ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಮಳೆಗೆ ಮುನ್ನವೇ ಹಲವರಲ್ಲಿ ಡೆಂಗಿ ಜ್ವರ: 2 ಸಾವಿರ ದಾಟಿದ ಪ್ರಕರಣ

Published 1 ಏಪ್ರಿಲ್ 2024, 15:20 IST
Last Updated 1 ಏಪ್ರಿಲ್ 2024, 15:20 IST
ಅಕ್ಷರ ಗಾತ್ರ

ಬೆಂಗಳೂರು: ಈ ವರ್ಷ ಮುಂಗಾರು ಮಳೆಗೆ ಮುನ್ನವೇ ಹಲವರಲ್ಲಿ ಡೆಂಗಿ ಜ್ವರ ಕಾಣಿಸಿಕೊಂಡಿದ್ದು, ಮೂರು ತಿಂಗಳ ಅವಧಿಯಲ್ಲಿ ಡೆಂಗಿ ಜ್ವರ ಎದುರಿಸಿದವರ ಸಂಖ್ಯೆ ಎರಡು ಸಾವಿರದ ಗಡಿ (2,116) ದಾಟಿದೆ. 

ಸಾಮಾನ್ಯವಾಗಿ ಮುಂಗಾರು ಮಳೆ ಪ್ರವೇಶಿಸಿದ ಬಳಿಕ ಈ ಜ್ವರ ಹೆಚ್ಚಿನವರಲ್ಲಿ ಕಾಣಿಸಿಕೊಳ್ಳುತ್ತದೆ. ಈ ಸಲ ಬೇಸಿಗೆ ಅವಧಿಯಲ್ಲಿಯೂ ಈ ಜ್ವರದಿಂದ ಹಲವರು ಬಳಲಿದ್ದಾರೆ. ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಈವರೆಗೆ ರಾಜ್ಯದಾದ್ಯಂತ 34,143 ಡೆಂಗಿ ಶಂಕಿತರನ್ನು ಗುರುತಿಸಲಾಗಿದ್ದು, ಅವರಲ್ಲಿ 17,828 ಮಂದಿಯ ರಕ್ತದ ಮಾದರಿಯನ್ನು ಸಂಗ್ರಹಿಸಿ, ಪರೀಕ್ಷೆ ಮಾಡಲಾಗಿದೆ. ಈವರೆಗೆ ಯಾವುದೇ ಮರಣ ಪ‍್ರಕರಣ ವರದಿಯಾಗಿಲ್ಲ.

2023ರಲ್ಲಿ 16,500ಕ್ಕೂ ಅಧಿಕ ಡೆಂಗಿ ಪ್ರಕರಣಗಳು ದೃಢಪಟ್ಟಿದ್ದವು. 9 ಮಂದಿ ಮೃತಪಟ್ಟಿದ್ದರು. ಜೂನ್ ಬಳಿಕ ಪ್ರಕರಣಗಳ ಸಂಖ್ಯೆ ಗಣನೀಯ ಏರಿಕೆಯಾಗಿತ್ತು. 

ಈ ವರ್ಷ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಡೆಂಗಿ ಪ್ರಕರಣಗಳು ದೃಢಪಟ್ಟಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಅಧಿಕ ಪ್ರಕರಣಗಳು (535) ವರದಿಯಾಗಿವೆ. ಮೈಸೂರು (164), ಚಿತ್ರದುರ್ಗ (146), ಶಿವಮೊಗ್ಗ (132) ಹಾಗೂ ದಕ್ಷಿಣ ಕನ್ನಡ (106) ಜಿಲ್ಲೆಯಲ್ಲಿ ಅಧಿಕ ಪ್ರಕರಣಗಳು ದೃಢ‍ಪಟ್ಟಿವೆ. 

ಚಿಕೂನ್‌ಗುನ್ಯ ಜ್ವರದ ಶಂಕೆ ಕಾರಣ 11,968 ಮಂದಿಗೆ ಪರೀಕ್ಷೆ ಮಾಡಲಾಗಿದ್ದು, 464 ಪ್ರಕರಣಗಳು ದೃಢಪಟ್ಟಿವೆ. 25 ಜಿಲ್ಲೆಗಳಲ್ಲಿ ಪ್ರಕರಣಗಳು ವರದಿಯಾಗಿದ್ದು, ಶಿವಮೊಗ್ಗದಲ್ಲಿ (190) ಗರಿಷ್ಠ ಪ್ರಕರಣಗಳು ಖಚಿತಪಟ್ಟಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT