ ಅರೇಬಿಕಾ ಕಾಫಿ ತೋಟ ನಿವ೯ಹಣೆಗೆ ₹ 25 ಸಾವಿರ ಇದ್ದದ್ದು ಈಗ ₹ 80 ಸಾವಿರಕ್ಕೆ ತಲುಪಿದೆ. ರೋಬಸ್ಟಾ ಕಾಫಿ ನಿರ್ವಹಣೆ ₹ 15 ಸಾವಿರ ಇದ್ದದ್ದು ಈಗ ₹ 60 ಸಾವಿರಕ್ಕೆ ಹೆಚ್ಚಾಗಿದೆ. ಚಿನ್ನದ ಬೆಲೆ ₹ 9 ಸಾವಿರನಿಂದ ₹ 50 ಸಾವಿರ ಏರಿಕೆಯಾಗದೆ. ಹೀಗಿದ್ದರೂ ಕಾಫಿಯ ಬೆಲೆ ಮಾತ್ರ 25 ವಷ೯ಗಳಲ್ಲಿ ಹೆಚ್ಚಿನ ಏರಿಕೆಯಾಗಲೇ ಇಲ್ಲ. ಕಾಫಿ ಕೖಷಿ ತೋಟ ನಿರ್ವಹಣೆ ವೆಚ್ಚ ಮತ್ತು ಅದರಿಂದ ಬರುವ ಆದಾಯದ ಹೋಲಿಕೆಯಲ್ಲಿ ತಾಳಮೇಳವೇ ಇಲ್ಲದಂಥ ದುಸ್ಥಿತಿಯಿದೆ ಎಂದೂ ವಿಕ್ರಂ ಕುಟ್ಟಯ್ಯ ವಿಶ್ಲೇಷಿಸಿದರು.

ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದ ಅಧ್ಯಕ್ಷೆ ಪಂದಿಕುತ್ತೀರ ಚಿತ್ರಾ ಸುಬ್ಬಯ್ಯ ಮಾತನಾಡಿ, ತಮ್ಮ ಸಂಘವು ಸತತ 18 ವರ್ಷಗಳಿಂದ ಕಾಫಿಯ ಮಹತ್ವದ ಬಗ್ಗೆ ಹಲವೆಡೆ ತಿಳಿವಳಿಕೆ ಮೂಡಿಸುವ ಕಾಯ೯ದಲ್ಲಿ ಸಕ್ರಿಯವಾಗಿದೆ. ಮಹಿಳೆಯರ ಈ ಸಂಘ ವಿಶಿಷ್ಟ ಕಾಯ೯ ಚಟುವಟಿಕೆಗಳಿಗೆ ಹೆಸರಾಗಿದೆ. ಯುವತಿಯರೂ ಹೆಚ್ಚಿನ ಸಂಖ್ಯೆಯಲ್ಲಿ ಸಂಘವನ್ನು ಸದಸ್ಯೆಯರಾಗಿ ಸೇಪ೯ಡೆಯಾಗುತ್ತಿರುವುದು ಕಾಫಿ ಉದ್ಯಮಕ್ಕೆ ಆಶಾಭಾವನೆ ಮೂಡಿಸುವಂತಿದೆ ಎಂದರು.

18 ವರ್ಷಗಳ ಸತತ ಕಾಯ೯ ಚಟುವಟಿಕೆಯ ಮಹಿಳಾ ಕಾಫಿ ಜಾಗೖತಿ ಸಂಘವು ಮುಂದಿನ ದಿನಗಳಲ್ಲಿ ಯಾವುದೇ ಕಾರಣಗಳಿಂದಲ್ಲೂ ತನ್ನ ಉದ್ದೇಶಗಳಿಂದ ವಿಮುಖವಾಗಬಾರದು ಎಂದು ಕಿವಿಮಾತು ಹೇಳಿದ ಚಿತ್ರಾಸುಬ್ಬಯ್ಯ, ಎಂಥ ಸವಾಲುಗಳು, ಅಡೆತಡೆಗಳು ಎದುರಾದರೂ ಮಹಿಳೆಯರು 18 ವರ್ಷಗಳಂತೆಯೇ ಕಾಫಿಗೆ ಆದ್ಯತೆ ನೀಡುವ ಕ್ರಿಯಾಶೀಲ ಸಂಘದಲ್ಲಿ ತೊಡಗಿಸಿಕೊಳ್ಳುವಂತೆಯೂ ಅವರು ಕರೆ ನೀಡಿದರು.

ಸಂಘದ ಪ್ರಧಾನ ಕಾಯ೯ದರ್ಶಿ ಅಪ್ಪನೆರವಂಡ ಅನಿತಾ ನಂದ, ಜಂಟಿ ಕಾಯ೯ದಶಿ೯ ಮುಕ್ಕಾಟೀರ ಜ್ಯೋತಿಕಾ ಬೋಪಣ್ಣ ಸೇರಿದಂತೆ ಸಂಘದ ನಿದೇ೯ಶಕಿಯರು ಪಾಲ್ಗೊಂಡಿದ್ದರು.

ತೇಲಪಂಡ ಶರಿನ್ ನಂಜಪ್ಪ ಪ್ರಾಥಿ೯ಸಿದರು. ಬಲ್ಲನಮಾಡ ರೀಟಾ ವಂದಿಸಿದರು. ಕಾಫಿ ಸೇವನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ 18 ವರ್ಷಗಳ ಹಿಂದೆ ಕೊಡಗಿನಲ್ಲಿ ಪ್ರಾರಂಭವಾದ ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದ ವಾಷಿ೯ಕ ಮಹಾಸಭೆಯಲ್ಲಿ ಜಿಲ್ಲೆಯ ಹಲವೆಡೆಗಳಿಂದ ಬಂದಿದ್ದ ನೂರಾರು ಸದಸ್ಯೆಯರು ಪಾಲ್ಗೊಂಡು ಮುಂದಿನ ದಿನಗಳಲ್ಲಿ ಕಾಫಿ ಸೇವನೆ ಸಂಬಂಧಿತ ಜಾಗೃತಿ ಮೂಡಿಸಲು ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.