ಬುಧವಾರ, 22 ಅಕ್ಟೋಬರ್ 2025
×
ADVERTISEMENT
ADVERTISEMENT

Tax Devolution | ತೆರಿಗೆ ಪಾಲು: ಜಗಳ ಜೋರು

Published : 21 ಅಕ್ಟೋಬರ್ 2025, 23:30 IST
Last Updated : 21 ಅಕ್ಟೋಬರ್ 2025, 23:30 IST
ಫಾಲೋ ಮಾಡಿ
Comments
‘ತೆರಿಗೆ ಪಾಲು, ನೆರೆ ಪರಿಹಾರ, ಅನುದಾನದ ಹಂಚಿಕೆಯಲ್ಲಿ ಕೇಂದ್ರದ ಎನ್‌ಡಿಎ ಸರ್ಕಾರ ಅನ್ಯಾಯ ಮಾಡುತ್ತಿದೆ’ ಎಂಬ ಕಾಂಗ್ರೆಸ್‌ ಸರ್ಕಾರದ ಪ್ರಹಾರಕ್ಕೆ ತಿರುಗೇಟು ನೀಡಿರುವ ವಿರೋಧ ಪಕ್ಷ ಬಿಜೆಪಿ, ‘ತೆರಿಗೆ ಪಾಲಿನ ಹಣವನ್ನು ರಾಜ್ಯ ಸರ್ಕಾರ ಲೂಟಿ ಮಾಡುತ್ತಿದೆ’ ಎಂದು ಹರಿಹಾಯ್ದಿದೆ. ಪಾಲಿನ ವಿಷಯ ಎರಡೂ ಪಕ್ಷಗಳ ನಾಯಕರ ಮಧ್ಯೆ ವಾಕ್ಸಮರಕ್ಕೆ ದಾರಿ ಮಾಡಿಕೊಟ್ಟಿದೆ.
‘ಅಮಾವಾಸ್ಯೆ ಸೂರ್ಯ ಪ್ರಶ್ನಿಸಲಿ’
‘ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ಸಂಸದ ಪಿ.ಸಿ.ಮೋಹನ್‌ ಅವರು ಪ್ರಧಾನಿ ಅವರನ್ನು ಗಟ್ಟಿಯಾಗಿ ಕೇಳುತ್ತಿಲ್ಲ. ಬೆಂಗಳೂರು ದಕ್ಷಿಣ ಸಂಸದ ಅಮಾವಾಸ್ಯೆ ಸೂರ್ಯ ಕೂಡ ಪ್ರಶ್ನಿಸುತ್ತಿ‌ಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು. ‘ಮೆಟ್ರೊ ಹಳದಿ ಮಾರ್ಗ ಉದ್ಘಾಟನೆಗೆ ಬಂದಿದ್ದ ಮೋದಿ ಅವರು ಕೆರೆ ಅಭಿವೃದ್ದಿಗೆ ₹3 ಸಾವಿರ ಕೋಟಿ, ಹೊರ ವರ್ತುಲ ರಸ್ತೆಗೆ ₹3 ಸಾವಿರ ಕೋಟಿ ಹಾಗೂ 15ನೇ ಹಣಕಾಸು ಯೋಜನೆಯಡಿ ಕಡಿಮೆಯಾದ ₹5,495 ಕೋಟಿ ಸೇರಿ ₹11,495 ಕೋಟಿ ನೀಡುವ ಭರವಸೆ ನೀಡಿದರೂ ಈವರೆಗೂ ಒಂದು ಪೈಸೆಯನ್ನೂ ನೀಡಿಲ್ಲ. ಬೆಂಗಳೂರು ಅಭಿವೃದ್ದಿಗೆ ನೆರವು ಕೋರಿದರೂ ಸ್ಪಂದಿಸಲಿಲ್ಲ’ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಜಿಎಸ್‌ಟಿ ಪಾಲಿನ ಹಂಚಿಕೆಯಲ್ಲಿ ಅನ್ಯಾಯವಾಗಿದ್ದರೂ ಮೋದಿ ಅವರಿಗೆ ಮತ ಹಾಕಿ ತಲೆ ಮೇಲೆ ಕೈ ಇಟ್ಟುಕೊಳ್ಳುವ ಸನ್ನಿವೇಶ ಮತದಾರರು ತಂದುಕೊಂಡಿದ್ದೀರಿ‌. ಮುಂದೆ ಎಚ್ಚರಿಕೆಯಿಂದಲೇ ಮತ ಹಾಕಿ
ಸಿದ್ದರಾಮಯ್ಯ, ಮುಖ್ಯಮಂತ್ರಿ
ಕರ್ನಾಟಕದಲ್ಲಿ ನಡೆಯುತ್ತಿರುವ ತೆರಿಗೆ ಕಳ್ಳತನದ ಬಗ್ಗೆ ಯಾವಾಗ ಮಾತನಾಡುತ್ತೀರಿ? ಕೆಲಸಕ್ಕೆ ಕರೀಬೇಡಿ, ಊಟಕ್ಕೆ ಮಾತ್ರ ಮರೀಬೇಡಿ ಎನ್ನುವಂತೆ ಕಾಂಗ್ರೆಸ್ ಸರ್ಕಾರ ನಡೆದುಕೊಳ್ಳುತ್ತಿದೆ
ಆರ್. ಅಶೋಕ, ವಿರೋಧ ಪಕ್ಷದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT