ಬೆಂಗಳೂರು: ‘ಯಾವುದೇ ಸಮಿತಿ ಅಥವಾ ಶಾಸಕರಿಗೆ ಅಗೌರವ ತೋರಿಸುವ ಉದ್ದೇಶ ಇಲ್ಲ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ನಿಯಮದಂತೆ ಶಿಷ್ಟಾಚಾರ ಪಾಲಿಸುತ್ತೇನೆ’ ಎಂದು ಹಕ್ಕು ಬಾಧ್ಯತೆಗಳ ಸಮಿತಿ ಎದುರು ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಹೇಳಿಕೆ ನೀಡಿದ್ದಾರೆ. ಹೀಗಾಗಿ, ಅವರ ಮೇಲಿನ ಹಕ್ಕುಚ್ಯುತಿ ಪ್ರಕರಣವನ್ನು ಸಮಿತಿ ಕೈಬಿಟ್ಟಿದೆ.

ಸಮಿತಿಯ ಎರಡನೇ ವರದಿಯನ್ನು ಸಮಿತಿಯ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ್ ಅವರು ವಿಧಾನಸಭೆಯಲ್ಲಿ ಶುಕ್ರವಾರ ಮಂಡಿಸಿದರು.

ತಮ್ಮ ನೇತೃತ್ವದ ವಿಧಾನ ಮಂಡಲದ ಕಾಗದ ಪತ್ರಗಳ ಸಮಿತಿ ಜ. 12ರಂದು ಮೈಸೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅಗೌರವ ತೋರಿದ್ದಾರೆ. ಸಮಿತಿಯ ಸಭೆಗೆ ಹಾಜರಾಗಿಲ್ಲ. ಸಮಿತಿಯ ಹಕ್ಕಿಗೆ ಚ್ಯುತಿ ಉಂಟು ಮಾಡಿದ್ದಾರೆ ಎಂದು ಸಮಿತಿಯ ಅಧ್ಯಕ್ಷ ಸಾ.ರಾ.ಮಹೇಶ್ ಅವರು ಮಾರ್ಚ್ 8ರಂದು ಹಕ್ಕು ಬಾಧ್ಯತೆಗಳ ಸಮಿತಿಗೆ ಪತ್ರ ಬರೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.