ಜಯಪುರ (ಮೈಸೂರು): ಇಲ್ಲಿಗೆ ಸಮೀಪದ ತಳೂರು ಗ್ರಾಮದ ರೈತರೊಬ್ಬರು ಪಾಲಿಹೌಸ್ನಲ್ಲಿ 6 ಬಗೆಯ ಜರ್ಬೇರ ಹೂವುಗಳನ್ನು ಬೆಳೆದಿದ್ದು, ಮಾರುಕಟ್ಟೆ ಸಿಗದೆ ಪರಿತಪಿಸುತ್ತಿದ್ದಾರೆ.

ಶುಭ ಸಮಾರಂಭಗಳು ಸ್ಥಗಿತಗೊಂಡಿವೆ. ಸಾಗಣೆ ಸೌಲಭ್ಯವೂ ಇಲ್ಲದೇ ಈ ಹೂವುಗಳಿಗೆ ಬೇಡಿಕೆಯೇ ಇಲ್ಲವಾಗಿದೆ. ಗಿಡದಲ್ಲಿನ ಹೂವನ್ನು ಕೊಯ್ದು, ಕಸದ ತೊಟ್ಟಿಗೆ ಹಾಕಲಾಗುತ್ತಿದೆ.

‘ಪುಣೆಯ ಕೆ.ಎಫ್.ಬಯೊಟೆಕ್ ಕಂಪನಿಯಿಂದ ಒಂದು ಸಸಿಗೆ ₹ 35ರಂತೆ 13 ಸಾವಿರ ಸಸಿಗಳನ್ನು ತಂದು ನಾಟಿ ಮಾಡಿದ್ದೆ. ₹ 14 ಲಕ್ಷ ಖರ್ಚಾಗಿತ್ತು. ಇದೀಗ ಜರ್ಬೇರ ಹೂವು ಅರಳಿ ನಿಂತಿದೆ. ಆದರೆ, ಒಪ್ಪಂದದ ಪ್ರಕಾರ ಬೆಂಗಳೂರಿನ ಹೂವಿನ ರಫ್ತುದಾರರು ಖರೀದಿಗೆ ಬರಲಿಲ್ಲ. ಹೀಗಾಗಿ, ಗಿಡದಿಂದ ಹೂವು ಕಿತ್ತು ಕಸದ ಗುಂಡಿಗೆ ಹಾಕುತ್ತಿದ್ದೇನೆ’ ಎಂದು ಸೋಮಶೇಖರ್ ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

‘ಎಲ್ಲವೂ ಸರಿಯಿದ್ದರೆ ಪುಷ್ಪ ಕೃಷಿಗೆ ಮಾಡಿದ ಸಾಲ ತೀರಿಸಿ, ₹ 10 ಲಕ್ಷ ಲಾಭ ಸಿಗುತ್ತಿತ್ತು. ಆದರೆ ಕೊರೊನಾ ನಮ್ಮ ಬದುಕನ್ನು ಬೀದಿಪಾಲು ಮಾಡಿತು’ ಎಂದು ಕಣ್ಣೀರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.