ಬೆಂಗಳೂರು: ಮೇಕೆದಾಟು ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು(ಡಿಪಿಆರ್) 2018–19ರಲ್ಲಿ ಸಿದ್ಧಪಡಿಸಿದ್ದು, 2025-26ರ ದರ ಪಟ್ಟಿಯನ್ನು ಆಧರಿಸಿ ಪರಿಷ್ಕೃತ ಡಿಪಿಆರ್ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಜಲಸಂಪನ್ಮೂಲ ಇಲಾಖೆ ಹೇಳಿದೆ.

ಹಿಂದೆ ಸಿದ್ಧಪಡಿಸಿದ್ದ ಡಿಪಿಆರ್ ಅನ್ನು 2019ರ ಜನವರಿಯಲ್ಲಿ ಕೇಂದ್ರ ಜಲ ಆಯೋಗಕ್ಕೆ (ಸಿಡಬ್ಲ್ಯುಸಿ) ಸಲ್ಲಿಸಲಾಗಿತ್ತು. ಆಡಳಿತಾತ್ಮಕ ಮತ್ತು ಕಾನೂನು ನಿರ್ಬಂಧಗಳಿಂದಾಗಿ ಸಿಡಬ್ಲ್ಯುಸಿ ಅದನ್ನು ಪರಿಶೀಲನೆಗೆ ತೆಗೆದುಕೊಂಡಿರಲಿಲ್ಲ. ಈಗ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಹೀಗಾಗಿ, ಪ್ರಸ್ತಾವವನ್ನು ಮುಂದುವರಿಸಲು ಹಾದಿ ಸುಗಮವಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ತಾಂತ್ರಿಕ ಸಲಹೆಗಾರ ಕೆ.ಜೈಪ್ರಕಾಶ್ ಮಾಹಿತಿ ನೀಡಿದ್ದಾರೆ.

ಹಿಂದೆ ಸಿದ್ಧಪಡಿಸಿದ್ದ ಡಿಪಿಆರ್ ಸಿಡಬ್ಲ್ಯುಸಿಯಲ್ಲಿಯೇ ಇದೆ. ಯಾವುದೆ ಪರಿಶೀಲನೆಗೆ ಒಳಪಡದ ಕಾರಣ, ಪ್ರಸ್ತುತ ಚಾಲ್ತಿ ದರಗಳನ್ನು ಪರಿಗಣಿಸಿ ಪರಿಷ್ಕೃತ ಡಿಪಿಆರ್ ಸಿದ್ದಪಡಿಸಲಾಗುತ್ತದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.