ಕಬ್ಬಿಗೆ ನ್ಯಾಯಸಮ್ಮತ ಹಾಗೂ ಲಾಭದಾಯಕ ದರ ನೀಡುವಂತೆ ರಾಜ್ಯದ ವಿವಿಧೆಡೆ ರೈತರು ಆರಂಭಿಸಿರುವ ಹೋರಾಟ ತೀವ್ರ ಸ್ವರೂಪ ಪಡೆದಿದೆ. ಪ್ರತಿ ಟನ್ ಕಬ್ಬಿಗೆ ₹3,500 ದರ ನೀಡುವಂತೆ ರೈತರು ನಡೆಸುತ್ತಿರುವ ಈ ಹೋರಾಟ ಸಕ್ಕರೆ ಜಿಲ್ಲೆ ಎಂದೇ ಹೆಸರಾದ ಬೆಳಗಾವಿಯಲ್ಲಂತೂ ಹೆಚ್ಚು ಕಾವು ಪಡೆದಿದೆ. ಕೇಂದ್ರ ಸರ್ಕಾರ ಕಬ್ಬಿಗೆ ₹3,550 ನ್ಯಾಯಯುತ ಮತ್ತು ಲಾಭದಾಯಕ ಬೆಲೆ ಅಂದ್ರೆ, ಎಫ್ಆರ್ಪಿ ನಿಗದಿ ಮಾಡಿದೆ. ಅದರೆ, ರಾಜ್ಯದ ಯಾವೊಂದು ಕಾರ್ಖಾನೆಯೂ ಈ ದರವನ್ನು ಈವರೆಗೆ ನೀಡಿಲ್ಲ. ಮಹಾರಾಷ್ಟ್ರದಲ್ಲಿ ₹3,410 ದರ ನಿಗದಿ ಮಾಡಲಾಗಿದೆ. ಹೀಗಾಗಿ, ಗಡಿ ಭಾಗದ ಸುಮಾರು 10 ಲಕ್ಷ ಟನ್ನಷ್ಟು ಕಬ್ಬು ಮಹಾರಾಷ್ಟ್ರಕ್ಕೆ ಸಾಗಣೆ ಆಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.