ಇತಿಹಾಸ ಸೃಜಿಸಿದ ಸಾರಾ ಸನ್ನಿ
‘ಯಾವುದೇ ಅನುಭವಿ ವಕೀಲರಿಗೆ ಸರಿಸಮಾನವಾಗಿ ತಮ್ಮ ವಾದವನ್ನು ಶಾಂತತೆಯಿಂದ ಮಂಡಿಸಿರುವ ಸಾರಾ ಸನ್ನಿ ಪ್ರತಿ ಅವಮಾನವನ್ನೂ ಧಿಕ್ಕರಿಸಿದ್ದಾರೆ. ಧ್ವನಿ ಅಥವಾ ಸಂಕೇತಗಳ ತೀವ್ರತೆಯನ್ನು ಚಾತುರ್ಯದಿಂದ ಪ್ರಸ್ತುತಪಡಿಸಿದ್ದಾರೆ’ ಎಂದು ನ್ಯಾಯಪೀಠ ಬಣ್ಣಿಸಿದೆ.
‘ಸಂಸ್ಕರಣಗೊಂಡ ವಿಶಿಷ್ಟ ಲಕ್ಷಣದ ವಾದ ಮಂಡನೆಯ ಪ್ರಯತ್ನ ಮತ್ತು ಎಲ್ಲರಿಗೂ ಇದೊಂದು ಶಾಶ್ವತ ಸ್ಫೂರ್ತಿಯಾಗಿ ಉಳಿಯುತ್ತದೆ. ಮಾತ್ರವಲ್ಲ ನ್ಯಾಯವು ತನ್ನ ನಿಜವಾದ ಅರ್ಥದಲ್ಲಿ ಹೇಗಿರುತ್ತದೆ ಎಂಬುದನ್ನು ಅವರ ಈ ಪ್ರಯತ್ನ ನ್ಯಾಯಾಂಗದ ಸ್ಮೃತಿಪಟಲದಲ್ಲಿ ದೇದೀಪ್ಯಮಾನವಾಗಿ ಉಳಿಸುತ್ತದೆ’ ಎಂದು ಹೇಳಿದೆ.
ಡಾ.ವಿ.ಎನ್.ರೇಣುಕಾ ಅವರು ಸಾರಾ ಸನ್ನಿ ಅವರಿಗೆ ಸಂಕೇತ ಭಾಷೆಯ ನೆರವು ನೀಡಿದ್ದರು. ಅರ್ಜಿದಾರ ಪತಿಯ ಪರ ಹೈಕೋರ್ಟ್ ವಕೀಲ ಕೆ.ರವೀಂದ್ರನಾಥ್ ಮತ್ತು ಕೇಂದ್ರ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ ಕಾಮತ್ ಹಾಗೂ ಡೆಪ್ಯುಟಿ ಸಾಲಿಸಿಟರ್ ಜನರಲ್ ಎಚ್.ಶಾಂತಿಭೂಷಣ್ ವಾದ ಮಂಡಿಸಿದ್ದರು.