ನವದೆಹಲಿ: ‘ಕೋಲಾರ ಜಿಲ್ಲೆ ಬರಪೀಡಿತ ಜಿಲ್ಲೆಯಾಗಿದೆ. ನೀರಿನ ಮೂಲಗಳಿಲ್ಲ. ಹಾಗಾಗಿ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷ್ಣಾ ನದಿಯಿಂದ ನೀರು ಒದಗಿಸಬೇಕು’ ಎಂದು ಕೋಲಾರ ಸಂಸದ ಎಂ.ಮಲ್ಲೇಶಬಾಬು ಆಗ್ರಹಿಸಿದರು.
.ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು: ತಗ್ಗು ಪ್ರದೇಶಗಳು ಜಲಾವೃತ.
ಲೋಕಸಭೆಯಲ್ಲಿ ಗುರುವಾರ ಕೇಂದ್ರ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಶ್ರೀನಿವಾಸಪುರ ಮಾವು ಬೆಳೆಗೆ ಪ್ರಸಿದ್ಧವಾಗಿದೆ. ಆದರೆ, ಸಂಸ್ಕರಣೆಗೆ ವ್ಯವಸ್ಥೆ ಇಲ್ಲ. ಜಿಲ್ಲೆಯಲ್ಲಿ ಆಹಾರ ಸಂಸ್ಕರಣ ಘಟಕ ಸ್ಥಾಪಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

2016ರ ಬಜೆಟ್ನಲ್ಲಿ ಕೋಲಾರಕ್ಕೆ ರೈಲ್ವೆ ಕೋಚ್ ಫ್ಯಾಕ್ಟರಿ ಘೋಷಣೆಯಾಗಿದೆ. ಅದನ್ನು ಕಾರ್ಯರೂಪಕ್ಕೆ ತರಬೇಕು. ಕೆಜಿಎಫ್ನಲ್ಲಿರುವ ಬಿಇಎಂಎಲ್ನ ನೌಕರರ ಕಾಯಂಗೊಳಿಸಬೇಕು. ಹೊಸಕೋಟೆ–ಮದನಪಲ್ಲಿ ಸೇರಿದಂತೆ ಹಲವು ಹೆದ್ದಾರಿಗಳನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಅವರು ಒತ್ತಾಯಿಸಿದರು.
.ಕೋಲಾರಕ್ಕೆ ಕೃಷ್ಣಾ ನೀರು: ಮಲ್ಲೇಶಬಾಬು .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.