ಬೆಂಗಳೂರು: ಜಲಸಂಪನ್ಮೂಲ, ಲೋಕೋಪಯೋಗಿ, ಸಣ್ಣ ನೀರಾವರಿ, ನಗರಾಭಿವೃದ್ಧಿ ಮತ್ತು ಇತರ ಇಲಾಖೆಗಳಲ್ಲಿ ಸಣ್ಣಪುಟ್ಟ ಟೆಂಡರ್ ಪಡೆದು ಕಾಮಗಾರಿಗಳನ್ನು ನಿರ್ವಹಿಸಿದ ಗುತ್ತಿಗೆದಾರರಿಗೆ ರಾಜ್ಯ
ಸರ್ಕಾರ ಸುಮಾರು ₹31 ಸಾವಿರ ಕೋಟಿಯ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡಿದೆ.

ಈ ಪೈಕಿ, ಜಲಸಂಪನ್ಮೂಲ ಮತ್ತು ಲೋಕೋಪಯೋಗಿ ಇಲಾಖೆ ಎರಡೂ ಸೇರಿ ಅತಿ ಹೆಚ್ಚು
₹20,823 ಕೋಟಿ ಬಾಕಿ ಇದ್ದರೆ, ಸಣ್ಣ ನೀರಾವರಿ ಇಲಾಖೆಯಲ್ಲಿ ₹1,800 ಕೋಟಿ, ನಗರಾಭಿವೃದ್ಧಿ (ಬಿಬಿಎಂಪಿ ಹೊರತುಪಡಿಸಿ) ಇಲಾಖೆಯಲ್ಲಿ ₹3,800 ಕೋಟಿ, ಬಿಬಿಎಂಪಿಯಲ್ಲಿ ₹3,000 ಕೋಟಿ ಬಾಕಿ ಇದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಗುತ್ತಿಗೆದಾರರಿಗೆ ಜಲಸಂಪನ್ಮೂಲ ಇಲಾಖೆ ₹12,069 ಕೋಟಿ, ಲೋಕೋಪಯೋಗಿ ಇಲಾಖೆ ₹ 8,754 ಕೋಟಿ ಪಾವತಿಸಲು ಬಾಕಿಯಿದೆ ಎಂದು ಎರಡೂ ಇಲಾಖೆಗಳ ಹೇಳಿವೆ.

ಜಲಸಂಪನ್ಮೂಲ ಇಲಾಖೆಯಲ್ಲಿ ಗುತ್ತಿಗೆದಾರರ ಅತೀ ಹೆಚ್ಚು ಮೊತ್ತದ ಬಿಲ್‌ಗಳು ಪಾವತಿಯಾಗದೆ ಬಾಕಿ ಉಳಿದಿವೆ. ಈ ಇಲಾಖೆಯ ವ್ಯಾಪ್ತಿಯಲ್ಲಿರುವ ಕೃಷ್ಣಾ ಭಾಗ್ಯ ಜಲ ನಿಗಮ (ಕೆಬಿಜೆಎನ್‌ಎಲ್), ಕರ್ನಾಟಕ ನೀರಾವರಿ ನಿಗಮ (ಕೆಎನ್‌ಎನ್‌ಎಲ್), ಕಾವೇರಿ ನೀರಾವರಿ ನಿಗಮ (ಸಿಎನ್‌ಎನ್‌ಎಲ್) ಮತ್ತು ವಿಶ್ವೇಶ್ವರಯ್ಯ ಜಲ ನಿಗಮ (ವಿಜೆಎಲ್‌ಎಲ್) ಮೂಲಕ ಅನುಷ್ಠಾನಗೊಳಿಸಿದ ವಿವಿಧ ಕಾಮಗಾರಿಗಳ ಭಾರಿ ಪ್ರಮಾಣ ಮೊತ್ತದ ಬಿಲ್ ಪಾವತಿಗೆ ಬಾಕಿ ಇದೆ ಎಂದು ಜಲಸಂಪನ್ಮೂಲ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.

‘ಎಲ್ಲ ಸರ್ಕಾರಗಳ ಅವಧಿಯಲ್ಲೂ ಗುತ್ತಿಗೆದಾರರ ಬಿಲ್‌ಗಳು ಪಾವತಿಗೆ ಬಾಕಿ ಉಳಿಯುತ್ತಲೇ ಬಂದಿದೆ. ಆಯವ್ಯಯದಲ್ಲಿ ಒದಗಿಸುವ ಮೊತ್ತಕ್ಕೆ ಅನುಗುಣವಾಗಿ ಬಾಕಿ ಮೊತ್ತ ಪಾವತಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಹಿಂದಿನ ವರ್ಷಗಳ ಬಾಕಿಯ ಜೊತೆಗೆ, ಕಳೆದ ಸಾಲಿನ ಬಿಲ್‌ಗಳ ಮೊತ್ತವೂ ಸೇರಿಕೊಂಡಿರುವುದರಿಂದ ಒಟ್ಟು ಮೊತ್ತ ಹೆಚ್ಚಳವಾಗಿದೆ’ ಎಂದೂ ಮೂಲಗಳು ಹೇಳಿವೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದ ಅವಧಿಯಲ್ಲಿ ತನ್ನ ನಾಲ್ಕೂ ನಿಗಮಗಳ ಮೂಲಕ ಕೈಗೊಂಡ 10,098 ಕಾಮಗಾರಿಗಳ ಬಿಲ್ ಮೊತ್ತದಲ್ಲಿ ₹12,206.56 ಕೋಟಿಯನ್ನು ಜಲ ಸಂಪನ್ಮೂಲ ಇಲಾಖೆ ಪಾವತಿಸಿದೆ. ಜಲಸಂಪನ್ಮೂಲ, ಲೋಕೋಪಯೋಗಿ, ಸಣ್ಣ ನೀರಾವರಿ, ನಗರಾಭಿವೃದ್ಧಿ ಮತ್ತು ಇತರ ಇಲಾಖೆಗಳಲ್ಲಿ ಸಣ್ಣಪುಟ್ಟ ಟೆಂಡರ್ ಪಡೆದು ಕಾಮಗಾರಿಗಳನ್ನು ನಿರ್ವಹಿಸಿದ ಗುತ್ತಿಗೆದಾರರಿಗೆ ರಾಜ್ಯ ಸರ್ಕಾರ ಸುಮಾರು ₹31 ಸಾವಿರ ಕೋಟಿಯ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದ ಅವಧಿಯಲ್ಲಿ ತನ್ನ ನಾಲ್ಕೂ ನಿಗಮಗಳ ಮೂಲಕ ಕೈಗೊಂಡ 10,098 ಕಾಮಗಾರಿಗಳ ಬಿಲ್ ಮೊತ್ತದಲ್ಲಿ ₹12,206.56 ಕೋಟಿಯನ್ನು ಜಲ ಸಂಪನ್ಮೂಲ ಇಲಾಖೆ ಪಾವತಿಸಿದೆ.

ಇನ್ನೂ ₹ 12,069 ಕೋಟಿ ಬಾಕಿ ಇದೆ. 2024-25ನೇ ಸಾಲಿನ ಬಜೆಟ್‌ನಲ್ಲಿ ಇಲಾಖೆಗೆ ಬಂಡವಾಳ ವೆಚ್ಚ ಹಾಗೂ ಇತರೆ ಲೆಕ್ಕ ಶೀರ್ಷಿಕೆಯಡಿ ಕಾಮಗಾರಿಗಳಿಗೆ ಒಟ್ಟು ₹ 9,987 ಕೋಟಿ ಒದಗಿಸಲಾಗಿದೆ. ಆಯಾ ಲೆಕ್ಕ ಶೀರ್ಷಿಕೆಗಳಡಿಯಲ್ಲಿ ಪ್ರತಿ ತಿಂಗಳು ಬಿಲ್ ಮೊತ್ತವನ್ನು ಬಿಡುಗಡೆ ಮಾಡಲಾಗುತ್ತಿದೆ. ಹೆಚ್ಚಿನ ಸಂಖ್ಯೆಯ ಕಾಮಗಾರಿಗಳು ಹಾಗೂ ಭೂಸ್ವಾಧೀನದ ಬಿಲ್‌ಗಳ ಮೊತ್ತ ಪಾವತಿಗೆ ಬಾಕಿ ಇವೆ. ಹೀಗಾಗಿ, ಪ್ರಸಕ್ತ ಸಾಲಿನಲ್ಲಿ ಲಭ್ಯ ಅನುದಾನವನ್ನು ಕಾಲಮಿತಿಯೊಳಗೆ ವೆಚ್ಚ ಮಾಡಲಾಗುತ್ತಿದೆ ಎಂದೂ ಜಲಸಂಪನ್ಮೂಲ ಇಲಾಖೆ ಮೂಲಗಳು ತಿಳಿಸಿವೆ.

ಕೆಶಿಪ್‌ಗೆ ದೊಡ್ಡ ಮೊತ್ತ ವೆಚ್ಚ:

ಲೋಕೋಪಯೋಗಿ ಇಲಾಖೆಗೆ 2023–24ನೇ ಸಾಲಿನಲ್ಲಿ ಎಲ್ಲ 49 ವಿವಿಧ ಲೆಕ್ಕ ಶೀರ್ಷಿಕೆಗಳಡಿ ₹ 9,150 ಕೋಟಿ ಒದಗಿಸಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ₹ 9,200 ಕೋಟಿ ಒದಗಿಸಲಾಗಿದೆ.

‘ಏಷ್ಯಾ ಅಭಿವೃದ್ಧಿ ಬ್ಯಾಂಕ್ ಮತ್ತು ವಿಶ್ವ ಬ್ಯಾಂಕ್ ನೆರವಿನಿಂದ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ (ಕೆಶಿಪ್) ದೊಡ್ಡ ಮೊತ್ತವನ್ನು ವಿನಿಯೋಗಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಈ ಯೋಜನೆಗಳನ್ನು ಬ್ಯಾಂಕ್ ಸಾಲದಲ್ಲಿ ಅನುಷ್ಠಾನಗೊಳಿಸುವುದರಿಂದ ದೊಡ್ಡ ಮೊತ್ತವನ್ನು ಸಾಲ ಮರುಪಾವತಿಗೆ ಬಳಕೆ ಮಾಡಬೇಕಾಗಿದೆ’ ಎಂದು ಲೋಕೋಪಯೋಗಿ ಇಲಾಖೆಯ ಮೂಲಗಳು ತಿಳಿಸಿವೆ.

ಮೈಸೂರು, ಹಾಸನ, ಕೊಡಗು, ಚಿಕ್ಕಬಳಾಪುರ, ಕೋಲಾರ ಸೇರಿದಂತೆ ಒಟ್ಟು 12 ಜಿಲ್ಲೆಗಳನ್ನು ಒಳಗೊಂಡ ದಕ್ಷಿಣ ವಲಯದಲ್ಲಿ ಗುತ್ತಿಗೆದಾರರು ಕಾಮಗಾರಿ ನಿರ್ವಹಿಸಿದ ಬಿಲ್‌ಗಳು 2022ರ ಅಕ್ಟೋಬರ್‌ನಿಂದಲೂ ಬಾಕಿ ಇವೆ. ಹೀಗಾಗಿ, ಆ ಭಾಗದ ಮೊತ್ತ ಪಾವತಿಗೆ ಹೆಚ್ಚು ಬಾಕಿ ಇದೆ. ಇತರ ಎಲ್ಲ ಮೂರೂ ವಲಯಗಳಲ್ಲಿ (ಉತ್ತರ, ಈಶಾನ್ಯ, ಕೇಂದ್ರ) ಗುತ್ತಿಗೆದಾರರ 2023ರ ಜನವರಿವರೆಗಿನ ಎಲ್ಲ ಬಿಲ್‌ಗಳನ್ನು ಚುಕ್ತಾ ಮಾಡಲಾಗಿದೆ. ಇಲಾಖೆಯಲ್ಲಿ ಲಭ್ಯ ಅನುದಾನದಲ್ಲಿ ಶೇ 80ರಷ್ಟು ಬಿಲ್‌ಗಳ ಜ್ಯೇಷ್ಠತೆಯ ಆಧಾರದಲ್ಲಿ, ಶೇ 20ರಷ್ಟು ಗುತ್ತಿಗೆದಾರರ ತುರ್ತು ಅಗತ್ಯಗಳನ್ನು ಪರಿಗಣಿಸಿ ಪಾವತಿಸಲಾಗುತ್ತಿದೆ. ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ ಇಲಾಖೆಯಲ್ಲಿ ಪ್ರತಿವರ್ಷ ಅಂತ್ಯಕ್ಕೆ ₹ 4 ಸಾವಿರ ಕೋಟಿಯಿಂದ ₹ 5 ಸಾವಿರ ಕೋಟಿಯಷ್ಟು ಬಿಲ್ ಮೊತ್ತ ಪಾವತಿಗೆ ಬಾಕಿ ಉಳಿಯುತ್ತವೆ. ಪ್ರಸಕ್ತ ಸಾಲಿನಲ್ಲಿ ₹ 4 ಸಾವಿರ ಕೋಟಿ ಹೆಚ್ಚುವರಿಯಾಗಿ ಬಾಕಿ ಉಳಿದಿದೆ ಎಂದೂ ಮೂಲಗಳು ತಿಳಿಸಿವೆ.

ಬಾಕಿ ಬಿಲ್ ಪಾವತಿ ವಿಳಂಬ ಕುರಿತಂತೆ ಶೀಘ್ರದಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತೇವೆ. ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ
ಡಿ. ಕೆಂಪಣ್ಣಅಧ್ಯಕ್ಷ, ರಾಜ್ಯ ಗುತ್ತಿಗೆದಾರರ ಸಂಘ

ಇತ್ತೀಚೆಗಷ್ಟೆ ಜಲಸಂಪನ್ಮೂಲ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ಹೀಗಾಗಿ, ಗುತ್ತಿಗೆ ದಾರರ ಬಾಕಿ ಬಿಲ್ ಕುರಿತ ಯಾವುದೇ ಮಾಹಿತಿ ನನ್ನ ಬಳಿ ಸದ್ಯಕ್ಕೆ ಇಲ್ಲ
ಗೌರವ್ ಗುಪ್ತಎಸಿಎಸ್, ಜಲಸಂಪನ್ಮೂಲ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.