ಬೆಂಗಳೂರು: ಪ್ರಜಾವಾಣಿಯು ವೀರಲೋಕ ಪ್ರಕಾಶನದ ಸಹಯೋಗದಲ್ಲಿ ಆಯೋಜಿಸಿದ ಚೊಚ್ಚಲ ‘ಯುಗಾದಿ ನಾಟಕ ರಚನಾ ಸ್ಪರ್ಧೆ 2025’ರ ಫಲಿತಾಂಶ ಹೀಗಿದೆ. ಉಷಾ ಕಟ್ಟೆಮನೆ ಅವರ ‘ಸಲಾಂ ತಕ್ಕೋ ಕಡಲೂರ ದೊರೆಯೇ’ ನಾಟಕ ಪ್ರಥಮ ಬಹುಮಾನ, ಚಾಂದ್ ಪಾಷ ಎನ್.ಎಸ್.ಅವರ ‘ಮಸೀದಿಯೊಳಗೊಂದು ಹೆಣ್ಣು ದೀಪ’ ಎರಡನೇ ಬಹುಮಾನ ಹಾಗೂ ರಮೇಶ ಅರೋಲಿ ಅವರ ‘ತೀನ್ ಕಂದಿಲ್’ ಮೂರನೇ ಬಹುಮಾನ ಪಡೆದುಕೊಂಡಿವೆ.

ಗೌರಿ ಚಂದ್ರಕೇಸರಿ ಅವರ ‘ಕತ್ತಲು ಕುಡಿದವಳು’, ಎನ್.ಎಸ್. ಶಂಕರ್ ಅವರ ‘ಬಾಪೂ’, ಜಗದೀಶ ಎಚ್.ಬಾಗೋಡಿ ಅವರ ‘ಪ್ರತ್ಯೇಕ ಬುದ್ಧ’, ಕಾವ್ಯಾ ಕಡಮೆ ಅವರ ‘ಶಾಲುಮತಿ ಸಂಸ್ಥಾನ’ ಹಾಗೂ ಎನ್.ಸಿ.ಮಹೇಶ್ ಅವರ ‘ಅದು ಬೆಟ್ಟ ಇದು ಬೆಟ್ಟವೇ’ ನಾಟಕಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.

ನಾಟಕ ರಚನಾ ಸ್ಪರ್ಧೆಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು. ರಂಗನಟಿ ಲಕ್ಷ್ಮಿ ಚಂದ್ರಶೇಖರ್ ಹಾಗೂ ರಂಗ ನಿರ್ದೇಶಕ ಬಿ.ಸುರೇಶ್ ತೀರ್ಪುಗಾರರಾಗಿದ್ದರು.

ಜೂನ್ 14ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ನಾಟಕಗಳ ಕೊರತೆ ನೀಗಲಿದೆ

ಹೊಸದಾದ, ಒಳ್ಳೆಯ ಆರಂಭವಿದು. ಇಂದು ನಾಟಕ ರಚಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ನಾಟಕ ಆಡುವುದಕ್ಕೆ ಬೇಕಾದಷ್ಟು ಗುಂಪುಗಳು ಸಿದ್ಧಗೊಳ್ಳುತ್ತಿವೆ. ಹಳೇ ನಾಟಕಗಳು ಪ್ರದರ್ಶನ ಗೊಳ್ಳುತ್ತಿವೆ. ಈ ಸ್ಪರ್ಧೆ ಹೊಸ ರಕ್ತದ ಸಂಚಾರಕ್ಕೆ ಅನುವು ಮಾಡಿಕೊಡಲಿದೆ. ಅಂತಿಮ ಸುತ್ತಿಗೆ ಬಂದ ನಾಟಕಗಳಲ್ಲಿ ಎಲ್ಲವೂ ಉತ್ತಮ ಗುಣಮಟ್ಟದ್ದಾಗಿದ್ದವು. ವಸ್ತುವಿನ ದೃಷ್ಟಿಯಿಂದ ಪ್ರಗತಿಪರ ನಿಲುವುಳ್ಳ, ಆದರ್ಶವಾದವನ್ನು ಮುಂದಿಟ್ಟುಕೊಂಡು ಬರೆದವರು ಹಲವರಿದ್ದರು. ಧರ್ಮದ ಹೆಸರಿನಲ್ಲಿ ನಡೆಯುವ ಅನ್ಯಾಯ, ಭ್ರಷ್ಟಾಚಾರ, ರಾಜಕೀಯ ಸೇರಿದಂತೆ ಇವತ್ತಿನ ಸುತ್ತಮುತ್ತಲಿನ ಆಗುಹೋಗುಗಳನ್ನು ಚೆನ್ನಾಗಿ ಗ್ರಹಿಸಿ ನಾಟಕಗಳನ್ನು ರಚಿಸಲಾಗಿತ್ತು. ನಾಟಕಕಾರರಲ್ಲಿ ಈ ಎಲ್ಲಾ ವಿಷಯಗಳನ್ನು ಹೇಳಬೇಕು ಎನ್ನುವ ಉತ್ಕಟತೆ ಕಾಣಿಸುತ್ತಿತ್ತು. ಕೆಲವು ನಾಟಕಕಾರರಿಗೆ ರಂಗಭೂಮಿಯ ಉಪಯೋಗ ತಿಳಿದಿರಲಿಲ್ಲ. ನಾಟಕ ಬರೀ ಮಾತಿನ ಮನೆಯಾದರೆ ರಂಗಕ್ರಿಯೆ ಇರುವುದಿಲ್ಲ. ಬಹಳಷ್ಟು ನಾಟಕಗಳು ರಂಗತಂತ್ರದ ಕಡೆಯೂ ಗಮನಹರಿಸಿದ್ದವು. ಯಾರೂ ನಗರ ಜೀವನದ ಬಗ್ಗೆ ತಲೆಕೆಡಿಸಿಕೊಳ್ಳದೇ ಇದ್ದಿದ್ದು ಆಸಕ್ತಿ ಹುಟ್ಟಿಸಿತು. ಎಲ್ಲರೂ ಜನಪದದ ಹಿನ್ನೆಲೆಯಲ್ಲಿ ಬರೆದಿದ್ದರು. ಭಾಷೆ ದೃಷ್ಟಿಯಿಂದ ಉತ್ತರ ಕರ್ನಾಟಕದ ಭಾಷೆಯ ಬಳಕೆ ಗಟ್ಟಿಯಾಗಿತ್ತು. ರಂಗ ಪ್ರದರ್ಶನಕ್ಕೆ ಅರ್ಹವಾದ ಸಾಕಷ್ಟು ನಾಟಕಗಳು ಇದ್ದವು. ಇಂದು ಬೇರೆ ಭಾಷೆಯಿಂದ ಎರವಲು ಪಡೆದು ನಾಟಕ ಮಾಡುತ್ತಿದ್ದೇವೆ. ಈ ಸ್ಪರ್ಧೆಯು ಆ ಕೊರತೆಯನ್ನು ನೀಗಿಸಲಿದೆ.

– ಲಕ್ಷ್ಮಿ ಚಂದ್ರಶೇಖರ್, ರಂಗ ನಟಿ

ಪ್ರಗತಿಪರ ನಿಲುವಿನ ನಾಟಕಗಳು

ಎಲ್ಲಾ ನಾಟಕಕಾರರು ರಂಗಭೂಮಿಯ, ರಂಗಭಾಷೆಯ ತಿಳಿವಳಿಕೆ ಉಳ್ಳವರಾಗಿದ್ದರು. ಜೊತೆಗೆ ನಾವು ಓದಿದ ಅಷ್ಟೂ ನಾಟಕಗಳು ಪ್ರಗತಿಪರ ನಿಲುವನ್ನು ಉಳ್ಳ ನಾಟಕಗಳಾಗಿದ್ದವು. ಸಮಕಾಲೀನ ವಿಷಯಗಳನ್ನು, ಪ್ರಶ್ನೆಗಳನ್ನು ಈ ನಾಟಕಗಳು ಪೌರಾಣಿಕ, ಐತಿಹಾಸಿಕ ನೆಲೆಯಲ್ಲಿ ಚರ್ಚೆ ಮಾಡುವ ಪ್ರಯತ್ನ ಮಾಡುತ್ತಿವೆ ಎನ್ನುವುದೇ ಸಂತೋಷ ಕೊಡುವ ವಿಷಯ. ಎಲ್ಲಾ ನಾಟಕಕಾರರೂ ಅಭಿನಂದನೆಗೆ ಅರ್ಹರು. ‘ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆ’ಯಿಂದ ಹಲವು ಅತ್ಯುತ್ತಮ ಕಥೆಗಾರರು ಹುಟ್ಟಿ ಕೊಂಡಿದ್ದಾರೆ. ಗಟ್ಟಿ ನೆಲೆಯಿಂದ ನಾಟಕ ಬರೆಯುವ ಜನರು ಕಡಿಮೆ ಇದ್ದಾರೆ. ನಾಟಕ ರಚನಾ ಸ್ಪರ್ಧೆಯಿಂದ ಇಂತಹವರನ್ನು ಪ್ರೋತ್ಸಾಹಿಸುವ ಕೆಲಸವನ್ನು ‘ಪ್ರಜಾವಾಣಿ’ ಮಾಡುತ್ತಿರುವುದೇ ಒಳ್ಳೆಯ ನಡೆ. ಈ ನಡೆಯ ಪರಿಣಾಮ ಮತ್ತು ಫಲಿತಾಂಶ ಮುಂಬರುವ ದಿನಗಳಲ್ಲಿ ಕನ್ನಡದ ಸಾಂಸ್ಕೃತಿಕ ಲೋಕದಲ್ಲಿ ಕಾಣಲು ಸಾಧ್ಯ. ಅತ್ಯುತ್ತಮ ನಾಟಕಕಾರರು ಈ ಸ್ಪರ್ಧೆಯ ಮೂಲಕ ಬರುವಂತಾಗಲಿ. ಅವರಿಂದ ಒಟ್ಟು ಸಾಂಸ್ಕೃತಿಕ ಲೋಕ ಅರಳಲಿ, ಬೆಸಗೊಳ್ಳಲಿ ಮತ್ತು ಒಳಗೊಳ್ಳಲಿ.

–ಬಿ.ಸುರೇಶ್, ರಂಗ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.