ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video: ಡಿಸಿಎಂ ಶಿವಕುಮಾರ್‌ ಅವರನ್ನು ‘ಸಿಡಿ ಶಿವು’ ಎಂದು ಕರೆದ ಎಚ್‌ಡಿಕೆ

Published 22 ಮೇ 2024, 12:14 IST
Last Updated 22 ಮೇ 2024, 12:14 IST
ಅಕ್ಷರ ಗಾತ್ರ

‘ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 30ರಂದು ಹಾಸನದಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಯು ಸರ್ಕಾರದ ಪ್ರಯೋಜಕತ್ವದ್ದು’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಮೈಸೂರಿನಲ್ಲಿ ಆರೋಪಿಸಿದರು. ಇದೇ ವೇಳೆ ಡಿಕೆ ಶಿವಕುಮಾರ್‌ ಅವರ ಮೇಲೆ ವಾಗ್ದಾಳಿ ನಡೆಸಿದ ಎಚ್‌ಡಿಕೆ ‘ಅಧಿಕಾರ ಯಾರಪ್ಪನ ಆಸ್ತಿಯೂ ಅಲ್ಲ. ರಾಜಕೀಯದಲ್ಲಿ ಏಳು–ಬೀಳು ಇರುತ್ತದೆ. ಇದರಲ್ಲಿ ಅಸೂಯೆ ಏಕೆ? ಪ್ರಧಾನಿ ಸ್ಥಾನವನ್ನೇ ಅತ್ಯಂತ ಸುಲಭವಾಗಿ ಬಿಟ್ಟು ಕೊಟ್ಟು ಬಂದ ವಂಶ ನಮ್ಮದು. ಸಿಡಿ ಶಿವು ಅವರೇ ನಾವು ಅಧಿಕಾರಕ್ಕೋಸ್ಕರ ಹಂಬಲಿಸುವವರಲ್ಲ. ಎಲ್ಲ ಅಧಿಕಾರವನ್ನೂ ನಾವು ನೋಡಿ ಆಗಿದೆ. ನಾವು ಬೇಡ ಎಂದರೂ ಅಧಿಕಾರ ಬಂದಿದೆ; ಬೇಕು ಎಂದಾಗ ಉಳಿದುಕೊಂಡಿಲ್ಲ. ಆದರೆ, ಹುಡುಕಿಕೊಂಡು ಹೋಗಿಲ್ಲ’ ಎಂದು ಶಿವಕುಮಾರ್‌ ಅವರಿಗೆ ತಿರುಗೇಟು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT