ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯು 2024ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಗೌರವ ಹಾಗೂ ಸಾಹಿತ್ಯಶ್ರೀ ಪ್ರಶಸ್ತಿಗೆ 15 ಜನರನ್ನು ಆಯ್ಕೆ ಮಾಡಲಾಗಿದೆ.

ಗೌರವ ಪ್ರಶಸ್ತಿಗೆ ಎಂ. ಬಸವಣ್ಣ(ಚಾಮರಾಜನಗರ), ಶೂದ್ರ ಶ್ರೀನಿವಾಸ್, ಪ್ರತಿಭಾ ನಂದಕುಮಾರ್ (ಬೆಂಗಳೂರು), ಡಿ.ಬಿ.ನಾಯಕ್ (ಕಲಬುರಗಿ), ವಿಶ್ವನಾಥ್ ಕಾರ್ನಾಡ್ (ಮುಂಬಯಿ) ಅವರನ್ನು ಆಯ್ಕೆ ಮಾಡಲಾಗಿದೆ.

‘ಸಾಹಿತ್ಯಶ್ರೀ’ ಪ್ರಶಸ್ತಿಗೆ ಪದ್ಮಾಲಯ ನಾಗರಾಜ್(ಕೋಲಾರ), ಕೆ.ವೈ. ನಾರಾಯಣಸ್ವಾಮಿ (ಬೆಂಗಳೂರು), ಬಿ.ಎಂ ಪುಟ್ಟಯ್ಯ( ಚಿಕ್ಕಮಗಳೂರು), ಬಿ.ಯು.ಸುಮಾ (ತುಮಕೂರು), ಮಮತಾ ಸಾಗರ(ಶಿವಮೊಗ್ಗ), ಸಬಿತಾ ಬನ್ನಾಡಿ( ಉಡುಪಿ), ಅಬ್ದುಲ್ ಹೈ ತೋರಣಗಲ್ (ಬಳ್ಳಾರಿ), ಗುರುಲಿಂಗಪ್ಪ ಧಬಾಲೆ(ಅಕ್ಕಲಕೋಟೆ), ಡಾ.ಎಚ್.ಎಸ್. ಅನುಪಮಾ (ಉತ್ತರ ಕನ್ನಡ), ಅಮರೇಶ ಯತಗಲ್( ರಾಯಚೂರು) ಅವರನ್ನು ಆಯ್ಕೆ ಮಾಡಲಾಗಿದೆ.

ಗೌರವ ಪ್ರಶಸ್ತಿಯು ₹50 ಸಾವಿರ ನಗದು, ಸಾಹಿತ್ಯಶ್ರೀ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನವು ₹25 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ.

‘ನಗರದಲ್ಲಿ ಗುರುವಾರ ನಡೆದ ಅಕಾಡೆಮಿಯ ಸರ್ವಸದಸ್ಯರ ಸಭೆಯಲ್ಲಿ ಪ್ರಶಸ್ತಿಗಳಿಗೆ ಸಾಹಿತಿಗಳು ಹಾಗೂ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಮೈಸೂರು, ತುಮಕೂರು ಇಲ್ಲವೇ ಬೆಳಗಾವಿಯಲ್ಲಿ ಸದ್ಯವೇ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ಅಕಾಡೆಮಿ ಅಧ್ಯಕ್ಷ ಎನ್.ಎಲ್.ಮುಕುಂದರಾಜ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಸಾಹಿತ್ಯ ಅಕಾಡೆಮಿಗೆ ಸರ್ಕಾರ ವಾರ್ಷಿಕ ₹80 ಲಕ್ಷ ಅನುದಾನ ಒದಗಿಸುತ್ತಿದ್ದು, ಇದರಲ್ಲೇ ಚಟುವಟಿಕೆ ನಡೆಸುತ್ತಿದ್ದೇವೆ. ಇದಲ್ಲದೇ ಬಜೆಟ್ನಲ್ಲಿ ಘೋಷಿಸಿದ ಕನ್ನಡ ಭಾರತಿ 150 ಪುಸ್ತಕ ಪ್ರಕಟಣೆಗೆ ₹50 ಲಕ್ಷ, ಸೌಹಾರ್ದ ಕರ್ನಾಟಕ ಕಾರ್ಯಕ್ರಮಕ್ಕೆ ₹ 50 ಲಕ್ಷ ಒದಗಿಸಿದ್ದು, ಈ ಕಾರ್ಯ ಚಟುವಟಿಕೆಗಳನ್ನು ರೂಪಿಸುತ್ತಿದ್ದೇವೆ’ ಎಂದು ಹೇಳಿದರು.

ಸುದೇಶ ದೊಡ್ಡಪಾಳ್ಯ ಕೃತಿಗೆ ದತ್ತಿ ಬಹುಮಾನ

‘ಪ್ರಜಾವಾಣಿ’ಯ ಸುದ್ದಿ ಸಂಪಾದಕ ಸುದೇಶ ದೊಡ್ಡಪಾಳ್ಯ ಅವರ ‘ಈಶಾನ್ಯದ ದಿಕ್ಕಿನಿಂದ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2023ನೇ ವರ್ಷದ ದತ್ತಿ ಬಹುಮಾನ ಸಂದಿದೆ.

2023ನೇ ವರ್ಷದ ಪುಸ್ತಕ ಬಹುಮಾನ ವಿಜೇತರು

ಕಾವ್ಯ: ಲಕ್ಷ್ಮಣ ವಿ.ಎ(ಕೃತಿ: ಕಾಯಿನ್ ಬೂತ್) ನವಕವಿಗಳ ಪ್ರಥಮ ಸಂಕಲನ: ಬಿ.ಎಂ. ಗುರುನಾಥ( ನಕ್ಷತ್ರ ತಬ್ಬಿ ಮಲಗಿದ ಹೊತ್ತು) ಕಾದಂಬರಿ: ಗಂಗಪ್ಪ ತಳವಾರ್ (ಧಾವತಿ) ಸಣ್ಣಕತೆ: ಮಾಧವಿ ಭಂಡಾರಿ ಕೆರೆಕೋಣ(ಗುಲಾಬಿ ಕಂಪಿನ ರಸ್ತೆ) ನಾಟಕ: ಸಾಸ್ವೇಹಳ್ಳಿ ಸತೀಶ್ (ಏಸೂರು ಕೊಟ್ಟರೂ ಈಸೂರು ಕೊಡೆವು) ಲಲಿತ ಪ್ರಬಂಧ: ಸರಸ್ವತಿ ಭೋಸಲೆ (ಕಾಡತಾವ ನೆನಪ) ಪ್ರವಾಸ ಸಾಹಿತ್ಯ: ಡಿ. ವಿ. ಗುರುಪ್ರಸಾದ್( ಮಾಯನ್ನರ ಮಾಯಾನಗರಿ ಮೆಕ್ಸಿಕೋದಲ್ಲೊಂದು ಸುತ್ತು) ಜೀವನ ಚರಿತ್ರೆ/ಆತ್ಮಕಥೆ: ಡಾ. ಸಿ. ಚಂದ್ರಪ್ಪ(ಅಶೋಕ ಸತ್ಯ- ಅಹಿಂಸೆಯ ಮಹಾಶಯ) ಸಾಹಿತ್ಯ ವಿಮರ್ಶೆ:ರಂಗನಾಥ ಕಂಟನಕುಂಟೆ(ಓದಿನ ಒಕ್ಕಲು) ಮಕ್ಕಳ ಸಾಹಿತ್ಯ: ಮತ್ತೂರು ಸುಬ್ಬಣ್ಣ(ಮುತ್ತಳ್ಳಿಯ ಅಜ್ಜಿ ಕಥೆಗಳು) ವಿಜ್ಞಾನ ಸಾಹಿತ್ಯ: ಡಾ. ಎಚ್. ಎಸ್. ಮೋಹನ್(ಕಣ್ಣಿನಲ್ಲಿ ಕಂಡ ಮೃತ್ಯುಬಿಂಬ ಮತ್ತು ಇತರ ವೈದ್ಯಕೀಯ ಲೇಖನಗಳು) ಮಾನವಿಕ: ಪ್ರಕಾಶ ಭಟ್ (ಹಳ್ಳಿಗಳನ್ನು ಕಟ್ಟುವ ಕಷ್ಟಸುಖ) ಸಂಶೋಧನೆ:ಕಾಡುಗೊಲ್ಲ ಬುಡಕಟ್ಟು (ಮಲ್ಲಿಕಾರ್ಜುನ ಕಲಮರಹಳ್ಳಿ) ಅನುವಾದ: (ಭಾರತೀಯ ಭಾಷೆಯಿಂದ ಕನ್ನಡಕ್ಕೆ ಅನುವಾದ): ಜೆ.ಪಿ. ದೊಡಮನಿ( ಡಾ. ಬಾಬಾಸಾಹೇಬ ಅಂಬೇಡ್ಕರ (ಜೀವನ ಚರಿತ್ರೆ) ಅಂಕಣ ಬರಹ/ವೈಚಾರಿಕ ಬರಹ: ದೇವು ಪತ್ತಾರ (ಈಶಾನ್ಯೆ ಒಡಲು) ಸಂಕೀರ್ಣ: ಸತೀಶ್ ತಿಪಟೂರು( ಮಣ್ಣಿನ ಬಂಡಿಯಲ್ಲಿ ಫುಕುವೋಕಾ) ಲೇಖಕರ ಮೊದಲ ಸ್ವತಂತ್ರ ಕೃತಿ:ಗೋವಿಂದರಾಜು ಎಂ. ಕಲ್ಲೂರು( ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು)

2023ನೇ ವರ್ಷದ ಅಕಾಡೆಮಿಯ ದತ್ತಿ ಬಹುಮಾನ

ಕಾದಂಬರಿ (ಚದುರಂಗ ದತ್ತಿ ಬಹುಮಾನ): ಲತಾ ಗುತ್ತಿ( ಕೃತಿ: ಚದುರಂಗ) ಲಲಿತ ಪ್ರಬಂಧ(ವಿ. ಸೀತಾರಾಮಯ್ಯ ಸೋದರಿ ಇಂದಿರಾ ದತ್ತಿ ಬಹುಮಾನ): ಸುಮಾ ರಮೇಶ್( ಹಚ್ಚೆ ದಿನ್ ಬೆಚ್ಚಗಿನ ನಗೆಯೊಂದಿಗೆ) ಜೀವನಚರಿತ್ರೆ(ಸಿಂಪಿ ಲಿಂಗಣ್ಣ ದತ್ತಿ ಬಹುಮಾನ): ರೂಪ ಹಾಸನ(ಮಹಾಸಂಗ್ರಾಮಿ ಎಸ್. ಆರ್. ಹಿರೇಮಠ) ಸಾಹಿತ್ಯ ವಿಮರ್ಶೆ (ಪಿ. ಶ್ರೀನಿವಾಸರಾವ್ ದತ್ತಿ ಬಹುಮಾನ): ಕಾತ್ಯಾಯಿನಿ ಕುಂಜಿಬೆಟ್ಟು( ಇರವಿನ ಅರಿವು) ಕಾವ್ಯ ಹಸ್ತಪ್ರತಿ (ಚಿ. ಶ್ರೀನಿವಾಸರಾಜು ದತ್ತಿ ಬಹುಮಾನ): ಟಿ. ಜಿ. ಪುಷ್ಪಲತಾ (ಕೇದಿಗೆ) ಅನುವಾದ: (ಎಲ್. ಗುಂಡಪ್ಪ ಮತ್ತು ಶಾರದಮ್ಮ ದತ್ತಿ ಬಹುಮಾನ): ರೋಸಿ ಡಿಸೋಜಾ( ಹೆಚ್.ಡಿ. ದೇವೇಗೌಡರ ಬದುಕು ಮತ್ತು ದುಡಿಮೆ ಕುರಿತ ನೇಗಿಲ ಗೆರೆಗಳು) ಲೇಖಕರ ಮೊದಲ ಸ್ವತಂತ್ರ ಕೃತಿ(ಮಧುರಚೆನ್ನ ದತ್ತಿ ಬಹುಮಾನ): ಅಬ್ಬೂರು ಪ್ರಕಾಶ್( ಕಣ್ಣ ಕನ್ನಡಿಯಲ್ಲಿ) ವೈಚಾರಿಕ/ಅಂಕಣ ಬರಹ(ಬಿ.ವಿ. ವೀರಭದ್ರಪ್ಪ ದತ್ತಿ ಬಹುಮಾನ): ಸುದೇಶ ದೊಡ್ಡಪಾಳ್ಯ(ಈಶಾನ್ಯದ ದಿಕ್ಕಿನಿಂದ) ಕನ್ನಡದಿಂದ ಇಂಗ್ಲಿಷಿಗೆ ಅನುವಾದ (ಅಮೆರಿಕನ್ನಡ ದತ್ತಿನಿಧಿ ಬಹುಮಾನ): ಅನುವಾದಕಿ- ಸುಕನ್ಯಾ ಕನಾರಳ್ಳಿ(ಲವ್ ಅಂಡ್ ವಾಟರ್ ಫ್ಲೋ ಟುಗೆದರ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.