ಸಿ.ಡಿ ಪ್ರದರ್ಶಿಸಿದ ಅಶೋಕ; ಕಡತ ತಂದ ಮುನಿರತ್ನ!
‘ಅಬಕಾರಿ ಇಲಾಖೆ ಭ್ರಷ್ಟಾಚಾರದ ಕುರಿತು ಅಧಿಕಾರಿಗಳು ಮಾತನಾಡಿರುವ ಮೂರು ಆಡಿಯೊಗಳು ನನ್ನ ಬಳಿ ಇವೆ’ ಎಂದ ಆರ್.ಅಶೋಕ ಅವರು ಪೆನ್‌ಡ್ರೈವ್‌ಗಳನ್ನು ಪ್ರದರ್ಶಿಸಿದರು. ‘ಇದೇ ವಿಷಯದ ಕುರಿತಂತೆ ಕಡತಗಳ ಎರಡು ದೊಡ್ಡ ಕಟ್ಟುಗಳನ್ನು ಹೊತ್ತು ತಂದಿದ್ದ ಬಿಜೆಪಿಯ ಮುನಿರತ್ನ ಅವರು ತಮ್ಮ ಬಳಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಕಡತಗಳಿವೆ ಮಾತನಾಡಲು ಅವಕಾಶ ನೀಡಿ’ ಎಂದು ಅವರು ಸಭಾಧ್ಯಕ್ಷರನ್ನು ಕೋರಿದರು. ಸಚಿವರು ಉತ್ತರ ನೀಡುವಾಗ ಅವಕಾಶ ನೀಡುವುದಾಗಿ ಭರವಸೆ ನೀಡಿದರು.