ಕಾಂಗ್ರೆಸ್ ಹಿಂದೆ ಅಧಿಕಾರದಲ್ಲಿ ಇದ್ದಾಗ ಪ್ರತಿ ಎಕರೆಗೆ ₹1.20 ಲಕ್ಷದಂತೆ ಭೂಮಿ ನೋಂದಣಿ ಮಾಡುವ ನಿರ್ಧಾರ ತೆಗೆದುಕೊಂಡಿತ್ತು. ಬಿಜೆಪಿ ಶಾಸಕರು ವಿರೋಧಿಸಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದಾಗಲೂ ವಿರೋಧ ವ್ಯಕ್ತವಾಗಿತ್ತು. ದರ ಹೆಚ್ಚಿಸುವುದಾಗಿ ಆಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಕೋರ್ಟ್‌ಗೆ ಹೇಳಿದ್ದರು. ಈಗ ಸಿದ್ದರಾಮಯ್ಯ ಸರ್ಕಾರ ₹1.20 ಲಕ್ಷಕ್ಕೆ ಎಕರೆಯಂತೆ 2 ಸಾವಿರ ಎಕರೆ ಹಾಗೂ ₹1.50 ಲಕ್ಷ ಎಕರೆಯಂತೆ 1,667 ಎಕರೆ ಕೊಡುವ ನಿರ್ಧಾರ ಮಾಡಿದೆ. ಜಿಂದಾಲ್ ಜೊತೆಗೆ ಸರ್ಕಾರ ಒಳ ಒಪ್ಪಂದ ಮಾಡಿಕೊಂಡಿದೆ. ಕೋಟ್ಯಂತರ ಬೆಲೆಯ ಜಮೀನನ್ನು ಕೇವಲ ₹ 20 ಕೋಟಿಗೆ ನೀಡಿದೆ. 954 ಎಕರೆ ಕೆಪಿಸಿಎಲ್‌ಗೆ ಸೇರಿದ್ದು, ಕೆಪಿಸಿಎಲ್ ಬೇಡಿಕೆಗೆ ಸರ್ಕಾರ ಸ್ಪಂದಿಸಿಲ್ಲ ಎಂದು ದೂರಿದರು.