ಬೆಂಗಳೂರು: ‘ಹಠಾತ್ ಹೃದಯಾಘಾತ, ಹೃದಯಸ್ತಂಭನದಿಂದ ಸಾವು ಸಂಭವಿಸುವುದಕ್ಕೆ ಕೋವಿಡ್ ಮತ್ತು ಕೋವಿಡ್ ಲಸಿಕೆಗಳು ಕಾರಣ ಎಂಬುದಕ್ಕೆ ಪುರಾವೆಗಳಿಲ್ಲ. ಮಧುಮೇಹ, ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳಿಂದ ಹೃದಯಾಘಾತದ ಅಪಾಯ ಹೆಚ್ಚಾಗಿದೆ’ ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಕೆ.ಎಸ್. ರವೀಂದ್ರನಾಥ್ ಅವರ ಅಧ್ಯಕ್ಷತೆಯ ತಜ್ಞರ ಸಮಿತಿ ಹೇಳಿದೆ.

ಯುವಜನರು ಹೃದಯಾಘಾತದಿಂದ ಮೃತಪಡುತ್ತಿರುವ ಪ್ರಕರಣಗಳಿಗೆ ಕೋವಿಡ್ ಹಾಗೂ ಲಸಿಕೆಯ ಅಡ್ಡ ಪರಿಣಾಮಗಳು ಕಾರಣವೇ ಎಂಬುದನ್ನು ಪತ್ತೆ ಮಾಡಲು ರಚಿಸಿದ್ದ ಈ ಸಮಿತಿಯ ಅಧ್ಯಯನ ವರದಿ ಸಿದ್ಧವಾಗಿದೆ. ವರದಿಯನ್ನು ಸೋಮವಾರ ಸರ್ಕಾರಕ್ಕೆ ಸಲ್ಲಿಸಲಾಗುತ್ತಿದೆ.

ಸಂಭಾವ್ಯ ಕಾರಣಗಳು

ಹಠಾತ್ ಹೃದಯಾಘಾತದ ಸಾವುಗಳಿಗೆ ಹಲವು ಅಂಶಗಳು ಕಾರಣವಾಗಿರಬಹುದು. ಜೀವನಕ್ರಮ ಆನುವಂಶೀಯ ಕಾಯಿಲೆಗಳು ಆರೋಗ್ಯದ ಇತರ ಸಮಸ್ಯೆಗಳು ಇಂತಹ ಸಾವಿಗೆ ಕಾರಣವಾಗಿರಬಹುದು

ಅತೀವ ಬೊಜ್ಜು ಮಧುಮೇಹ ಅಧಿಕ ರಕ್ತದೊತ್ತಡ ರಕ್ತದಲ್ಲಿ ಅಧಿಕ ಕೊಬ್ಬಿನಾಂಶದಂತಹ ಆರೋಗ್ಯದ ಸಮಸ್ಯೆಗಳು ಇಂತಹ ಹೃದಯಾಘಾತಕ್ಕೆ ಕಾರಣವಾಗಿರಬಹುದು

ಅತಿಯಾದ ಧೂಮಪಾನ ಅಸಮತೋಲಿತ ಜೀವನಕ್ರಮ

ಕೆಲವು ಪ್ರಕರಣಗಳಲ್ಲಿ ಹಠಾತ್ ಹೃದಯಾಘಾತ ಸಂಭವಿಸಿದ ಅವಧಿಯ ಹಿಂದಿನ 48 ಗಂಟೆಗಳಲ್ಲಿ ರೋಗಿಗಳು ವಿಪರೀತ ಎನಿಸುವಷ್ಟು ದೈಹಿಕ ಶ್ರಮ ಹಾಕಿರುವುದೂ ಕಾರಣ ಕೋವಿಡ್ನಿಂದ ಅಪಾಯ ಹೆಚ್ಚಳ ಹಠಾತ್ ಹೃದಯಾಘಾತದ ಸಾವುಗಳಿಗೆ ಕೋವಿಡ್ ಕಾರಣವೇ ಎಂಬುದನ್ನು ಪತ್ತೆ ಮಾಡಲು ಸಮಿತಿಯು ಕೂಲಂಕಷವಾಗಿ ಅಧ್ಯಯನ ನಡೆಸಿದೆ. ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಗಳಲ್ಲಿ 2019ಕ್ಕೂ ಮೊದಲು ದಾಖಲಾಗಿದ್ದ 40 ವರ್ಷದೊಳಗಿನ ರೋಗಿಗಳ ದತ್ತಾಂಶವನ್ನು ಕಲೆ ಹಾಕಲಾಗಿದೆ. 2025ರ ಏಪ್ರಿಲ್1ರಿಂದ ಮೇ1ರವರೆಗೆ ದಾಖಲಾದ ರೋಗಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ವಿವಿಧ ಆರೋಗ್ಯ ಸಮಸ್ಯೆ ಹೊಂದಿದ್ದವರಲ್ಲಿ ಕೋವಿಡ್ ಹೃದಯಾಘಾತದ ಸಾಧ್ಯತೆ ಹೆಚ್ಚಾಗಿದೆ ಎಂಬುದು ಎರಡೂ ದತ್ತಾಂಶ ಪರಸ್ಪರ ಹೋಲಿಕೆಯಲ್ಲಿ ಪತ್ತೆಯಾಗಿದೆ

ಹೃದಯಾಘಾತದ ಸಾಧ್ಯತೆ ಹೆಚ್ಚಳ ಕಾರಣಗಳು;2019 (ಕೋವಿಡ್ ಪೂರ್ವ);2025 (ಕೋವಿಡ್ ನಂತರ) ಮಧುಮೇಹ;13.9%;20.5% ಅಧಿಕ ರಕ್ತದೊತ್ತಡ;13.9%;17.6% ಕೊಲೆಸ್ಟ್ರಾಲ್ (ಕೊಬ್ಬಿನಾಂಶ) ಸಂಬಂಧಿ ಸಮಸ್ಯೆ;34.8%;44.1% ಧೂಮಪಾನ;48.8%;51% ಕೌಟುಂಬಿಕ ಇತಿಹಾಸ;11.6%;14.7% ಸ್ಥೂಲಕಾಯ;9.3%;11.7%

ಶಾಲೆಯಲ್ಲೇ ತಪಾಸಣೆ ನಡೆಸಿ’

ಚಿಕ್ಕ ವಯಸ್ಸಿನವರಲ್ಲಿ ಹೃದಯಾಘಾತ ಪ್ರಕರಣಗಳು ವರದಿಯಾಗುತ್ತಿರುವ ಕಾರಣ ಶಾಲಾ ಹಂತದಲ್ಲಿಯೇ ಹೃದಯ ತಪಾಸಣೆ ನಡೆಸಿ ರೋಗ ಪತ್ತೆಗೆ ಆದ್ಯತೆ ನೀಡಬೇಕು ಎಂದು ತಜ್ಞರು ಶಿಫಾರಸು ಮಾಡಿದ್ದಾರೆ. ಸರ್ಕಾರದ ಮಟ್ಟದಲ್ಲಿ ಕೈಗೊಳ್ಳಬಹುದಾದ ಮತ್ತು ಜನರೇ ಅನುಸರಿಸಬಹುದಾದ ಕ್ರಮಗಳನ್ನು ಸಮಿತಿ ಶಿಫಾರಸು ಮಾಡಿದೆ.

ಕೋವಿಡ್ನಿಂದ ಅಪಾಯ ಹೆಚ್ಚಳ

ಹಠಾತ್ ಹೃದಯಾಘಾತದ ಸಾವುಗಳಿಗೆ ಕೋವಿಡ್ ಕಾರಣವೇ ಎಂಬುದನ್ನು ಪತ್ತೆ ಮಾಡಲು ಸಮಿತಿಯು ಕೂಲಂಕಷವಾಗಿ ಅಧ್ಯಯನ ನಡೆಸಿದೆ. ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಗಳಲ್ಲಿ 2019ಕ್ಕೂ ಮೊದಲು ದಾಖಲಾಗಿದ್ದ 40 ವರ್ಷದೊಳಗಿನ ರೋಗಿಗಳ ದತ್ತಾಂಶವನ್ನು ಕಲೆ ಹಾಕಲಾಗಿದೆ. 2025ರ ಏಪ್ರಿಲ್1ರಿಂದ ಮೇ1ರವರೆಗೆ ದಾಖಲಾದ ರೋಗಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ವಿವಿಧ ಆರೋಗ್ಯ ಸಮಸ್ಯೆ ಹೊಂದಿದ್ದವರಲ್ಲಿ ಕೋವಿಡ್ ಸೃಷ್ಟಿಸಿದ ಪರಿಣಾಮಗಳಿಂದ ಹೃದಯಾಘಾತದ ಸಾಧ್ಯತೆ ಹೆಚ್ಚಾಗಿದೆ ಎಂಬುದು ಎರಡೂ ದತ್ತಾಂಶ ಪರಸ್ಪರ ಹೋಲಿಕೆಯಲ್ಲಿ ಪತ್ತೆಯಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.