ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇತುವೆಗಳಿಗೆ ಹಾನಿ: ಸಂಪರ್ಕ ಕಡಿತ

ರಾಮನಗರ: ಮುಂದುವರೆದ ಮಳೆಯ ಆರ್ಭಟ * ಕೋಡಿ ಬಿದ್ದ ಕೆರೆಗಳು
Last Updated 1 ಸೆಪ್ಟೆಂಬರ್ 2022, 20:07 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯಲ್ಲಿ ಗುರುವಾರವು ಧಾರಾಕಾರ ಮಳೆಯಾಗಿದ್ದು, ಕೆರೆಗಳು ಕೋಡಿ ಬಿದ್ದಿವೆ. ಸೇತುವೆಗಳು ಕೊಚ್ಚಿ ಹೋಗಿದ್ದು, ಬಹುತೇಕ ಸಂಪರ್ಕ ಕಡಿತಗೊಂಡಿದೆ.

ಚನ್ನಪಟ್ಟಣ ತಾಲ್ಲೂಕಿನ ಕನ್ನಮಂಗಲದಲ್ಲಿ ಕೆರೆ ಕೋಡಿ ಒಡೆದು ರಸ್ತೆಯೇ ಕೊಚ್ಚಿ ಹೋಗಿದ್ದು, ಕೆಂಗಲ್‌– ಕಣ್ವ ಜಲಾಶಯ ರಸ್ತೆ ಸಂಪರ್ಕ ಕಡಿತವಾಗಿದೆ. ಕನಕಪುರ ತಾಲ್ಲೂಕಿನ ಬೂದಗುಪ್ಪೆ– ಬರಡನಹಳ್ಳಿ ಬಳಿ ಎರಡು ಸೇತುವೆ, ಮುಳ್ಳಳ್ಳಿ ಬಳಿ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಸೇತುವೆಗಳು ಭಾಗಶಃ ಹಾನಿಗೀಡಾಗಿವೆ. ಹಾರೋಬೆಲೆ ಜಲಾಶಯದ ಬಳಿ ಸುವಣ್ಣಮಕ್ಕಿ ಕೆರೆ ಏರಿ ಒಡೆಯುವ ಆತಂಕ ಎದುರಾಗಿದೆ.

ಜಿಲ್ಲೆಯಲ್ಲಿ 600 ಹೆಕ್ಟೇರ್‌ನಲ್ಲಿನ ಕೃಷಿ ಹಾಗೂ 500 ಹೆಕ್ಟೇರ್‌ನಲ್ಲಿನ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ. ತೆಂಗು, ರೇಷ್ಮೆ, ರಾಗಿ, ಭತ್ತದ ಬೆಳೆಗಳು ಕೊಚ್ಚಿ ಹೋಗಿವೆ. ರೇಷ್ಮೆ ನೂಲು ಉದ್ಯಮಕ್ಕೂ ಭಾರಿ ಹೊಡೆತ ಬಿದ್ದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಮಾನಿಗೋಪಾಲಕೃಷ್ಣ ಕೆರೆಯ ಕೋಡಿ ಬಿದ್ದಿದ್ದು, ಹಲವು ಗ್ರಾಮಗಳ ಜಮೀನು ಜಲಾವೃತವಾಗಿವೆ. ಗೌರಿಬಿದನೂರು ತಾಲ್ಲೂಕಿನ ಉತ್ತರಪಿನಾಕಿನಿ, ಗುಡಿಬಂಡೆ ತಾಲ್ಲೂಕಿನಲ್ಲಿ ಕುಶಾವತಿ ನದಿ ಉಕ್ಕಿ ಹರಿಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT