‘ಆನೆ– ಮಾನವ ಸಂಘರ್ಷಕ್ಕೆ ಜೇನು ನೊಣ ಯೋಜನೆ’
ಹಲವು ಕಡೆ ಮಾನವ ಪ್ರಾಣಿ ಸಂಘರ್ಷದ ವೇಳೆ ಪ್ರಾಣಹಾನಿ ಆಗಿರುವ ಬಗ್ಗೆ ಮತ್ತು ಇದಕ್ಕೆ ವೈಜ್ಞಾನಿಕ ಪರಿಹಾರ ಒದಗಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಈ ವೇಳೆ ಸಚಿವ ಸಂತೋಷ್ ಲಾಡ್, ಜೇನು ನೊಣ ಬೇಲಿ– ಜೇನು ಕೃಷಿ ಬಗ್ಗೆ ವಿವರಿಸಿದರು. ‘ಜೇನು ನೊಣ ಇರುವ ಪ್ರದೇಶಕ್ಕೆ ಆನೆಗಳು ಬರುವುದಿಲ್ಲ. ಹೀಗಾಗಿ, ಆನೆ ಬ್ಯಾರಿಕೇಡ್ ಹಾಕಿರುವ ಮಾರ್ಗದುದ್ದಕ್ಕೂ ಜೇನು ಕೃಷಿ ಮಾಡಿದರೆ ರೈತರಿಗೂ ಅನುಕೂಲ, ಆನೆಗಳ ಕಾಟವೂ ತಪ್ಪುತ್ತದೆ’ ಎಂದು ಸಲಹೆ ನೀಡಿದರು.