ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಾವಿದರಿಗೆ ಮೂಳೆ ಬಿಸಾಡುವ ರಾಜಕೀಯ ಪಕ್ಷಗಳು: ನಟ ಪ್ರಕಾಶ್ ರೈ ಬೇಸರ

Published : 5 ಅಕ್ಟೋಬರ್ 2018, 17:09 IST
ಫಾಲೋ ಮಾಡಿ
Comments

ಮೈಸೂರು: ‘ಚುನಾವಣೆ ಸಮಯದಲ್ಲಿ ರಾಜಕೀಯ ಪಕ್ಷಗಳ ಪರವಾಗಿ ಪ್ರಚಾರ ಮಾಡುವ ಕಲಾವಿದರಿಗೆ, ಚುನಾವಣೆ ಬಳಿಕ ಮೂಳೆ ಬಿಸಾಡಿದಂತೆ ಅಧಿಕಾರವಿರುವ ಜಾಗದಲ್ಲಿ ಕೂರಿಸಲಾಗುತ್ತದೆ. ಕಲಾವಿದರಿಗೆ ಇದು ಸ್ವಾಭಿಮಾನ ತರುವ ವಿಚಾರವಲ್ಲ’ ಎಂದು ನಟ ಪ್ರಕಾಶ್ ರೈ ಬೇಸರ ವ್ಯಕ್ತಪಡಿಸಿದರು.

‘ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾನು ರಾಜ್ಯದಾದ್ಯಂತ ಸಂಚರಿಸಿ ಜನರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುವ ಪ್ರಯತ್ನ ಮಾಡಿದ್ದೆ. ಆದರೆ, ಚುನಾವಣೆ ಮುಗಿದ ಬಳಿಕ ಕೆಲವು ಸಂಘಟನೆ, ಸ್ನೇಹಿತರ ಜತೆ ಸೇರಿ ವಿವಿಧ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಸಮಾಜದೊಂದಿಗೆ ಬೆರೆತೆ. ಕಲಾವಿದರು ಸಂಪೂರ್ಣವಾಗಿ ರಾಜಕೀಯದಲ್ಲೇ ಮುಳುಗದಿದ್ದರೆ ಗೌರವ ಹೆಚ್ಚುತ್ತದೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸಲಹೆ ನೀಡಿದರು.

‘ಇತ್ತೀಚಿನ ದಿನಗಳಲ್ಲಿ ಚಿತ್ರನಟರೇ ಸುದ್ದಿಯಾಗುತ್ತಿದ್ದಾರೆ. ಕಲಾವಿದರು ಸಾಮಾಜಿಕ ಕ್ಷೇತ್ರದಲ್ಲಿ ಇರುವುದರಿಂದ ಎಲ್ಲದಕ್ಕೂ ಉತ್ತರಿಸಬೇಕಾಗುತ್ತದೆ. ಹಾಗಾಗಿ ಎಚ್ಚರಿಕೆ ಅಗತ್ಯ. ಕಲಾವಿದರಿಗೆ ಅಹಂ ಬಂದರೆ ಜನರೇ ತಿರಸ್ಕರಿಸುತ್ತಾರೆ. ನಯ, ವಿನಯ, ನಡೆ– ನುಡಿಗೆ ನಮಗೆ ಡಾ.ರಾಜಕುಮಾರ್ ಮಾದರಿಯಾಗಿರಬೇಕು’ ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT