ಬಳ್ಳಾರಿ: ‘ಅಕ್ರಮ ಗಣಿಗಾರಿಕೆಯಲ್ಲಿ ಶಾಮೀಲಾದ ಆರೋಪದ ಮೇರೆಗೆ ಗಣಿಗಾರಿಕೆ ಗುತ್ತಿಗೆಯ ರದ್ದತಿಗೆ ಶಿಫಾರಸು ಮಾಡಲಾಗಿರುವ ಹಿಂದ್ ಟ್ರೇಡರ್ಸ್ (hind traders) ಕಂಪನಿಯ ಪಾಲುದಾರರಾಗಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಸಂಬಂಧಿಗಳಾದ ಬಂಗಾರು ಸೋಮಶೇಖರ್, ಕೆ.ಶೈಲಾ ಮತ್ತು ಈಶ್ವರಪ್ಪನವರ ಆಪ್ತ ಪುಟ್ಟಸ್ವಾಮಿಗೌಡ ಸೇರ್ಪಡೆಗೊಂಡಿದ್ದಾರೆ. ಇದರ ಹಿಂದೆ ಸಚಿವರ ಕೈವಾಡವಿದೆ’ ಎಂದು ಗಣಿ ಉದ್ಯಮಿ ಟಪಾಲ್ ಗಣೇಶ್ ಆರೋಪಿಸಿದರು.

‘ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ ಹೆಗಡೆ ಅವರ ವರದಿಯನ್ನು ಆಧರಿಸಿ 19 ಹೆಕ್ಟೇರ್ ಪ್ರದೇಶದ ಗುತ್ತಿಗೆಯನ್ನು ರದ್ದು ಮಾಡಬೇಕು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಶಿಫಾರಸು ಮಾಡಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ ಪತ್ರ ಬರೆದಿತ್ತು. ಆದರೆ ಆ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಇಂಥ ಸನ್ನಿವೇಶದಲ್ಲೇ ಸಚಿವರ ಆಪ್ತರು 2018ರಲ್ಲಿ ಕಂಪನಿಯ ಪಾಲುದಾರರಾಗಿ ಸೇರ್ಪಡೆಗೊಂಡಿದ್ದಾರೆ. ಸಚಿವರು ತೆರೆಮರೆಯಲ್ಲಿ ನಿಂತು ವಿವಾದಿದ ಗಣಿ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವ ಹುನ್ನಾರ ನಡೆಸುತ್ತಿರುವಂತಿದೆ’ ಎಂದು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಈ ಬಗ್ಗೆ ಸಚಿವರ ಗಮನ ಸೆಳೆಯುವ ಸಲುವಾಗಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಅವರ ಆಪ್ತಕಾರ್ಯದರ್ಶಿಯು ಪಾಲುದಾರಿಕೆಯನ್ನು ಸಮರ್ಥಿಸಿಕೊಂಡು ಮಾತನಾಡಿದ್ದರು. ಆದರೆ, ಅಕ್ರಮ ಗಣಿಗಾರಿಕೆಯಲ್ಲಿ ಶಾಮೀಲಾದ ಕಂಪನಿಯಲ್ಲಿ ಸಚಿವರ ಆಪ್ತರು ಪಾಲುದಾರಿಕೆ ಹೊಂದಿರುವುದು ಅವರಿಗೆ ಶೋಭೆ ತರುವಂಥದ್ದಲ್ಲ’ ಎಂದು ಪ್ರತಿಪಾದಿಸಿದರು.

‘ಸಚಿವರ ಆಪ್ತರು ಪಾಲುದಾರರಾಗಿರುವ ಸಂಸ್ಥೆಯ ಗುತ್ತಿಗೆ ಪ್ರದೇಶದ ಸುತ್ತಲೇ ಅಂತರರಾಜ್ಯ ಗಡಿ ಗುರುತಿಸುವ ಸಮೀಕ್ಷೆಯೂ ನಡೆದಿದೆ. ಗಣಿಗಾರಿಕೆ ವಿವಾದ ಮತ್ತು ಸಮೀಕ್ಷೆಯ ಕಾರಣಕ್ಕಾಗಿ ನಿಗದಿತ ಗಡುವಿನಲ್ಲಿ ಗಣಿಗಾರಿಕೆ ನಡೆಸಲು ಅವಕಾಶ ದೊರಕಿಲ್ಲ. ಆದರೆ ಗುತ್ತಿಗೆ ಅವಧಿ ಮುಗಿದಿದೆ. ಹೀಗಾಗಿ ಗಣಿಗಾರಿಕೆ ನಡೆಸದ ಅವಧಿಯನ್ನು ಪರಿಗಣಿಸಿ ಮತ್ತೆ ಗಣಿಗಾರಿಕೆಗೆ ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್ನಲ್ಲಿ ನಾವು ಅರ್ಜಿ ಸಲ್ಲಿಸಿದ್ದೇವೆ. ಹಿಂದ್ ಟ್ರೇಡರ್ಸ್ ಕೂಡ ಅರ್ಜಿ ಸಲ್ಲಿಸಿದೆ’ ಎಂದು ಹೇಳಿದರು.

‘ಅಕ್ರಮ ಗಣಿಗಾರಿಕೆಯ ಕಳಂಕವನ್ನು ಹೊತ್ತ ಕಂಪನಿಯ ಪಾಲುದಾರಿಕೆಯನ್ನು ಹೊಂದುವ ಅಗತ್ಯವೇನಿತ್ತು? ಕಳಂಕ ಹೊಂದಿಲ್ಲದ ಕಂಪನಿಯ ಪಾಲುದಾರಿಕೆಯನ್ನು ಹೊಂದಿದ್ದರೆ ನಮ್ಮ ಆಕ್ಷೇಪವೇನೂ ಇರುತ್ತಿರಲಿಲ್ಲ. ನೆಲ–ಜಲ ಸಂರಕ್ಷಿಸುವ ಹೊಣೆ ಹೊತ್ತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಂಥ ಮಹತ್ವದ ಖಾತೆ ಸಚಿವರಾಗಿರುವ ಈಶ್ವರಪ್ಪನವರು ಇಂಥ ಕೆಲಸ ಮಾಡಬಾರದು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.