ಬೆಂಗಳೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಮುಂದಿನ ಐದು ವರ್ಷಗಳ ಅವಧಿಗೆ ನಿರ್ದೇಶಕ ಮಂಡಳಿಯ ಆಯ್ಕೆಗೆ ಭಾನುವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡರ ನೇತೃತ್ವದ ತಂಡದ ಎಲ್ಲ 14 ಅಭ್ಯರ್ಥಿಗಳು ಜಯಶಾಲಿಯಾಗಿದ್ದಾರೆ.

ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಹಕಾರ ಮಹಾಮಂಡಳದ ಕಚೇರಿಯಲ್ಲಿ ಸಂಜೆ 4 ಗಂಟೆವರೆಗೆ ಚುನಾವಣೆ ನಡೆದು, ಬಳಿಕ ಫಲಿತಾಂಶ ಪ್ರಕಟಿಸಲಾಯಿತು. 29 ಜಿಲ್ಲಾ ಯೂನಿಯನ್‌ಗಳಿಂದ 13 ಸ್ಥಾನಗಳಿಗೆ ಒಟ್ಟು 26 ಅಭ್ಯರ್ಥಿಗಳು ಕಣದಲ್ಲಿದ್ದರು. ಇತರ ವಲಯದಿಂದ ಒಂದು ಸ್ಥಾನಕ್ಕೆ ನಡೆದ ಚುನಾವಣೆಗೆ ನಾಲ್ವರು ಸ್ಪರ್ಧಿಸಿದ್ದರು.

ಆಯ್ಕೆಯಾದವರು: ಮೈಸೂರು ವಿಭಾಗ (ಮೂರು ಸ್ಥಾನಗಳು)– ಜಿ.ಟಿ. ದೇವೇಗೌಡ, ಬಿ.ಸಿ. ಲೋಕಪ್ಪ ಗೌಡ ಮತ್ತು ಜಯಕರ ಶೆಟ್ಟಿ ಬಿ. ಇಂದ್ರಾಳಿ. ಬೆಂಗಳೂರು ವಿಭಾಗ (ನಾಲ್ಕು ಸ್ಥಾನಗಳು)– ಎಚ್. ಎನ್. ಅಶೋಕ್, ಎ .ಸಿ. ನಾಗರಾಜ್, ರಾಮಿರೆಡ್ಡಿ ಮತ್ತು ಬಿ.ಡಿ. ಭೂ ಕಾಂತ.

ಬೆಳಗಾವಿ ವಿಭಾಗ (ಮೂರು ಸ್ಥಾನಗಳು)– ಜಗದೀಶ ಮಲ್ಲಿಕಾರ್ಜುನ ಕವಟಗಿಮಠ, ಈರಣ್ಣ ಪಟ್ಟಣ ಶೆಟ್ಟಿ ಮತ್ತು ಬಸವರಾಜ ನೀ. ಅರಬಗೊಂಡ. ಕಲಬುರ್ಗಿ ವಿಭಾಗ (ಮೂರು ಸ್ಥಾನಗಳು)– ಶೇಖರ ಗೌಡ ಪಾಟೀಲ, ಉಮಾಕಾಂತ ನಾಗಮಾರಪಳ್ಳಿ ಮತ್ತು ಜೆ. ಎಂ. ಶಿವಪ್ರಸಾದ್. ಇತರೆ ಸಹಕಾರ ಸಂಘಗಳ ಕ್ಷೇತ್ರ– ಗದಿಗೆಪ್ಪ ಗೌಡ ಪಾಟೀಲ

ಚುನಾಯಿತ ನಿರ್ದೇಶಕರನ್ನು ಮಹಾ ಮಂಡಳದ ಆಡಳಿತಾಧಿಕಾರಿ ವೈ.ಎಚ್. ಗೋಪಾಲಕೃಷ್ಣ. ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್. ಅರುಣ್ ಕುಮಾರ್. ಕಾರ್ಯದಶಿ೯ ಲಕ್ಷ್ಮೀ ಪತಯ್ಯ, ಚುನಾವಣಾಧಿಕಾರಿ ಸತೀಶ್ ಚಂದ್ರ ಅಭಿನಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.