ಈಗ ಜ್ಞಾನೋದಯ ಆಯ್ತಾ?
‘ನಿಮ್ಮದೇ (ಬಿಜೆಪಿ) ಸರ್ಕಾರ ಇತ್ತು. ಆಗ ನೀವು ಯಾಕೆ ವಕ್ಫ್ ಆಸ್ತಿಗೆ ಸಂಬಂಧಿ
ಸಿದಂತೆ ಕ್ರಮ ಕೈಗೊಂಡಿಲ್ಲ. ಈಗ ನಿಮಗೆ ಜ್ಞಾನೋದಯ ಆಯ್ತಾ? ವಕ್ಫ್ ವಿಚಾರ ಇಟ್ಟುಕೊಂಡು ಉಪ ಚುನಾವಣೆಗೆ ಹೋದ್ರಿ. ಶಿಗ್ಗಾವಿ, ಚನ್ನಪಟ್ಟಣ, ಸಂಡೂರಿನಲ್ಲಿ ಜನರು ನಿಮಗೆ ಮೂರು ನಾಮ ಹಾಕಿ, ಚೊಂಬು ಕೊಟ್ಟಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಯವರನ್ನು ಛೇಡಿಸಿದರು.
‘ಅಪಪ್ರಚಾರ ಮಾಡ್ತೀರಾ? ಮಾನ, ಮರ್ಯಾದೆ ಇಲ್ವಾ? ನಿಮಗೆ ನಾಚಿಕೆ ಆಗಬೇಕು. ಈಗ ನೀವು ಸುಳ್ಳು ಹೇಳಿದರೆ ಹೆದರಬೇಕೆ’ ಎಂದು ಕೇಳಿದರು.