ಈ ಮೂರೂ ನಗರಗಳಲ್ಲಿ ಪ್ರತಿ ಘನ ಮೀಟರ್ ಗಾಳಿಯಲ್ಲಿ 2.5 ಮೈಕ್ರಾನ್ ಗಾತ್ರದ ಮಾಲಿನ್ಯಕಾರಕ ಕಣಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ
* 10 ಮೈಕ್ರಾನ್ ಗಾತ್ರದ ಮಾಲಿನ್ಯಕಾರಕ ಕಣಗಳ ಸಂಖ್ಯೆಯೂ ವಿಪರೀತ ಎನಿಸುವಷ್ಟು ಏರಿಕೆಯಾಗಿದೆ
* ಮೂರೂ ನಗರಗಳಲ್ಲಿ ನಿರ್ಮಾಣ ಚಟುವಟಿಕೆಗಳಿಂದಲೇ ಅತಿಹೆಚ್ಚು ಮಾಲಿನ್ಯ ಉಂಟಾಗುತ್ತಿದೆ
ಬೆಂಗಳೂರಿಗೆ ನಿರ್ಮಾಣ ಚಟುವಟಿಕೆಯೇ ಕಂಟಕ
2007ರ ವೇಳೆಯಲ್ಲಿ ಬೆಂಗಳೂರಿನ ಗಾಳಿಯ ಗುಣಮಟ್ಟ ಹದಗೆಡಲು ಬಹುದೊಡ್ಡ ಕಾರಣವಾಗಿದ್ದದ್ದು ವಾಹನಗಳಿಂದ ಹೊರಬರುವ ಹೊಗೆ. ಆದರೆ 2020ರ ವೇಳೆಗೆ ಅಧ್ಯಯನ ನಡೆಸಿದಾಗ ನಿರ್ಮಾಣ ಚಟುವಟಿಕೆ ಮತ್ತು ರಸ್ತೆಯಲ್ಲಿನ ದೂಳಿನ ಕಣಗಳಿಂದಲೇ ಗಾಳಿ ಅತಿಹೆಚ್ಚು ಕಲುಷಿತವಾಗುತ್ತಿದೆ. ಈಚಿನ ವರ್ಷಗಳಲ್ಲಿ ತ್ಯಾಜ್ಯ ಸುಡುವುದು ಹೆಚ್ಚಾಗಿರುವುದರಿಂದಲೂ ಗಾಳಿಯ ಗುಣಮಟ್ಟ ಕುಸಿಯುತ್ತಿದೆ ಎಂದು ವರದಿ ಹೇಳಿದೆ