ರಾಮನಗರ: ಕನಕಪುರ ತಾಲ್ಲೂಕಿನ ನಾರಾಯಣಪುರ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ವಾಕಿಂಗ್‌ಗೆ ತೆರಳಿದ್ದ ವೇಳೆ ಆನೆ ತುಳಿದು ಚೇತನ್ ಕುಮಾರ್ (25) ಎಂಬ ಯುವಕ ಮೃತಪಟ್ಟಿದ್ದಾನೆ.

ಟಿ. ಬೇಕುಪ್ಪೆ ನಿವಾಸಿಯಾದ ಅವರು ಮುಂಜಾನೆ ಐದರ ಸುಮಾರಿಗೆ ಕೋಡಿಹಳ್ಳಿ ಮುಖ್ಯರಸ್ತೆಯಲ್ಲಿ ಸ್ನೇಹಿತರ ಜೊತೆಗೂಡಿ ವಾಕಿಂಗ್‌ಗೆ ಹೋಗಿದ್ದರು. ಉಳಿದ ಇಬ್ಬರು ಸ್ನೇಹಿತರು ಮುಂದೆ ಹೋಗಿದ್ದು, ಇವರು ಹಿಂದೆ ಸಾಗುತ್ತಿದ್ದ ವೇಳೆ ಆನೆ ದಿಢೀರ್ ದಾಳಿ ನಡೆಸಿತು. ತುಳಿತಕ್ಕೆ ಸಿಕ್ಕ ಚೇತನ್ ಸ್ಥಳದಲ್ಲೇ ಅಸುನೀಗಿದ್ದಾರೆ.

ಸುಮಾರು ಹೊತ್ತಾದರೂ ಗೆಳೆಯ ಜೊತೆಗೆ ಬಾರದಿದ್ದ ಕಾರಣ ಆತಂಕಗೊಂಡ ಸ್ನೇಹಿತರು ಚೇತನ್ ಮೊಬೈಲ್‌ಗೆ ಕರೆ ಮಾಡಿದರು. ಆತ ಕರೆ ಸ್ವೀಕರಿಸದೇ ಇದ್ದಾಗ ಹಿಂದಕ್ಕೆ ಬಂದು ಹುಡುಕಿದರು. ಈ ವೇಳೆ ಚೇತನ್ ಶವ ಪತ್ತೆಯಾಯಿತು.

ಅರಣ್ಯಾಧಿಕಾರಿಗಳು ಹಾಗೂ ಕನಕಪುರ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.