ಬೆಂಗಳೂರು: ಬಿಡಬ್ಲ್ಯೂ ಮಾರ್ಕೆಟಿಂಗ್ ವರ್ಲ್ಡ್ ಮತ್ತು ಬಿಡಬ್ಲ್ಯೂ ಬಿಸಿನೆಸ್ ವರ್ಲ್ಡ್ ಸಹಯೋಗದಲ್ಲಿ ನೀಡುವ ಸ್ವರ್ಣ ಪದಕಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಭಾಜನವಾಗಿದೆ.

ಯುಪಿಐ ಸೌಲಭ್ಯದೊಂದಿಗೆ ಅವತಾರ್ 4.0 (AWATAR 4.0) ಯೋಜನೆಗೆ 'ಟೆಕ್ನಾಲಜಿ ಆಫ್ ದಿ ಇಯರ್' ವಿಭಾಗದಲ್ಲಿ ಮತ್ತು 'ಟ್ರಾವೆಲ್, ಟೂರಿಸಂ & ಲೆಷರ್' ವಿಭಾಗದಲ್ಲಿ ಬಸ್ಗಳ ಬ್ರ್ಯಾಡಿಂಗ್ಗೆ ಚಿನ್ನದ ಪದಕಗಳನ್ನು ಜಯಿಸಿದೆ.

ಈ ಪ್ರಶಸ್ತಿಗಳನ್ನು ಬಿಡಬ್ಲ್ಯೂ ಬಿಸಿನೆಸ್ ವರ್ಲ್ಡ್ ಮತ್ತು ಎಕ್ಸ್ಚೇಂಜ್ ಫಾರ್ ಮೀಡಿಯಾ ಗ್ರೂಪ್ನ ಹಿರಿಯ ಸಂಪಾದಕರಾದ ರುಹೈಲ್ ಅಮಿನ್ ಅವರು ವಿತರಿಸಿದ್ದಾರೆ. ಕೆಎಸ್ಆರ್ಟಿಸಿ ಪರವಾಗಿ ವೀಣಾ ದೇಸಾಯಿ, ಮುಖ್ಯ ಸಂಚಾರ ವ್ಯವಸ್ಥಾಪಕರು (ವಾಣಿಜ್ಯ) ಮತ್ತು ರಾಘವೇಂದ್ರ ಎಸ್.ಎನ್., ವಿಭಾಗೀಯ ಸಂಚಲನಾಧಿಕಾರಿ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ.

ಮೇ 27ರಂದು ಬಿಡಬ್ಲ್ಯೂ ಮಾರ್ಕೆಟಿಂಗ್ ವರ್ಲ್ಡ್ ಮತ್ತು ಬಿಡಬ್ಲ್ಯೂ ಬಿಸಿನೆಸ್ ವರ್ಲ್ಡ್ ಸಹಯೋಗದಲ್ಲಿ ಎರಡನೇ ಆವೃತ್ತಿಯ 'ಬಿಡಬ್ಲ್ಯೂ ಮೆರಿಟ್ ಅವಾರ್ಡ್ಸ್ 2025' ಕಾರ್ಯಕ್ರಮ ಮುಂಬೈಯಲ್ಲಿ ಆಯೋಜನೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.