ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮದ್ಯ ಹಂಚಿಕೆ ಅಕ್ಷಮ್ಯ; ರಾಜಕೀಯ ಜೀವನದಲ್ಲಿ ಆ ಕೆಲಸ ಮಾಡಿಲ್ಲ: ಸಂಸದ ಸುಧಾಕರ್

Published 8 ಜುಲೈ 2024, 8:25 IST
Last Updated 8 ಜುಲೈ 2024, 8:25 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಸಾರ್ವಜನಿಕವಾಗಿ ಮದ್ಯ ಹಂಚಿಕೆ ಅಕ್ಷಮ್ಯ ಮತ್ತು ಅಪರಾಧ. ನನ್ನ 20 ವರ್ಷದ ರಾಜಕೀಯ ಬದುಕಿನಲ್ಲಿ ಎಂದಿಗೂ ಮದ್ಯ ಹಂಚಿಕೆ ಮಾಡಿಲ್ಲ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿನಂದನಾ ಕಾರ್ಯಕ್ರಮವನ್ನು ನಾನು ಆಯೋಜಿಸಿರಲಿಲ್ಲ. ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ನನ್ನ ಕರೆದರು. ನಾನು ಮತ್ತು ಆರ್.ಅಶೋಕ ಅವರು ಪಾಲ್ಗೊಂಡು ಮರಳಿದೆವು. ಆ ನಂತರ ಬೆಳವಣಿಗೆಗಳು ನಡೆದಿವೆ ಎಂದರು.

ಮಾಧ್ಯಮಗಳಲ್ಲಿಈ ಬಗ್ಗೆ ನೋಡಿ ತಿಳಿದೆ. ಯಾರು ಮದ್ಯ ಹಂಚಿದ್ದಾರೆ ಎನ್ನುವುದು ನನಗೆ ತಿಳಿದಿಲ್ಲ. ಮುಖಂಡರಿಗೂ ಕರೆ ಮಾಡಿ ಈ ರೀತಿಯಲ್ಲಿ ಮಾಡಬಾರದಿತ್ತು ಎಂದು ತಿಳಿಸಿದೆ. ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಎಚ್ಚರವಹಿಸುತ್ತೇವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT