ದೇಶದಲ್ಲಿ ಬುಧವಾರ ತೀವ್ರ ಚರ್ಚೆ ಹುಟ್ಟು ಹಾಕಿದ ಘಟನೆ ಲೋಕಸಭೆಯ ಸದನದೊಳಗೇ ಇಬ್ಬರು ಅಪರಿಚಿತರು ನುಗ್ಗಿದ್ದು. ಅದರಲ್ಲಿಯೂ, ಹೀಗೆ ನುಗ್ಗಿದವರಿಗೆ ಕರ್ನಾಟಕದ ಸಂಪರ್ಕವಿದೆ ಎಂದು ತಿಳಿದಾಗ ರಾಜ್ಯದಲ್ಲಿ ಎಲ್ಲರೂ ಅಚ್ಚರಿಗೊಳಗಾಗಿದ್ದಾರೆ. ಹೀಗೆ, ಲೋಕಸಭೆಯೊಳಗೆ ನುಗ್ಗಿದ ಮೈಸೂರಿನ ಮನೋರಂಜನ್, ಮೈಸೂರು–ಕೊಡಗು ಸಂಸದ ಪ್ರತಾಪ್ ಸಿಂಹ ಅವರಿಂದ ಪಾಸ್ ಪಡೆದಿದ್ದರು ಎಂಬ ಮಾಹಿತಿ ಹೊರಬೀಳುತ್ತಿದ್ದಂತೆಯೇ, ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ವಾಕ್ಸಮರ ನಡೆಯುತ್ತಿದೆ. ಅಷ್ಟಕ್ಕೂ, ಯಾರು ಈ ಮನೋರಂಜನ್ ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.