ಬೆಂಗಳೂರು: ಹಾಸನದಲ್ಲಿ ಡಿ. 5 ರಂದು ಹಮ್ಮಿಕೊಂಡಿರುವುದು ಸ್ವಾಭಿಮಾನಿ ಸಮಾವೇಶ ಅಲ್ಲ, ಕಾಂಗ್ರೆಸ್ ಕಾರ್ಯಕರ್ತರ ಅಭಿನಂದನಾ ಸಮಾರಂಭ. ಅಂಥ ಸಮಾವೇಶಗಳನ್ನು ಇತರೆ ಜಿಲ್ಲೆಗಳಲ್ಲೂ ಆಯೋಜಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ತಿಳಿಸಿದರು.

ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅವರು, ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದವರು. ಅವರು ಕರ್ನಾಟಕದ ಮುಖ್ಯಮಂತ್ರಿ. ಹಾಗಾಗಿ, ಹಾಸನದಲ್ಲಿ ಅಹಿಂದ ಸಮಾವೇಶ ನಡೆಸುತ್ತಿಲ್ಲ ಎಂದರು.

ಗ್ಯಾರಂಟಿಗಳಿಗಾಗಿ ನಿಗಮದ ಆಸ್ತಿಯನ್ನೇ ಮಾರಾಟ ಮಾಡುವ ದುಸ್ಥಿತಿ ಸರ್ಕಾರಕ್ಕೆ ಬಂದಿಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗ ಬಿಬಿಎಂಪಿಯನ್ನೇ ಅಡಮಾನ ಇಟ್ಟಿದ್ದರು. ವಿಧಾನಸೌಧ ಒಂದನ್ನ ಬಿಟ್ಟು ಬಹುತೇಕ ಎಲ್ಲ ಆಸ್ತಿಪಾಸ್ತಿಗಳನ್ನೂ ಅಡವಿಟ್ಟಿದ್ದರು. ಸಿದ್ದರಾಮಯ್ಯ ಅವರು ಉತ್ತಮ ಆರ್ಥಿಕ ತಜ್ಞ. ಗ್ಯಾರಂಟಿ ಯೋಜನೆಗಳಿಗೆ ₹58 ಸಾವಿರ ಕೋಟಿ ಮೀಸಲಿಟ್ಟಿದ್ದಾರೆ. ಸಾಲದ ಹೊರೆ ಹೊರಿಸಿಲ್ಲ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.