‘ಮೆಸರ್ಸ್ ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತ ಸಕ್ಕರೆ ಕಾರ್ಖಾನೆಯು ಎಥೆನಾಲ್ ವಿದ್ಯುತ್ ಸ್ಥಾವರದ ಘಟಕವನ್ನೂ ಹೊಂದಿದೆ. ಕಾರ್ಖಾನೆಯು ನೀರು ಮತ್ತು ಘನತ್ಯಾಜ್ಯವನ್ನು ಸಂಸ್ಕರಣೆ ಮಾಡದೆ ಅವೈಜ್ಞಾನಿಕ ರೀತಿಯಲ್ಲಿ ಹೊರ ಹಾಕುವ ಮೂಲಕ ಜಲ ಕಾಯ್ದೆ–1974ರ ಕಲಂ 43, 44 ಮತ್ತು 47 ಹಾಗೂ ಪರಿಸರ ಕಾಯ್ದೆ ಉಲ್ಲಂಘಿಸಿದೆ’ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಖಾನೆಯ ವಿರುದ್ಧ ಚಿಂಚೋಳಿಯ ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿತ್ತು. ಅರ್ಜಿದಾರರು ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.