ನವದೆಹಲಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಮುಂದಿನ ವಾರ ಚುನಾವಣೆ ನಡೆಯಬಹುದು ಎಂದು ಸುಳಿವು ಪಡೆದಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ನವದೆಹಲಿಗೆ ದೌಡಾಯಿಸಿ ನಾಯಕರ ಭೇಟಿಗೆ ತೆರೆಮರೆಯ ಕಸರತ್ತು ನಡೆಸಿದ್ದಾರೆ.

ಸಂಸತ್ ಅಧಿವೇಶನದ ಸಂದರ್ಭದಲ್ಲಿ ಮತ್ತೆ ಬರುವೆ ಎಂದು ಈ ಹಿಂದೆ ಹೇಳಿ ಹೋಗಿದ್ದ ವಿಜಯೇಂದ್ರ ಅವರ ದಿಢೀರ್ ಪ್ರವಾಸಕ್ಕೆ ಅಪ್ಪ ಬಿ.ಎಸ್.ಯಡಿಯೂರಪ್ಪ ಅವರ ಸಲಹೆ ಹಾಗೂ ಸೂಚನೆಗಳೇ ಕಾರಣ. ಮುಂದಿನ ಮೂರು ವರ್ಷದ ಅವಧಿಗೆ ರಾಜ್ಯ ಘಟಕದ ಅಧ್ಯಕ್ಷನಾಗಿ ಪುನರಾಯ್ಕೆಯಾಗುತ್ತೇನೆಂಬ ಅಮಿತ ವಿಶ್ವಾಸದಲ್ಲಿರುವ ಅವರಿಗೆ ಭಿನ್ನ ಹಾಗೂ ತಟಸ್ಥ ಗುಂಪಿನ ನಾಯಕರ ರಣತಂತ್ರಗಳ ಬಗ್ಗೆ ಸಣ್ಣ ಆತಂಕವಿದ್ದೇ ಇದೆ. ಈ ಆತಂಕವನ್ನು ದೂರ ಮಾಡಿಕೊಂಡು ಸ್ಪಷ್ಟ ಸಂದೇಶ ಪಡೆದುಕೊಂಡು ಹೋಗುವುದು ಅವರ ಪ್ರವಾಸದ ಹಿಂದಿನ ಉದ್ದೇಶ ಎಂದು ಹೇಳಲಾಗಿದೆ.

ಸಂಸತ್ ಅಧಿವೇಶನಕ್ಕೆ ಮುನ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ನೇಮಕವಾಗಲಿದೆ ಎಂಬ ಸುದ್ದಿ ಬಿಜೆಪಿ ಪಾಳಯದಲ್ಲಿ ಹರಿದಾಡುತ್ತಿದೆ. ಅದಕ್ಕೂ ಮುನ್ನ ಕರ್ನಾಟಕ, ಉತ್ತರ ಪ್ರದೇಶ, ಗುಜರಾತ್ ಹಾಗೂ ಮಧ್ಯಪ್ರದೇಶದಲ್ಲಿನ ನಾಯಕತ್ವದ ಕಗ್ಗಂಟನ್ನು ವರಿಷ್ಠರು ಬಗೆಹರಿಸಲಿದ್ದಾರೆ ಎಂಬುದು ಬಿಜೆಪಿ ನಾಯಕರ ಅಂಬೋಣ. ರಾಜ್ಯ ಘಟಕದ ಅಧ್ಯಕ್ಷರ ಚುನಾವಣೆಯ ಸಂದೇಶ ಸೋಮವಾರ ಅಥವಾ ಮಂಗಳವಾರದ ಹೊತ್ತಿಗೆ ಬರಬಹುದು ಎಂದು ರಾಜ್ಯ ನಾಯಕರು ಕಾದಿದ್ದಾರೆ.

ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಭಿನ್ನ ಬಣದವರು ಒಂದೂವರೆ ವರ್ಷದಿಂದ ಸಮರ ಸಾರಿದ್ದಾರೆ. ಅಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಪದಚ್ಯುತಗೊಳಿಸುವುದೇ ತಮ್ಮ ಪರಮ ಗುರಿ ಎಂದು ಸಾರಿದ್ದ ಈ ನಾಯಕರು ಶಾಸಕ ಬಸನಗೌಡ ಪಾಟೀಲ ಯತ್ನಾಳ ಉಚ್ಚಾಟನೆಯ ಬಳಿಕ ತಣ್ಣಗಾಗಿದ್ದರು. ಕಳೆದೊಂದು ವಾರದಿಂದ ಮತ್ತೊಂದು ಸುತ್ತಿನ ಸಂಗ್ರಾಮ ಆರಂಭಿಸಿದ್ದಾರೆ. ವಿಜಯೇಂದ್ರ ಅವರಿಗೆ ಹೆಚ್ಚಿನ ಆತಂಕ ಇರುವುದು ಭಿನ್ನರಿಗಿಂತ ತಟಸ್ಥ ಗುಂಪಿನ ನಾಯಕರ ಮೇಲೆ. ಈ ಗುಂಪಿನಲ್ಲಿ ಪಕ್ಷದ ಹಿರಿಯ ನಾಯಕರ ಗುಂಪು ದೊಡ್ಡದಿದೆ. ಪಕ್ಷಕ್ಕಾಗಿ ದಶಕಗಳಿಂದ ದುಡಿದ ನಾಯಕರಿಗೆ ವಿಜಯೇಂದ್ರ ಗೌರವ ಕೊಡುತ್ತಿಲ್ಲ ಎಂಬುದು ಈ ನಾಯಕರ ಪ್ರಮುಖ ಆಪಾದನೆ. ಅದಕ್ಕಾಗಿಯೇ ಅವರು ತೆರೆಮರೆಯಲ್ಲಿ ನಿಂತು ವಿಜಯೇಂದ್ರ ವಿರುದ್ಧ ಗೆರಿಲ್ಲಾ ಯುದ್ಧದಲ್ಲಿ ತೊಡಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತದೆ.

‘ಪಕ್ಷದ ರಾಜ್ಯ ಘಟಕದ ಅಧ್ಯಕ್ಷನಾಗಿ ಪುನರಾಯ್ಕೆಯಾದ ಬಳಿಕ ಪಕ್ಷ ಸಂಘಟನೆಯ ಜತೆಗೆ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಲಹೆ ಪಡೆದೇ ತೀರ್ಮಾನಗಳನ್ನು ಕೈಗೊಳ್ಳುತ್ತೇನೆ’ ಎಂದು ವರಿಷ್ಠರಿಗೆ ಮನವರಿಕೆ ಮಾಡಿಕೊಡುವುದು ಅವರ ದೆಹಲಿಯ ಭೇಟಿಯ ಪ್ರಮುಖ ಅಜೆಂಡಾ ಎನ್ನಲಾಗಿದೆ.

‘ಸಂಸದ ಬಸವರಾಜ ಬೊಮ್ಮಾಯಿ ಸೂಚನೆಯ ಮೇರೆಗೆ ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಅರುಣ್ ಕುಮಾರ್ ಪೂಜಾರ್ ಅವರನ್ನು ನೇಮಿಸಲಾಗಿತ್ತು. ಅವರ ಕಾರ್ಯವೈಖರಿ ವಿರುದ್ಧ ಜಿಲ್ಲೆಯ ಪ್ರಮುಖ ನಾಯಕರೆಲ್ಲ ಸಿಡಿದೆದ್ದಿದ್ದರು. ಬಳಿಕ, ಬೊಮ್ಮಾಯಿ ಸೂಚಿಸಿದವರನ್ನೇ ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಚಿಕ್ಕಬಳ್ಳಾಪುರದಲ್ಲಿ ಸಂದೀಪ್ ರೆಡ್ಡಿ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಇದಕ್ಕೆ ಸಂಸದ ಡಾ.ಕೆ.ಸುಧಾಕರ್ ಆಕ್ಷೇಪ ವ್ಯಕ್ತಪಡಿಸಿದ್ದರು. ರೆಡ್ಡಿ ನೇಮಕಕ್ಕೆ ರಾಷ್ಟ್ರೀಯ ನಾಯಕರು ತಡೆ ಒಡ್ಡಿದರು. ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಸಲಹೆಯ ಮೇರೆಗೆ ಈ ನೇಮಕ ಮಾಡಲಾಗಿತ್ತು. 2028ರ ಚುನಾವಣೆಯ ಸಂದರ್ಭದಲ್ಲಾಗುವ ಸಂಭಾವ್ಯ ರಾಜಕೀಯ ಪಲ್ಲಟಗಳನ್ನು ಗಮನದಲ್ಲಿಟ್ಟುಕೊಂಡು ಈ ತೀರ್ಮಾನಕ್ಕೆ ಬರಲಾಗಿತ್ತು. ಇದೀಗ, ರಾಮಚಂದ್ರ ಗೌಡ ಸೀಕಲ್ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡಲಾಗಿದೆ. ಸುಧಾಕರ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಈ ಪ್ರಕ್ರಿಯೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹಿರಿಯ ನಾಯಕರ ಸಲಹೆಗಳನ್ನು ಪಡೆದು ಪಕ್ಷ ಸಂಘಟನೆಗೆ ಚುರುಕು ಮುಟ್ಟಿಸುತ್ತೇನೆ’ ಎಂದು ವಿಜಯೇಂದ್ರ ಅವರು ಆಪ್ತರಲ್ಲಿ ಹೇಳಿಕೊಂಡಿದ್ದಾರೆ. ಅವಕಾಶ ಸಿಕ್ಕರೆ ರಾಷ್ಟ್ರೀಯ ನಾಯಕರಲ್ಲಿ ಈ ವಿಷಯಗಳನ್ನೆಲ್ಲ ಅರುಹಲು ಸಿದ್ಧತೆ ಮಾಡಿಕೊಂಡಿದ್ದಾರೆ.

‘ಯಡಿಯೂರಪ್ಪ ಜತೆಗಿನ ಆತ್ಮೀಯ ಒಡನಾಟ ಹಾಗೂ ಹಿರಿತನದ ಆಧಾರದಲ್ಲಿ ಅಧ್ಯಕ್ಷರಾದ ಹೊಸದರಲ್ಲೇ ವಿಜಯೇಂದ್ರ ಅವರಿಗೆ ಕೆಲವೊಂದು ಸಲಹೆಗಳನ್ನು ನೀಡಿದ್ದೆ. ಸಣ್ಣ ವಯಸ್ಸಿನಲ್ಲೇ ಅಪೂರ್ವ ಅವಕಾಶ ಸಿಕ್ಕಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವಂತೆ ಕಿವಿಮಾತು ಹೇಳಿದ್ದೆ. ಆದರೆ, ವಿಜಯೇಂದ್ರ ಆ ರೀತಿ ನಡೆದುಕೊಳ್ಳಲಿಲ್ಲ’ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.