ಬೆಂಗಳೂರು: ಕಾರ್ಖಾನೆ ಮತ್ತು ಕಾರ್ಮಿಕರ ಮಧ್ಯೆ ಸಮಸ್ಯೆ ಉಂಟಾದರೆ, ಅದನ್ನು ಬಗೆಹರಿಸುವಲ್ಲಿ ಸರ್ಕಾರವು ಕಾರ್ಮಿಕರ ಹಿತಾಸಕ್ತಿಯನ್ನೇ ಪ್ರಧಾನವಾಗಿ ಪರಿಗಣಿಸುತ್ತದೆ. ಕಾರ್ಖಾನೆಯ ಹಿತಾಸಕ್ತಿಯೂ ಮುಖ್ಯ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

ರಾಜ್ಯದ ವಿವಿಧ ಕಾರ್ಖಾನೆಗಳ ಆಡಳಿತ ಮಂಡಳಿ ಸದಸ್ಯರ ಜತೆಗೆ ವಿಕಾಸಸೌಧದಲ್ಲಿ ಬುಧವಾರ ಸಚಿವರು ಸಭೆ ನಡೆಸಿದರು. ಬೆಳಗಾವಿಯ ಹಿಂಡಾಲ್ಕೊ ಕಾರ್ಖಾನೆಯ ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವಣ ಸಮಸ್ಯೆ, ಕೋಲಾರದ ಮಾಲೂರಿನ ವೆರ್ಜಾ ಅಟ್ಯಾಚ್ಮೆಂಟ್ನ ನೌಕರರ ಸಂಘ ಹಾಗೂ ಆಡಳಿತ ಮಂಡಳಿ ನಡುವಣ ಸಮಸ್ಯೆಗಳ ಬಗ್ಗೆ ಅವರು ಚರ್ಚೆ ನಡೆಸಿದರು.

ಬೆಳಗಾವಿ ಶಾಸಕರಾದ ಆಸೀಫ್ ಸೇಠ್, ಕಾರ್ಮಿಕ ಆಯುಕ್ತ ಗೋಪಾಲಕೃಷ್ಣ, ಕಾರ್ಖಾನೆಗಳು ಮತ್ತು ಬಾಯ್ಲರುಗಳ ಇಲಾಖೆ ನಿರ್ದೇಶಕ ಶ್ರೀನಿವಾಸ್, ಸಹಾಯಕ ಕಾರ್ಮಿಕ ಆಯುಕ್ತ ಜಹೀರ್ ಭಾಷಾ ಸಭೆಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.