ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಅವರೇ, ಏಳಿ ಎದ್ದೇಳಿ.. ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ: ಬಿಜೆಪಿ

Published 5 ಸೆಪ್ಟೆಂಬರ್ 2023, 10:33 IST
Last Updated 5 ಸೆಪ್ಟೆಂಬರ್ 2023, 10:33 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ. ಏಳಿ ಎದ್ದೇಳಿ ನಿದ್ದೆಯಿಂದ ಹೊರ ಬನ್ನಿ ಎಂದು ಬಿಜೆಪಿ ಲೇವಡಿ ಮಾಡಿದೆ.

ಬರಗಾಲ ವಿಚಾರ ಪ್ರಸ್ತಾಪಿಸಿ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಬಿಜೆಪಿ, ‘ನಿಲ್ಲುತ್ತಿಲ್ಲ ಅನ್ನದಾತನ ಆತ್ಮಹತ್ಯೆ ಸರಣಿ, ಕಾಂಗ್ರೆಸ್ ಸರ್ಕಾರ ಬಂದ ದಿನದಿಂದ 70ಕ್ಕೂ ಹೆಚ್ಚು ರೈತರು ಮೃತಪಟ್ಟಿದ್ದಾರೆ. ಬೆಳೆ ಬೆಳೆದ ನಮ್ಮ ರೈತರಿಗಿಲ್ಲ ಕಾವೇರಿ ನೀರು. ಆದರೆ, ತಮಿಳುನಾಡಿಗೆ ಪ್ರತಿ ದಿನ 5 ಸಾವಿರ ಕ್ಯುಸೆಕ್ಸ್ ಹರಿಸಲಾಗುತ್ತಿದೆ’ ಎಂದು ಕಿಡಿಕಾರಿದೆ.

‘ಕುಡಿಯುವ ನೀರಿಗೂ ರಾಜ್ಯದಲ್ಲಿ ಹಾಹಾಕಾರ ಎದುರಾಗಿದೆ. ಆದರೆ, ಕಲುಷಿತ ನೀರು ಪೂರೈಕೆ, ಅಪಾರ ಸಾವು– ನೋವು ಮುಂದುವರಿದಿದೆ. ಜತೆಗೆ ಕೃಷಿ ಸಚಿವ ಚಲುವರಾಯಸ್ವಾಮಿ ಅವರ ದುರಾಡಳಿತಕ್ಕೆ ಕಡಿವಾಣವೇ ಇಲ್ಲ’ ಎಂದು ಬಿಜೆಪಿ ಕುಟುಕಿದೆ.

‘ಮೊದಲೇ ಬೆಲೆ ಏರಿಕೆಗೆ ರೋಸಿ ಹೋಗಿದ್ದ ಜನರ ಮೇಲೆ ಇದೀಗ ಪ್ರತಿ ಕೆಜಿ ಅಕ್ಕಿ‌ ಬೆಲೆ ₹10ರಿಂದ ₹20ರಷ್ಟು ಏರಿಕೆಯ ಹೊರೆ ಹಾಕಲಾಗಿದೆ. 135 ತಾಲ್ಲೂಕುಗಳಲ್ಲಿ ಬರ ಬಂದಿದ್ದರೂ, ಕಾಂಗ್ರೆಸ್ ಸರ್ಕಾರ ಬರಗಾಲ ಘೋಷಿಸದೆ ಮೊಂಡಾಟವಾಡುತ್ತಿದೆ. ಅಡಳಿತದ ಅನುಭವ ಹೊಂದಿರುವ ಸಿಎಂ ಸಿದ್ದರಾಮಯ್ಯ ಅವರು ಈ ಪರಿ ಮೌನಕ್ಕೆ ಶರಣಾಗಿರುವುದು ಕನ್ನಡಿಗರ ದುರಂತವೇ ಸರಿ’ ಎಂದು ಬಿಜೆಪಿ ಟೀಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT