ಮೈಸೂರು: ಎರಡು ವರ್ಷಗಳ ಆಡಳಿತ ಪೂರೈಸಿದ ಉತ್ಸಾಹದಲ್ಲಿರುವ ಹಾಗೂ ‘ಐದು ವರ್ಷವೂ ನಾನೇ
ಮುಖ್ಯಮಂತ್ರಿ’ ಎಂದು ಘೋಷಿಸಿಕೊಂಡಿರುವ ಸಿದ್ದರಾಮಯ್ಯ ಅವರು, ತವರು ನೆಲದಲ್ಲಿ ಶನಿವಾರ ನಡೆದ ‘ಸಾಧನಾ ಸಮಾವೇಶ’ ವನ್ನು ತಮ್ಮ ಶಕ್ತಿ ಪ್ರದರ್ಶನಕ್ಕೆ ಮತ್ತು ಎದುರಾಳಿಗಳ ವಿರುದ್ಧದ ವಾಗ್ದಾಳಿಗೆ ವೇದಿಕೆಯಾಗಿ ಬಳಸಿಕೊಂಡರು.

ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ, ಜನರ ನಡುವೆ ‘ರಾಜಪಥ’ದ ಮಾದರಿಯಲ್ಲಿ
ಸಿದ್ಧಪಡಿಸಿದ್ದ ವಿಶೇಷ ಬಗೆಯ ರ್ಯಾಂಪ್ನಲ್ಲಿ 200 ಮೀಟರ್ವರೆಗೆ ವೇದಿಕೆಯತ್ತ ಮುನ್ನಡೆದ ಅವರನ್ನು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜತೆಗೂಡಿದರು. ಕಾರ್ಯಕರ್ತರು ಹೂಮಳೆಗರೆದು ನೆಚ್ಚಿನ ನಾಯಕನ ಪರ ಜೈಕಾರ ಕೂಗಿದರು.

ಪಾಲ್ಗೊಂಡಿದ್ದವರಲ್ಲಿ ಬಹುತೇಕರು ಮುಖ್ಯಮಂತ್ರಿಯ ಫೋಟೊಗಳನ್ನು ಹಿಡಿದು ಹರ್ಷೋದ್ಗಾರ ವ್ಯಕ್ತಪಡಿಸಿ
ದರು ಸಮಾವೇಶದುದ್ದಕ್ಕೂ ಸಿದ್ದರಾಮಯ್ಯ ಪರ ಘೋಷಣೆಗಳು ಮುಗಿಲು ಮುಟ್ಟಿದವು. ಪಕ್ಷದ ಅಧ್ಯಕ್ಷರ ಮುಂದೆ ‘ಪ್ರಾಬಲ್ಯ’ ಮೆರೆಯುವಲ್ಲಿ ಮುಖ್ಯಮಂತ್ರಿ ಹಾಗೂ ಅವರ ಬಣದವರು ಮೇಲುಗೈ ಸಾಧಿಸಿದ್ದು ಕಂಡುಬಂದಿತು.

ಸಚಿವ ಸಂಪುಟದ ಅರ್ಧದಷ್ಟು ಸಹೋದ್ಯೋಗಿಗಳು, ಕಾಂಗ್ರೆಸ್ ಶಾಸಕರು ವೇದಿಕೆಯನ್ನು ತುಂಬಿದ್ದರು. ತಡವಾಗಿ ಆರಂಭವಾದ ಕಾರಣ ಸಮಾವೇಶವು ಐದು ಮಂದಿಯ ಭಾಷಣಕ್ಕಷ್ಟೆ ಸೀಮಿತವಾಯಿತು. ‘ಅನ್ಯ ಕಾರ್ಯ ನಿಮಿತ್ತ’ ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯ ಭಾಷಣಕ್ಕೂ ಮುನ್ನವೇ, ಅರ್ಧದಲ್ಲೇ ನಿರ್ಗಮಿಸಿದ್ದು ಹಲವು ಚರ್ಚೆಗೆ ಗ್ರಾಸವಾಯಿತು.

ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರದಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು, ಸಿದ್ದರಾಮಯ್ಯ ಬೆಂಬಲಿಗರು ಪಾಲ್ಗೊಂಡು ಶಕ್ತಿ ತುಂಬಿದರು. ಅವರಿಗಾಗಿ 700ಕ್ಕೂ ಹೆಚ್ಚು ಬಸ್ಗಳ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಚಾಲನೆ ನೀಡುವ ಸರ್ಕಾರಿ ಕಾರ್ಯಕ್ರಮವಾದರೂ ಬಿಜೆಪಿ–ಜೆಡಿಎಸ್ನ ಜನಪ್ರತಿನಿಧಿಗಳ್ಯಾರೂ ಕಾಣಿಸಿಕೊಳ್ಳಲಿಲ್ಲ. ವೇದಿಕೆಯಲ್ಲಿ ಖರ್ಗೆ ಹೊರತುಪಡಿಸಿ ಕಾಂಗ್ರೆಸ್ ಹೈಕಮಾಂಡ್ನ ಯಾರ ಚಿತ್ರವೂ ಇರಲಿಲ್ಲ.

ಹಾಕಲಾಗಿದ್ದ ಎಲ್ಲ ಕುರ್ಚಿಗಳಲ್ಲೂ ಸಿದ್ದರಾಮಯ್ಯ ಫೋಟೊಗಳನ್ನು ಇಡಲಾಗಿತ್ತು. ಸಮಾವೇಶದ ವೇಳೆ ಅದನ್ನು ಪ್ರದರ್ಶಿಸುವಂತೆ ಮುಖಂಡರು ಕಾರ್ಯಕರ್ತರಿಗೆ ಸೂಚಿಸಿದ್ದರು. ಆದರೆ, ಆರಂಭಕ್ಕೂ ಮುನ್ನವೇ ಒಂದಷ್ಟು ಫೋಟೊಗಳನ್ನು ಪೊಲೀಸರು ವಶಕ್ಕೆ ಪಡೆದರು. ಈ ನಡುವೆಯೂ, ಅಭಿಮಾನಿಗಳು ಮುಖ್ಯಮಂತ್ರಿಯ ಫೋಟೊಗಳನ್ನು ಪ್ರದರ್ಶಿಸಿ ಅಭಿಮಾನ ಮೆರೆದರು.

ಮಹದೇವಪ್ಪಗೆ ಗದರಿದ ಖರ್ಗೆ:

ತಮ್ಮ ಭಾಷಣದ ವೇಳೆ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರನ್ನು ಮಲ್ಲಿಕಾರ್ಜನ ಖರ್ಗೆ ಗದರಿದರು.

‘ಏಯ್ ಮಹದೇವಪ್ಪ ಮುಖ್ಯಮಂತ್ರಿ ಕಿವಿಗೆ ಏನೇನೋ ತುಂಬಬೇಡ. ಅವರ ಕಿವಿ ಚೆನ್ನಾಗಿದೆ. ಅವರು ಇಲ್ಲಿ ಕೇಳಿಸಿಕೊಳ್ಳಲಿ’ ಎಂದು ಸಿಟ್ಟಾದರು. ಮಹದೇವಪ್ಪ ನಕ್ಕು ಸುಮ್ಮನಾದರು.

‘ಬಿಜೆಪಿಗೆ ನಾಚಿಕೆಯಿಲ್ಲವೇ’

‘ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ್ದ ಬಿಜೆಪಿ ಈಗ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಅದನ್ನೇ ಕೊಡುವುದಾಗಿ ಘೋಷಿಸಿದೆ. ಅವರಿಗೆ ನಾಚಿಕೆ ಆಗುವುದಿಲ್ಲವೇ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಸಾಧನಾ ಸಮಾವೇಶದಲ್ಲಿ ಮಾತನಾಡಿದ ಅವರು, ‘ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದರೆ ಕರ್ನಾಟಕ ಸರ್ಕಾರ ದಿವಾಳಿ ಆಗಿಬಿಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ರಾಜಸ್ಥಾನದಲ್ಲಿ ಭಾಷಣ ಮಾಡಿದ್ದರು. ಈಗ ಕರ್ನಾಟಕದ ಗ್ಯಾರಂಟಿಗಳು ದೇಶಕ್ಕೆ ಮಾದರಿ ಆಗಿವೆ’ ಎಂದರು.

‘ಬಿಜೆಪಿಯವರು ಹಾಗೂ ನರೇಂದ್ರ ಮೋದಿ ದೇಶದಲ್ಲಿನ ಕೇವಲ ಶೇ 10ರಷ್ಟು ಸಿರಿವಂತರ ಬಗ್ಗೆ ಮಾತನಾಡುತ್ತಾರೆ. ಅವರಿಗೆ ಬೇಕಾದ ರೀತಿಯಲ್ಲಿ ತೆರಿಗೆ ಕಡಿತಗೊಳಿಸುತ್ತಾರೆ. ಆದರೆ, ಕಾಂಗ್ರೆಸ್ ಎಂದೂ ಬಡವರ ಪರವಿದೆ. ನಾವು ಬುದ್ಧ, ಬಸವ, ಅಂಬೇಡ್ಕರ್–ಗಾಂಧಿ ತತ್ವದಲ್ಲಿ ನಂಬಿಕೆ ಇಟ್ಟವರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.