ರಾಮನಗರ: ರಾಜ್ಯದಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿ ಇರುವ ಕಾಂಗ್ರೆಸ್ ಕೊರೊನಾ ಗೋಲ್‌ಮಾಲ್ ಕುರಿತ ಆರೋಪ ಸಾಬೀತುಪಡಿಸಲು ವಿಫಲವಾಗಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ದೂರಿದರು.

ಚನ್ನಪಟ್ಟಣದಲ್ಲಿ ಬುಧವಾರ ಪತ್ರಕರ್ತರ ಜೊತೆಯಲ್ಲಿ ಮಾತನಾಡಿದ ಅವರು, ‘ಯಾವುದೇ ಆರೋಪ ಮಾಡಿದರೆ ಅದಕ್ಕೆ ಸೂಕ್ತ ದಾಖಲೆ ಇರಬೇಕು. ಆದರೆ ಈ ವಿಚಾರದಲ್ಲಿ ಸರಿಯಾದ ದಾಖಲೆ ತೋರಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಕಳೆದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕೆಲಸ ಮಾಡಿದ್ದು ನಾನು. ಆದರೆ ಹೆಸರು ಮಾಡಿದ್ದು ಮಾತ್ರ ಕಾಂಗ್ರೆಸ್’ಎಂದರು.

‘ನನ್ನ ಸರ್ಕಾರ ಪತನ ಆಗಲು ಅಕ್ರಮ ಮಾಫಿಯಾ ಹಣವೇ ಕಾರಣ’ಎಂದು ಪುನರುಚ್ಛರಿಸಿದ ಅವರು ‘ನನಗೆ ನಶೆ ಬರಿಸಲು ಯಾರಿಂದಲೂ ಸಾಧ್ಯ ಇಲ್ಲ. ಕೆಲವರಿಗೆ ಅಧಿಕಾರ ಬಂದಾಗ ನಶೆ ಬರುತ್ತೆ. ಆದರೆ ಅಧಿಕಾರ ಯಾರಿಗೂ ಎಂದೂ ಶಾಶ್ವತ ಅಲ್ಲ’ಎಂದು ಸಚಿವ ಸಿ.ಟಿ. ರವಿ ಹೇಳಿಕೆಗೆ ಟಾಂಗ್ ನೀಡಿದರು.

ಮಂಗಳೂರು ಗಲಭೆ ಆಗಿ ವರ್ಷ ಆಯಿತು. ಮೊನ್ನೆ ಡಿ.ಜೆ. ಹಳ್ಳಿ ಗಲಭೆ ಆಯ್ತು. ಈಗ ಡ್ರಗ್ಸ್ ದಂಧೆ ಬೆಳಕಿಗೆ ಬಂತು. ಇದೆಲ್ಲದರ ತನಿಖೆ ಮಾತ್ರ ನಡೆಯುತ್ತಲೇ ಇದೆ. ಈ ಘಟನೆಗಳ ಕಿಂಗ್ ಪಿನ್‌ಗಳನ್ನು ಬಂಧಿಸಲು ಸರ್ಕಾರಕ್ಕೆ ದಿಟ್ಟತನ ಇಲ್ಲಎಂದು ಆರೋಪಿಸಿದರು.

ದೇಶದಲ್ಲಿ ಆರ್ಥಿಕತೆ ಸಂಪೂರ್ಣವಾಗಿ ಕುಸಿದಿದೆ. ಇದನ್ನು ಸರಿಪಡಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.