ರಾಮನಗರ: ಏಪ್ರಿಲ್ 17ರಂದು ರಾಮನಗರದಲ್ಲಿ ಜರುಗಲಿರುವಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಪುತ್ರ ನಿಖಿಲ್ಮದುವೆಗಾಗಿ ಸಿದ್ಧತೆಗಳು ಭರದಿಂದ ಸಾಗಿವೆ.

ಜಮೀನನ್ನು ಸಮತಟ್ಟು ಮಾಡುವ ಕಾರ್ಯ ಅಂತಿಮ ಹಂತದಲ್ಲಿ ಇದೆ. ನೀರು ಪೂರೈಕೆಗಾಗಿ ಸ್ಥಳದಲ್ಲಿ ಬೋರ್ವೆಲ್ ಸಹ ಕೊರೆಯಿಸಲಾಗಿದೆ. ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ಗೆ (ಸಿಎಂಎ) ಸೇರಿದ 22 ಎಕರೆ, ಉದ್ಯಮಿಗೆ ಸೇರಿದ 23 ಎಕರೆ ಹಾಗೂ ಖಾಸಗಿ ಒಡೆತನದ ಭೂಮಿಯನ್ನೂ ಬಳಸಿಕೊಳ್ಳಲಾಗುತ್ತಿದೆ. ಸರ್ಕಾರಿ ಜಮೀನನ್ನು ಬಳಸಿಕೊಳ್ಳಲು ಅನುಮತಿಗಾಗಿ ಪತ್ರ ಬರೆಯಲಾಗಿದೆ.

ಸುಮಾರು ಇಪ್ಪತ್ತು ಎಕರೆಯಷ್ಟು ಪ್ರದೇಶದಲ್ಲಿ ಬರೀ ಮಂಟಪಕ್ಕಾಗಿಯೇ ಸೆಟ್ ನಿರ್ಮಾಣ ಮಾಡಲಾಗುತ್ತಿದೆ. ಮಂಟಪಕ್ಕೊಂದು ಹೆಸರನ್ನೂ ನಿಗದಿ ಮಾಡಿದೆ ಎಚ್ಡಿಕೆ ಕುಟುಂಬ. ‘ಸಪ್ತಪದಿ ಮಂಟಪ’ ಎಂದು ಕುಟುಂಬಸ್ಥರೆಲ್ಲರೂ ಸೇರಿ ಹೆಸರಿಟ್ಟಿದ್ದಾರೆ. ಮಂಟಪಕ್ಕೇ ಒಂದು ನಿರ್ದಿಷ್ಟ ಹೆಸರಿಡಬೇಕು ಎಂದು ಎಚ್ಡಿಕೆ ಕುಟುಂಬಸ್ಥರು ನಿರ್ಧರಿಸಿದ್ದರು ಎನ್ನಲಾಗಿದೆ. ಅದಕ್ಕಾಗಿ ಹಲವು ಹೆಸರನ್ನುಗಳನ್ನು ಪರಿಶೀಲಿಸಿ ಅಂತಿಮವಾಗಿ ಸಪ್ತಪದಿ ಮಂಟಪ ಎಂದು ಹೆಸರಿಡಲಾಗಿದೆ ಎನ್ನಲಾಗಿದೆ.

ಜೊತೆಗೆ 20–25 ಎಕರೆಯಷ್ಟು ಪ್ರದೇಶದಲ್ಲಿ ಊಟದ ವ್ಯವಸ್ಥೆ ಮತ್ತು ಉಳಿದ ಸ್ಥಳದಲ್ಲಿ ವಿಐಪಿ ಹಾಗೂ ಜನಸಾಮಾನ್ಯರ ವಾಹನಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲು ಯೋಜಿಸಲಾಗಿದೆ.

ಏಪ್ರಿಲ್ 17ರಂದು ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ವಿವಾಹವ ನಿಗದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.