ಬೆಂಗಳೂರು: ‘ನಾಡಗೀತೆಯ ಧಾಟಿ ನಿಗದಿಗೆ ಸಂಬಂಧಿಸಿದಂತೆ ಸರ್ಕಾರವು ಆತುರದಲ್ಲಿ ನಿರ್ಧಾರ ಕೈಗೊಳ್ಳಬಾರದು.ಪೂರ್ಣ ನಾಡಗೀತೆ ಹಾಡುವುದಾದರೆ ಸಿ.ಅಶ್ವತ್ಥ್ ಅವರ ಸಂಯೋಜನೆಯನ್ನೇ ಅಂತಿಮಗೊಳಿಸಬೇಕು’ ಎಂದು ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್‌ನ ಅಧ್ಯಕ್ಷಕಿಕ್ಕೇರಿ ಕೃಷ್ಣಮೂರ್ತಿ ಆಗ್ರಹಿಸಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಧಾಟಿಯ ವಿಚಾರವಾಗಿರಾಜ್ಯದ ಕವಿಗಳು, ಸಂಗೀತಗಾರರ ಸಲಹೆಗಳನ್ನು ಕ್ರೋಡೀಕರಿಸಿ ನಿರ್ಣಯ ಕೈಗೊಳ್ಳಬೇಕು.ಎಚ್.ಆರ್.ಲೀಲಾವತಿ ನೇತೃತ್ವದ ಸಮಿತಿಯು ತರಾತುರಿಯಲ್ಲಿ ಧಾಟಿಯನ್ನು ಶಿಫಾರಸು ಮಾಡಿದ್ದು,ಮೈಸೂರು ಅನಂತಸ್ವಾಮಿ ಸಂಯೋಜನೆಯ ನಾಡಗೀತೆ ಅಂತಿಮಗೊಳಿಸಲು ತಿಳಿಸಲಾಗಿದೆ. ಆದರೆ, ಮೈಸೂರು ಅನಂತಸ್ವಾಮಿ ಅವರು ಸಂಪೂರ್ಣ ನಾಡಗೀತೆಗೆ ಸ್ವರ ಸಂಯೋಜಿಸಿಲ್ಲ’ ಎಂದು ತಿಳಿಸಿದರು.

‘ಪೂರ್ಣ ನಾಡಗೀತೆ ಹಾಡಬೇಕೆಂದು ಸರ್ಕಾರವು ಆದೇಶ ಹೊರಡಿಸಿದಲ್ಲಿ ಅನಂತಸ್ವಾಮಿ ಅವರ ಧಾಟಿಯನ್ನು ಪರಿಗಣಿಸಲು ಬರುವುದಿಲ್ಲ. ಸಿ.ಅಶ್ವತ್ಥ್ ಅವರು ಸಂಪೂರ್ಣ ನಾಡಗೀತೆಗೆ ಸ್ವರ ಸಂಯೋಜನೆ ಮಾಡಿದ್ದು, ಸರಳವಾಗಿದೆ. ಆದ್ದರಿಂದ ಅಶ್ವತ್ಥ್ ಅವರ ಸಂಯೋಜನೆಯನ್ನೇ ಅಂತಿಮಗೊಳಿಸಬೇಕು.ಒಂದು ವೇಳೆ ಸಮಿತಿಯ ಶಿಫಾರಸಿಗೆ ಅನುಗುಣವಾಗಿ ಸರ್ಕಾರ ಆದೇಶಿಸಿದರೆ, ರಾಜ್ಯದಾದ್ಯಂತ ಪ್ರತಿಭಟನೆ ಹಾಗೂ ಕಾನೂನಾತ್ಮಕ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.