ಬೆಂಗಳೂರು: ‘ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದವರ ತಪ್ಪು ಇಲ್ಲ ಎಂದು ನ್ಯಾಯಮೂರ್ತಿ ಪಿ.ಎನ್.ದೇಸಾಯಿ ನೇತೃತ್ವದ ಏಕ ಸದಸ್ಯ ಆಯೋಗ ನೀಡಿರುವ ವರದಿಯನ್ನು ಸಂಪುಟ ಒಪ್ಪಿಕೊಂಡಿದೆ’ ಎಂದು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.

‘ಈ ವರದಿಯಲ್ಲಿ ಮುಖ್ಯಮಂತ್ರಿ ಮತ್ತು ಅವರ ಕುಟುಂಬದವರ ಮೇಲೆ ಯಾವುದೇ ಆರೋಪಗಳಿಲ್ಲ. ಅವರಿಗೆ ಕ್ಲೀನ್ ಚಿಟ್ ಸಿಕ್ಕಿದೆ. ಅಧಿಕಾರಿಗಳಿಂದ ಲೋಪಗಳು ಆಗಿರುವುದನ್ನು ವರದಿ ಬೊಟ್ಟು ಮಾಡಿದ್ದು, ಅದಕ್ಕೆ ಕ್ರಮ ತೆಗೆದುಕೊಳ್ಳಲು ಶಿಫಾರಸು ನೀಡಿದೆ. ಇದಕ್ಕೆ ಸಂಪುಟ ಒಪ್ಪಿಗೆ ನೀಡಿದೆ’ ಎಂದರು.

ವರದಿಯ ಮುಖ್ಯ ಅಂಶಗಳು

ಕೇರ್ಗಳ್ಳಿ ಗ್ರಾಮದ ಸ.ನಂ 115/22 ಮತ್ತು 115/42 ಜಮೀನಿಗೆ ಸಂಬಂಧಿಸಿದಂತೆ ಡಿನೋಟಿಫೈ ಮಾಡಲಾಗಿದ್ದರೂ ಮುಡಾದಿಂದ ಬಳಸಿಕೊಳ್ಳಲಾದ ಜಮೀನುಗಳ ಮಾಲೀಕರಿಗೆ ಪರಿಹಾರವಾಗಿ ನಿವೇಶನ ಹಂಚಿಕೆ ಮತ್ತು ಕೆಸರೆ ಗ್ರಾಮದ ಸ.ನಂ 464ರ ಜಮೀನಿನ ವಿಷಯದಲ್ಲಿ ಅಕ್ರಮ ಆಗಿದೆ ಎಂದು ಹೇಳಲು ಆಗುವುದಿಲ್ಲ

ಡಿನೋಟಿಫೈ ಆದ ಜಮೀನುಗಳನ್ನು ಬಳಸಿಕೊಂಡ ಸಂದರ್ಭದಲ್ಲಿ ನಿವೇಶನ ರೂಪದಲ್ಲಿ ಪರಿಹಾರ ಪಾವತಿಗಾಗಿ ಮುಡಾ ಅನುಸರಿಸಿದ ವಿಧಾನಗಳನ್ನು ಕಾನೂನುಬಾಹಿರ ಎಂದು ಹೇಳಲಾಗುವುದಿಲ್ಲ. ಏಕೆಂದರೆ ಡಿನೋಟಿಫೈ ಆದ ಜಮೀನುಗಳ ಮೇಲೆ ಮುಡಾಕ್ಕೆ ಯಾವುದೇ ಹಕ್ಕು ಮತ್ತು ಕಾನೂನುಬದ್ಧ ಸ್ವಾಧೀನವಿರುವುದಿಲ್ಲ

ಮುಡಾ ಅಧಿಕಾರಿಗಳು ಸ್ವಾಧೀನಪಡಿಸಿಕೊಳ್ಳದ ಭೂಮಿಯನ್ನು ಬಳಸುವಾಗ ಮಾಡಿದ ವಿನ್ಯಾಸಗಳು ಮತ್ತು ಸೈಟ್ ರಚನೆಯಲ್ಲಿ ಹಾಗೂ ಡಿನೋಟಿಫೈ ಮಾಡದ ಭೂಮಿಯನ್ನು ಬಳಸುವಾಗ ಮಾಡಿದ
ಅಕ್ರಮಗಳಿಂದಾಗಿ ಮುಡಾ ಆರ್ಥಿಕ ನಷ್ಟ ಅನುಭವಿಸಿದೆ. ಆದ್ದರಿಂದ, ಕಾನೂನಿನ ಪ್ರಕಾರ ಕ್ರಮಕೈಗೊಳ್ಳುವುದರ ಜತೆಗೆ ಅಂತಹ ಅಕ್ರಮಗಳಿಗೆ ಕಾರಣರಾದ ಸಂಬಂಧಿತ ಅವಧಿಯಲ್ಲಿ ಕೆಲಸ ಮಾಡಿರುವ ಅಧಿಕಾರಿಗಳಿಂದ ಆರ್ಥಿಕ ನಷ್ಟ ವಸೂಲಿ ಮಾಡಬೇಕು

ಬಡಾವಣೆಗಳ ರಚನೆಗೆ ಸಂಬಂಧಿಸಿದಂತೆ ಎಂಜಿನಿಯರಿಂಗ್ ವಿಭಾಗದಿಂದ ಯಾವುದೇ ಮೇಲ್ವಿಚಾರಣೆ ಅಥವಾ ನಿಗಾವಹಿಸಿಲ್ಲ. ಇದು ಸ್ವಾಧೀನಪಡಿಸಿಕೊಳ್ಳದೆ ಬಡಾವಣೆ ರಚನೆಗೆ ಜಮೀನು ಬಳಸಿಕೊಳ್ಳಲು ಕಾರಣವಾಗಿದೆ. ರಸ್ತೆಗಳ ರಚನೆಗಾಗಿ ಸ್ವಾಧೀನಪಡಿಸಿಕೊಳ್ಳದೆ ಜಮೀನನ್ನು ಬಳಸಿಕೊಳ್ಳುವ ವಿಚಾರದಲ್ಲೂ ಮುಡಾದ ಸಂಬಂಧಪಟ್ಟ ವಿಭಾಗಗಳಿಂದ ಮೇಲ್ವಿಚಾರಣೆ ಕೊರತೆ ಎದ್ದುಕಾಣುತ್ತದೆ. ಇದು ಮೂರರಿಂದ ನಾಲ್ಕು ದಶಕಗಳ ನಂತರ ಪರಿಹಾರ ಪಾವತಿಗೆ ಕಾರಣವಾಗಿದ್ದು, ಮುಡಾಗೆ ಭಾರಿ ಆರ್ಥಿಕ ನಷ್ಟ ಉಂಟು ಮಾಡಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.