ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಐಎಎಸ್‌ ಅಧಿಕಾರಿ ನಗ್ನ ಚಿತ್ರ ಕಳುಹಿಸಬಹುದಾ: ರೋಹಿಣಿ ಸಿಂಧೂರಿಗೆ ರೂಪಾ ಪ್ರಶ್ನೆ

Last Updated 20 ಫೆಬ್ರುವರಿ 2023, 9:00 IST
ಅಕ್ಷರ ಗಾತ್ರ

ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್‌ ಅಧಿಕಾರಿ ಡಿ.ರೂಪಾ ಮೌದ್ಗಿಲ್‌ ನಡುವಿನ ಜಗಳ ತಾರಕ್ಕೇರಿದೆ. ರೋಹಿಣಿ ಸಿಂಧೂರಿ ವಿರುದ್ಧ 19 ಆರೋಪಗಳು ಪಟ್ಟಿ ಮಾಡಿದ್ದ ಡಿ.ರೂಪಾ, ಇದೀಗ ಮತ್ತೊಂದು ಚಿತ್ರವನ್ನು ತಮ್ಮ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.


ತಮ್ಮ ಫೇಸ್‌ಬುಕ್‌ನಲ್ಲಿ ಮೆಸೇಜ್‌ ಡಿಲೀಟ್‌ ಆಗಿರುವ ಚಿತ್ರಗಳ ಸ್ಕ್ರೀನ್‌ಶಾಟ್‌ ಹಂಚಿಕೊಂಡಿರುವ ಡಿ.ರೂಪಾ, ‘Get well soon ಅಂತಾ ನನಗೆ ಹೇಳಿದ್ದಾರಲ್ಲ ಪತ್ರಿಕಾಗೋಷ್ಟಿಯಲ್ಲಿ ಇವತ್ತು ರೋಹಿಣಿ ಸಿಂಧೂರಿ , ಅವರ ಡಿಲೀಟ್‌ ಮಾಡಿರುವ ನಗ್ನ ಚಿತ್ರಗಳ ಬಗ್ಗೆ ಮಾತಾಡ್ತಾರಾ. ಮೇಲೆ ಕಾಣಿಸುತ್ತಿರುವ ಮೊಬೈಲ್‌ ನಂಬರ್‌ ಅವರದ್ದೇ ಅಲ್ಲವಾ. ಐಎಎಸ್ ಅಧಿಕಾರಿ ನಗ್ನ ಚಿತ್ರ ಕಳಿಸಬಹುದಾ?’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.


‘ಈ ರೀತಿಯ ಚಿತ್ರಗಳನ್ನು ಕಳಿಸಿದ್ದು ಯಾವ ಕಾರಣಕ್ಕಾಗಿ. ಸಂಧಾನಕ್ಕೆ? ಅವರ ಮೇಲಿನ ಆರೋಪ ಸಾಬೀತಾಗಿರುವ ಪ್ರಾಥಮಿಕ ತನಿಖೆ ವಿಷಯದಲ್ಲಿ ಮುಂದೆ ಶಿಕ್ಷೆ ಆಗದಂತೆ ತಡೆಯಲು? ಯಾವುದು? ಅವರೇ ಉತ್ತರಿಸಬೇಕು’ ಎಂದು ರೂಪಾ ಬರೆದುಕೊಂಡಿದ್ದಾರೆ.
‘ಬೇಗ ಗುಣಮುಖರಾಗಿ ಎಂದು ಹೇಳುವುದರ ಮೂಲಕ ಮಾನಸಿಕ ಆರೋಗ್ಯದ ಬಗ್ಗೆ ಅವರ ಅಭಿಪ್ರಾಯ ಎಷ್ಟು ತುಚ್ಛವಾಗಿದೆ ಎಂದು ತೋರಿಸುತ್ತದೆ’ ಎಂದು ರೂಪಾ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.


ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್ ​ಹಾಗೂ ರೋಹಿಣಿ ಸಿಂಧೂರಿ ಸಂಧಾನ ಯತ್ನ ವಿಚಾರ ಮಾಧ್ಯಮಗಳಲ್ಲಿ ಬಹಿರಂಗವಾದ ಬೆನ್ನಲ್ಲೇ ರೋಹಿಣಿ ಸಿಂಧೂರಿ ವಿರುದ್ಧ ಡಿ.ರೂಪಾ ಮೌದ್ಗಿಲ್‌ ವಾಗ್ದಾಳಿ ನಡೆಸಿದ್ದರು.


ರೋಹಿಣಿ ಸಿಂಧೂರಿ ವಿರುದ್ಧ 19 ಆರೋಪಗಳು ಪಟ್ಟಿ ಮಾಡಿದ್ದ ಡಿ.ರೂಪಾ ಅವರು, ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಮತ್ತೊಂದು ಪೋಸ್ಟ್ ಹಂಚಿಕೊಂಡು ಸಂಚಲನ ಮೂಡಿಸಿದ್ದರು. ರೋಹಿಣಿ ಸಿಂಧೂರಿ ಅವರ ಖಾಸಗಿ ಫೋಟೊಗಳನ್ನು ಬಹಿರಂಗಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT