ಹಚ್ಚ ಹಸಿರಿನಿಂದ ಕಂಗೊಳಿಸುವ ಪ್ರಕೃತಿಯ ಮಡಿಲಿನಲ್ಲಿ ಗಗನಚುಕ್ಕಿ ಮತ್ತು ಭರಚುಕ್ಕಿ ಎಂಬ ಅವಳಿ ಜಲಪಾತಗಳು ಮೈದುಂಬಿ ಧುಮ್ಮಿಕ್ಕುತ್ತಿದ್ದು, ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ಬೆಂಗಳೂರಿನಿಂದ 145 ಕಿ.ಮೀ, ಮೈಸೂರಿನಿಂದ 67 ಕಿ.ಮೀ ದೂರದಲ್ಲಿ ಇರುವ ಈ ಜಲಪಾತಗಳನ್ನು ತಲುಪಲು ಉತ್ತಮ ರಸ್ತೆ ಮಾರ್ಗವಿದ್ದು, ರಜಾ ದಿನ ಕಳೆಯಲು ಅತ್ಯುತ್ತಮ ತಾಣ ಇದಾಗಿದೆ.