ಬೆಂಗಳೂರು: ಆಸ್ಟ್ರೇಲಿಯಾ, ಅಮೆರಿಕ ಮತ್ತು ಸೌದಿ ಅರೇಬಿಯಾ ದೇಶಗಳಿಗೆ ಕೆಎಂಎಫ್ ನಂದಿನಿ ತುಪ್ಪವನ್ನು ರಫ್ತು ಮಾಡುವ ವಾಹನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಚಾಲನೆ ನೀಡಿದರು.
.ಶೀಘ್ರ ಆಸ್ಟ್ರೇಲಿಯಾ, ಕೆನಡಾಕ್ಕೂ ಕರ್ನಾಟಕದ ನಂದಿನಿ ತುಪ್ಪ: ಕೆಎಂಎಫ್ ಎಂ.ಡಿ.
ತಮ್ಮ ಕಾವೇರಿ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ, ‘ನಂದಿನಿ ತುಪ್ಪಕ್ಕೆ ದೇಶ ವಿದೇಶಗಳಲ್ಲಿಯೂ ಹೆಚ್ಚಿನ ಬೇಡಿಕೆಯಿದೆ. ಸೌದಿ ಅರೇಬಿಯಾದಿಂದ ಎಂಟು ಟನ್, ಅಮೆರಿಕದಿಂದ ಐದು ಟನ್ ಹಾಗೂ ಆಸ್ಟ್ರೇಲಿಯಾದಿಂದ ಒಂದು ಟನ್ ತುಪ್ಪಕ್ಕೆ ಬೇಡಿಕೆ ಬಂದಿದೆ’ ಎಂದರು.

‘ದುಬೈ, ಕತಾರ್, ಬ್ರುನೈ, ಮಾಲ್ದೀವ್ಸ್ ಹಾಗೂ ಸಿಂಗಪುರ ಸೇರಿದಂತೆ ಭಾರತೀಯರು, ವಿಶೇಷವಾಗಿ ಕನ್ನಡಿಗರು ಹೆಚ್ಚಾಗಿ ನೆಲಸಿರುವ ನೆರೆಯ ರಾಷ್ಟ್ರಗಳನ್ನು ಕೇಂದ್ರೀಕರಿಸಿ ನಂದಿನಿ ಯುಎಚ್ಟಿ ಟೆಟ್ರಾ ಪ್ಯಾಕ್ ಹಾಲು, ತುಪ್ಪ, ಚೀಸ್, ಡೇರಿ ವೈಟ್ನರ್, ಬೆಣ್ಣೆ, ಐಸ್ಕ್ರೀಂ, ಸುವಾಸಿತ ಹಾಲು, ಸಿಹಿ ಉತ್ಪನ್ನ, ಸೇವರೀಸ್ ರಫ್ತು ಮಾಡಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟವನ್ನು ಅಭಿವೃದ್ಧಿಪಡಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ’ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ತಿಳಿಸಿದರು.
.ನಂದಿನಿ ತುಪ್ಪ ಲೀಟರ್ಗೆ ₹90 ದುಬಾರಿ: ಬೆಣ್ಣೆ ದರವೂ ಕೆ.ಜಿಗೆ ₹38 ಹೆಚ್ಚಳ.
‘2023ರ ಸೆ. 9ರಂದು ಫ್ರಾಂಚೈಸಿದಾರರ ಮೂಲಕ ಯುಎಇನಲ್ಲಿ ಅಂತರರಾಷ್ಟ್ರೀಯ ಮಟ್ಟದ ಮೊದಲ ‘ನಂದಿನಿ ಕೆಫೆ ಮೂ’ ಆರಂಭಿಸಿ ತುಪ್ಪ, ಬೆಣ್ಣೆ, ಚೀಸ್, ಯುಎಚ್ಟಿ ಹಾಲು, ಐಸ್ಕ್ರೀಂ, ಸಿಹಿ ಉತ್ಪನ್ನ ಹಾಗೂ ಖಾರದ ತಿನಿಸುಗಳನ್ನು ರಫ್ತು ಮಾಡಿ ಮಾರಾಟ ವಹಿವಾಟು ವಿಸ್ತರಿಸಲಾಗಿದೆ. ಮರ್ಚೆಂಟ್ ರಫ್ತುದಾರರ ಮೂಲಕ ಇದೇ ಸೆಪ್ಟೆಂಬರ್ ತಿಂಗಳಿನಿಂದ ನಂದಿನಿ ಪೇಡ, ಮೈಸೂರ್ ಪಾಕ್, ಬರ್ಫಿ ಮತ್ತಿತರ ಉತ್ಪನ್ನಗಳನ್ನು ಅಮೆರಿಕಕ್ಕೆ ರಫ್ತು ಮಾಡಲಾಗುತ್ತಿದೆ’ ಎಂದೂ ತಿಳಿಸಿದರು.

ಪಶು-ಸಂಗೋಪನಾ ಸಚಿವ ಕೆ. ವೆಂಕಟೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮಿ ಹೆಬ್ಬಾಳಕರ, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.