ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಬಳಿ ಟಿಕೆಟ್ ಇಲ್ಲ, ಯಾರೇ ಅಭ್ಯರ್ಥಿಯಾದರೂ ಗೆಲ್ಲಿಸಿ: ಸಂಸದ ಅನಂತಕುಮಾರ್‌

Published 5 ಮಾರ್ಚ್ 2024, 7:33 IST
Last Updated 5 ಮಾರ್ಚ್ 2024, 7:33 IST
ಅಕ್ಷರ ಗಾತ್ರ

ಭಟ್ಕಳ: 'ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿಯ ಹಲವು ಆಕಾಂಕ್ಷಿತರು ತಮ್ಮ ಜೇಬಲ್ಲಿ ಟಿಕೆಟ್ ಇಟ್ಟುಕೊಂಡು ಓಡಾಡುತ್ತಿದ್ದಾರೆ. ನನ್ನ ಬಳಿ ಅಂತೂ ಟಿಕೆಟ್ ಇಲ್ಲ. ಯಾರೇ ಅಭ್ಯರ್ಥಿಯಾದರೂ ಗೆಲ್ಲಿಸಿ' ಎಂದು ಸಂಸದ ಅನಂತಕುಮಾರ್‌ ಹೆಗಡೆ ಹೇಳಿದರು.

ತಾಲ್ಲೂಕಿನ ಮಾವಳ್ಳಿಯಲ್ಲಿ ಸೋಮವಾರ ಸಂಜೆ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

'ಕಾಂಗ್ರೆಸ್'ನಲ್ಲಿಯೇ ಅಭ್ಯರ್ಥಿಯಾಗಲು ಗೊಂದಲವಿದೆ. ಬಿಜೆಪಿಯಲ್ಲಿ ಪೈಪೋಟಿ ಇದೆ' ಎಂದರು.

'ಆರು ಬಾರಿ ಸಂಸದನಾಗಿ ಆಯ್ಕೆ ಮಾಡಿದ್ದೀರಿ. ನಾನು ಅದಕ್ಕಿಂತ ಹೆಚ್ಚು ಏಕೆ ಬಯಸಲಿ. ಆಸೆಗೂ ಒಂದು ಮಿತಿ ಇದೆ' ಎಂದರು.

'ಅನಾರೋಗ್ಯದ ಕಾರಣಕ್ಕೆ ರಾಜಕೀಯದಿಂದ ದೂರ ಸರಿಯಲು ನಿರ್ಧರಿಸಿದ್ದೆ. ಭಟ್ಕಳದಿಂದ, ಕಿತ್ತೂರಿನಿಂದ, ರಾಜ್ಯದ ಬೇರೆ ಬೇರೆ ಕಡೆಗಳಿಂದ ಕಾರ್ಯಕರ್ತರು ಬಂದು ಸಕ್ರಿಯ ರಾಜಕಾರಣದಲ್ಲಿರಲು ಒತ್ತಾಯಿಸಿದ್ದಾರೆ' ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT