ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಡಾ ಹಗರಣ | ತನಿಖೆಯ ಸೆಕ್ಷನ್‌ಗಳು; ಶಿಕ್ಷೆಯ ಪ್ರಮಾಣ

Published 18 ಆಗಸ್ಟ್ 2024, 0:25 IST
Last Updated 18 ಆಗಸ್ಟ್ 2024, 0:25 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಅನುಮತಿ ಕೋರಿದ್ದರು.

ಎರಡೂ ಕಾನೂನುಗಳ ಒಟ್ಟು 28 ಸೆಕ್ಷನ್‌ಗಳ ಅಡಿಯಲ್ಲಿ ಅನುಮತಿ ನೀಡಬೇಕು ಎಂದು ಅವರು ರಾಜ್ಯಪಾಲರನ್ನು ಕೋರಿದ್ದರು. ಆ ಸೆಕ್ಷನ್‌ಗಳ ಅಡಿಯಲ್ಲಿ ವ್ಯಾಖ್ಯಾನಿಸಲಾದ ಅಪರಾಧ ಕೃತ್ಯಗಳು ಮತ್ತು ಅವುಗಳಿಗೆ ವಿಧಿಸಬಹುದಾದ ಶಿಕ್ಷೆಯ ಪ್ರಮಾಣದ ವಿವರ ಇಲ್ಲಿದೆ.

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ

ಸರ್ಕಾರಿ ನೌಕರ ಅಥವಾ ಚುನಾಯಿತ ಪ್ರತಿನಿಧಿಗಳಿಗೆ ಈ ಸೆಕ್ಷನ್‌ಗಳು ಅನ್ವಯವಾಗುತ್ತವೆ.

7: ಕರ್ತವ್ಯದಲ್ಲಿ ಅಕ್ರಮ, ಅಕ್ರಮ ಎಸಗುವಂತೆ ಒತ್ತಡ ಸೃಷ್ಟಿ ಅಥವಾ ಪ್ರಭಾವ ಬೀರುವುದು. ಮೂರು ವರ್ಷದಿಂದ ಏಳು ವರ್ಷದವರೆಗೆ ಜೈಲು ಮತ್ತು ದಂಡಕ್ಕೆ ಅವಕಾಶ

9: ಅಕ್ರಮ ಎಸಗಲು ವಾಣಿಜ್ಯ ಕಂಪನಿಯೊಂದು ಲಂಚ/ಆಮಿಷ ಒಡ್ಡುವುದು. ದಂಡಕ್ಕೆ ಅವಕಾಶ

11: ತಾನು ಮಾಡುತ್ತಿರುವ ಅಕ್ರಮದಿಂದ ಒಬ್ಬ ವ್ಯಕ್ತಿಗೆ ಲಾಭವಾಗುತ್ತದೆ ಎಂದು ಗೊತ್ತಿಲ್ಲದೇ ಅಥವಾ ಗೊತ್ತಿದ್ದೂ ಆ ವ್ಯಕ್ತಿಯಿಂದ ಲಾಭ ಪಡೆದುಕೊಳ್ಳುವುದು. 6 ತಿಂಗಳಿಂದ ಐದು ವರ್ಷದವರೆಗೆ ಜೈಲುಶಿಕ್ಷೆ ಮತ್ತು ದಂಡ

12: ಅಕ್ರಮಕ್ಕೆ ಪ್ರಚೋದನೆ: ಮೂರು ವರ್ಷದಿಂದ ಏಳು ವರ್ಷದವರೆಗೆ ಜೈಲು ಮತ್ತು ದಂಡ

15: ಅಕ್ರಮಕ್ಕೆ ಯತ್ನ: ಎರಡು ವರ್ಷದಿಂದ ಐದು ವರ್ಷದವರೆಗೆ ಜೈಲು ಮತ್ತು ದಂಡ

ಭಾರತೀಯ ನ್ಯಾಯ ಸಂಹಿತೆ

59: ಸಾರ್ವಜನಿಕ ಸೇವಕ ತಾನು ಅಕ್ರಮ ಎಸಗುತ್ತಿದ್ದೇನೆ ಎಂದು ಗೊತ್ತಿದ್ದೂ, ಎಸಗುವುದು. ಮತ್ತು ಅಂತಹ ಕೃತ್ಯವನ್ನು ಮುಚ್ಚಿಡುವಂತಹ ಅಥವಾ ಮರೆಮಾಚುವಂತಹ ಕೃತ್ಯ ಎಸಗುವುದು. ಗರಿಷ್ಠ 10 ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸಲು ಅವಕಾಶ

61: ಅಕ್ರಮಕ್ಕೆ ಸಂಚು. ಆರು ತಿಂಗಳು ಜೈಲುಶಿಕ್ಷೆ ಅಥವಾ ದಂಡ ಅಥವಾ ಎರಡೂ

201: ಅಕ್ರಮ ಎಸಗುವ ಉದ್ದೇಶದಿಂದ ಸುಳ್ಳು ದಾಖಲೆ ಸಲ್ಲಿಸುವುದು. ಮೂರು ವರ್ಷದವರೆಗೆ ಜೈಲು ಅಥವಾ ದಂಡ ಅಥವಾ ಎರಡೂ

227, 228, 229: ಸುಳ್ಳು ಸಾಕ್ಷ್ಯ ನೀಡುವುದು, ಸುಳ್ಳು ಸಾಕ್ಷ್ಯ ಸೃಷ್ಟಿಸುವುದು. ಏಳು ವರ್ಷ ಮೀರದಂತಹ ಜೈಲುಶಿಕ್ಷೆ ಅಥವಾ ಗರಿಷ್ಠ ₹10,000 ದಂಡ ಅಥವಾ ಎರಡೂ

239: ಅಕ್ರಮದ ಬಗ್ಗೆ ಉದ್ದೇಶಪೂರ್ವಕವಾಗಿ ಮಾಹಿತಿ ನೀಡದೇ ಇರುವುದು ಅಥವಾ ಮರೆಮಾಚುವುದು. ಗರಿಷ್ಠ ಆರು ತಿಂಗಳವರೆಗೆ ಜೈಲುಶಿಕ್ಷೆ ಅಥವಾ ಗರಿಷ್ಠ ₹5,000 ದಂಡ ಅಥವಾ ಎರಡೂ

316(5): ವಿಶ್ವಾಸಕ್ಕೆ ಧಕ್ಕೆ ತಂದಂತಹ ಕೃತ್ಯ ಎಸಗಿದ ಸಾರ್ವಜನಿಕ ಸೇವಕನಿಗೆ ಗರಿಷ್ಠ 10 ವರ್ಷದವರೆಗೆ ಜೈಲುಶಿಕ್ಷೆ ಮತ್ತು ದಂಡ

322: ಸುಳ್ಳು ಹೇಳಿಕೆ ಮೇಲೆ ಆಸ್ತಿಯನ್ನು ಅಕ್ರಮವಾಗಿ ವರ್ಗಾಯಿಸಿಕೊಳ್ಳುವುದು. ಮೂರು ವರ್ಷದವರೆಗೆ ಜೈಲು ಅಥವಾ ದಂಡ ಅಥವಾ ಎರಡೂ

335, 336, 338, 340: ನಕಲಿ ದಾಖಲೆ ಸೃಷ್ಟಿ, ದಾಖಲೆ ತಿರುಚುವುದು. ಗರಿಷ್ಠ 10 ವರ್ಷಗಳ ಜೈಲುಶಿಕ್ಷೆ ಮತ್ತು ದಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT