ಮಾನಗಡ (ರಾಜಸ್ಥಾನ):ಬ್ರಿಟಿಷರು 1913ರಲ್ಲಿ 1,500 ಬುಡಕಟ್ಟು ಜನರನ್ನು ಗುಂಡಿಟ್ಟು ಹತ್ಯೆ ಮಾಡಿದ ಮಾನಗಡ ಧಾಮ್ ರಾಷ್ಟ್ರೀಯ ಸ್ಮಾರಕವಾಗುವತ್ತ ಹೆಜ್ಜೆ ಇಟ್ಟಿದ್ದು, ರಾಜಸ್ಥಾನದ ಜತೆಗೆ ಗುಜರಾತ್, ಮಧ್ಯ ಪ್ರದೇಶ ಮತ್ತು ಮಹಾರಾಷ್ಟ್ರ ಸರ್ಕಾರಗಳು ಮಾನಗಡ ಧಾಮ್‌ನ ಸಮಗ್ರ ಅಭಿವೃದ್ಧಿಗೆ ಮಾರ್ಗಸೂಚಿಯನ್ನು ಸಿದ್ಧಪಡಿಸಬೇಕು ಎಂದು ಪ್ರಧಾನಿ ಸೂಚಿಸಿದ್ದಾರೆ.
ರಾಜಸ್ಥಾನದ ಬನ್ಸ್ವಾರಾ ಜಿಲ್ಲೆಯಲ್ಲಿರುವ ಮಾನಗಡ ಧಾಮವು ಗುಜರಾತ್, ಮಧ್ಯಪ್ರದೇಶದ ಗಡಿಗಳಿಗೆ ಸಮೀಪದಲ್ಲಿದೆ. ಮಂಗಳವಾರ ಇಲ್ಲಿಗೆ ಭೇಟಿ ನೀಡಿದ ಪ್ರಧಾನಿ ಹುತಾತ್ಮ ಬುಡಕಟ್ಟು ಸಮುದಾಯದವರನ್ನು ಸ್ಮರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.