ಬೆಂಗಳೂರು: ಬ್ರಿಟಿಷರ ವಿರುದ್ಧ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮ ಅವರ 200ನೇ ಜಯಂತಿ ಅಂಗವಾಗಿ ಕೇಂದ್ರ ಸರ್ಕಾರವು ₹200 ಮೌಲ್ಯದ ವಿಶೇಷ ನಾಣ್ಯ ರೂಪಿಸಿದೆ.

ಈ ನಾಣ್ಯವು ಶೇ 50ರಷ್ಟು ಬೆಳ್ಳಿಯನ್ನು ಒಳಗೊಂಡಿದೆ. ಉಳಿದಂತೆ ಶೇ 40ರಷ್ಟು ತಾಮ್ರ, ಶೇ 5ರಷ್ಟು ಸತು ಮತ್ತು ಶೇ 5ರಷ್ಟು ನಿಕೆಲ್ ಅನ್ನು ಈ ನಾಣ್ಯ ತಯಾರಿಕೆಯಲ್ಲಿ ಬಳಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ಅಧಿಸೂಚನೆಯಲ್ಲಿ ತಿಳಿಸಿದೆ.

ಹೈದರಾಬಾದ್ನಲ್ಲಿ ಈ ನಾಣ್ಯ ತಯಾರಾಗಿದೆ. ನಾಣ್ಯದ ಒಂದು ಬದಿಯಲ್ಲಿ ರಾಣಿ ಚೆನ್ನಮ್ಮರ ಚಿತ್ರವಿರಲಿದೆ. ನಾಣ್ಯದ ಮೇಲೆ ಮತ್ತು ಕೆಳಭಾಗದಲ್ಲಿ ‘ಕಿತ್ತೂರಿನ ರಾಣಿ ಚೆನ್ನಮ್ಮರ ಜಯದ 200ನೇ ವರ್ಷಾಚರಣೆ’ ಎಂಬ ಬರಹ ಇರಲಿದೆ. ಇನ್ನೊಂದು ಬದಿಯಲ್ಲಿ ₹200 ಸಂಕೇತ ಮತ್ತು ರಾಷ್ಟ್ರ ಲಾಂಛನ ಇರಲಿದೆ. ನಾಣ್ಯದ ಸುತ್ತಳತೆ 44 ಮಿ.ಮೀ. ಇದ್ದು, 35 ಗ್ರಾಂ ತೂಕ ಹೊಂದಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.