ಬೆಂಗಳೂರು: ಪ್ರಧಾನಿಯವರ ಪ್ರಯೋಗಶಾಲೆಯ ಹೊಸ ಪ್ರಯೋಗದಿಂದ ದೇಶದ ಭದ್ರತೆ ಹಾಗೂ ಯುವಕರ ಭವಿಷ್ಯ ಎರಡೂ ಅಪಾಯದಲ್ಲಿವೆ ಎಂದು ‘ಅಗ್ನಿಪಥ’ ಯೋಜನೆಯನ್ನು ಉದ್ದೇಶಿಸಿ ಕಾಂಗ್ರೆಸ್ ಟೀಕಿಸಿದೆ.

ಯೋಜನೆಯನ್ನು ಟೀಕಿಸಿ ರಾಹುಲ್ ಗಾಂಧಿ ಮಾಡಿರುವ ಟ್ವೀಟ್‌ಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ‘ಪ್ರತಿ ವರ್ಷ 60,000 ಸೈನಿಕರು ನಿವೃತ್ತರಾಗುತ್ತಾರೆ. ಅವರಲ್ಲಿ 3,000 ನಿವೃತ್ತ ಯೋಧರು ಮಾತ್ರ ಸರ್ಕಾರಿ ಉದ್ಯೋಗ ಪಡೆಯುತ್ತಿದ್ದಾರೆ. 4 ವರ್ಷಗಳ ಗುತ್ತಿಗೆಯಲ್ಲಿ ನಿವೃತ್ತರಾಗುವ ಸಾವಿರಾರು 'ಅಗ್ನಿವೀರ'ರ ಭವಿಷ್ಯವೇನು? ಪ್ರಧಾನಿಯವರ ಪ್ರಯೋಗಶಾಲೆಯ ಈ ಹೊಸ ಪ್ರಯೋಗದಿಂದ ದೇಶದ ಭದ್ರತೆ ಹಾಗೂ ಯುವಕರ ಭವಿಷ್ಯ ಎರಡೂ ಅಪಾಯದಲ್ಲಿವೆ!’ ಎಂದು ಉಲ್ಲೇಖಿಸಿದೆ.

ಆಳ-ಅಗಲ| ‘ಅಗ್ನಿಪಥ’ಕ್ಕೆ ವಿರೋಧವೇಕೆ?

ಅಗ್ನಿಪಥ ಯೋಜನೆ ವಿರುದ್ಧ ದೇಶದ ಹಲವೆಡೆ ತೀವ್ರ ಪ್ರತಿಭಟನೆಗಳು ನಡೆದಿದ್ದವು. ಈ ಪ್ರತಿಭಟನೆಗಳ ವೇಳೆ ಭಾರತೀಯ ರೈಲ್ವೆಗೆ ಸಂಬಂಧಿಸಿದ ಅಪಾರ ಪ್ರಮಾಣದ ಆಸ್ತಿ–ಪಾಸ್ತಿಗೆ ಹಾನಿಯಾಗಿತ್ತು. ಪರಿಣಾಮವಾಗಿ ₹259.44 ಕೋಟಿ ನಷ್ಟ ಉಂಟಾಗಿದೆ ಎಂದು ರೈಲ್ವೆ ಇಲಾಖೆ ಇತ್ತೀಚೆಗೆ ತಿಳಿಸಿತ್ತು.

ಅಗ್ನಿಪಥ ವಿರೋಧಿ ಪ್ರತಿಭಟನೆ: ರೈಲ್ವೆಗೆ ₹259.44 ಕೋಟಿ ನಷ್ಟ: ರೈಲ್ವೆ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.