ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಲು ಸಾಲು ಹಬ್ಬ: ರಾಜ್ಯದ ವಿವಿಧೆಡೆ 22 ವಿಶೇಷ ರೈಲು ಸಂಚಾರ

Published 5 ಸೆಪ್ಟೆಂಬರ್ 2024, 0:28 IST
Last Updated 5 ಸೆಪ್ಟೆಂಬರ್ 2024, 0:28 IST
ಅಕ್ಷರ ಗಾತ್ರ

ಬೆಂಗಳೂರು: ಗಣೇಶ ಚತುರ್ಥಿ, ದಸರಾ, ದೀಪಾವಳಿ ಹಬ್ಬಗಳ ಸಮಯದಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ರಾಜ್ಯದ ವಿವಿಧೆಡೆ ಒಟ್ಟು 22 ವಿಶೇಷ ರೈಲುಗಳನ್ನು ಕಾರ್ಯಾಚರಣೆ ನಡೆಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ.

ಗೌರಿ–ಗಣೇಶ ಹಬ್ಬದ ಪ್ರಯುಕ್ತ ಬೆಂಗಳೂರು ಎಸ್‌ಎಂವಿಟಿಯಿಂದ ಕಲಬುರಗಿಗೆ ಸೆಪ್ಟೆಂಬರ್‌ 5, 6 ಮತ್ತು 7ರಂದು ರಾತ್ರಿ 9.15ಕ್ಕೆ ವಿಶೇಷ ರೈಲು ಹೊರಡಲಿದೆ. ಸೆ.6, 7 ಮತ್ತು 8ರಂದು ರಾತ್ರಿ 9.35ಕ್ಕೆ ಕಲಬುರಗಿಯಿಂದ ಎಸ್‌ಎಂವಿಟಿಗೆ ರೈಲು ಹೊರಡಲಿದೆ.

ದಸರಾ ಹಬ್ಬದ ಸಮಯದಲ್ಲಿ ಬೆಂಗಳೂರು ಎಸ್‌ಎಂವಿಟಿಯಿಂದ ವಿಜಯಪುರಕ್ಕೆ ಅಕ್ಟೋಬರ್‌ 9 ಮತ್ತು 12ರಂದು ಸಂಜೆ 7ಕ್ಕೆ ಹಾಗೂ ವಿಜಯಪುರದಿಂದ ಬೆಂಗಳೂರಿಗೆ ಅ.10 ಮತ್ತು 13ರಂದು ಸಂಜೆ 7ಕ್ಕೆ ವಿಶೇಷ ರೈಲುಗಳು ಹೊರಡಲಿವೆ. ಯಶವಂತಪುರದಿಂದ ಬೆಳಗಾವಿಗೆ ಅ.9 ಮತ್ತು ಅ.12ರಂದು ಸಂಜೆ 6.15ಕ್ಕೆ, ಬೆಳಗಾವಿಯಿಂದ ಯಶವಂತಪುರಕ್ಕೆ ಅ.10 ಮತ್ತು ಅ.13ರಂದು ಸಂಜೆ 5.30ಕ್ಕೆ ವಿಶೇಷ ರೈಲುಗಳು ಹೊರಡಲಿವೆ. 

ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್‌) ನಿಲ್ದಾಣದಿಂದ ಮೈಸೂರಿಗೆ ಅ.9ರಿಂದ 13ರವರೆಗೆ ಮಧ್ಯಾಹ್ನ 12.15ಕ್ಕೆ ಹಾಗೂ ಅ.10ರಿಂದ 14ರವರೆಗೆ ರಾತ್ರಿ 3ಕ್ಕೆ ವಿಶೇಷ ರೈಲುಗಳು ಇರಲಿವೆ. ಮೈಸೂರಿನಿಂದ ಕೆಎಸ್‌ಆರ್‌ ಬೆಂಗಳೂರಿಗೆ ಅ.9ರಿಂದ 13ರವರೆಗೆ ರಾತ್ರಿ 11.15 ಮತ್ತು ರಾತ್ರಿ 3.30ಕ್ಕೆ ವಿಶೇಷ ರೈಲುಗಳು ಇರಲಿವೆ. ಮೈಸೂರಿನಿಂದ ಚಾಮರಾಜನಗರಕ್ಕೆ ಅ.9ರಿಂದ 13ರವರೆಗೆ ರಾತ್ರಿ 11.30ಕ್ಕೆ ಹಾಗೂ ಅ.12ರಂದು ರಾತ್ರಿ 9.15ಕ್ಕೆ ವಿಶೇಷ ರೈಲುಗಳು ಸಂಚರಿಸಲಿವೆ. ಚಾಮರಾಜನಗರದಿಂದ ಮೈಸೂರಿಗೆ ಆ.10ರಿಂದ 14ರವರೆಗೆ ಬೆಳಿಗ್ಗೆ 5ಕ್ಕೆ ಹಾಗೂ ಅ.12ರಂದು ರಾತ್ರಿ 11.30ಕ್ಕೆ ವಿಶೇಷ ರೈಲುಗಳು ಇರಲಿವೆ.

ದೀಪಾವಳಿ ಹಬ್ಬದ ಸಮಯದಲ್ಲಿ ಅಕ್ಟೋಬರ್‌ 30 ಮತ್ತು ನವೆಂಬರ್ 2ರಂದು ಸಂಜೆ 6ಕ್ಕೆ ಮೈಸೂರಿನಿಂದ ವಿಜಯಪುರಕ್ಕೆ ವಿಶೇಷ ರೈಲು ಹೊರಡಲಿದೆ. ಅಕ್ಟೋಬರ್‌ 31 ಮತ್ತು ನವೆಂಬರ್‌ 3ರಂದು ಮಧ್ಯಾಹ್ನ 2.20ಕ್ಕೆ ವಿಜಯಪುರದಿಂದ ಮೈಸೂರಿಗೆ ವಿಶೇಷ ರೈಲು ಹೊರಡಲಿದೆ. ಯಶವಂತಪುರದಿಂದ ಬೆಳಗಾವಿಗೆ ಅ.30 ಮತ್ತು ನ.1ರಂದು ರಾತ್ರಿ 7.30ಕ್ಕೆ ಹಾಗೂ ಅ.31 ಮತ್ತು ನ.3ರಂದು ಸಂಜೆ 5.30ಕ್ಕೆ ಬೆಳಗಾವಿಯಿಂದ ಯಶವಂತಪುರಕ್ಕೆ ವಿಶೇಷ ರೈಲುಗಳು ಹೊರಡಲಿವೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT