ಬುಧವಾರ, 16 ಜುಲೈ 2025
×
ADVERTISEMENT
ADVERTISEMENT

ರಾಮನಗರ ಇನ್ಮುಂದೆ ಬೆಂಗಳೂರು ದಕ್ಷಿಣ ಜಿಲ್ಲೆ: ಡಿ.ಕೆ. ಶಿವಕುಮಾರ್

Published : 22 ಮೇ 2025, 12:24 IST
Last Updated : 22 ಮೇ 2025, 16:00 IST
ಫಾಲೋ ಮಾಡಿ
Comments
ರಾಮನಗರಕ್ಕೆ ಅದೇ ಹೆಸರು ಇರಲಿ. ಮೊದಲು ಅಭಿವೃದ್ಧಿ ಮಾಡಲಿ. ಆನಂತರ ಹೆಸರು ಬದಲಾವಣೆ ಬಗ್ಗೆ ಯೋಚಿಸಲಿ
ಆರ್‌.ಅಶೋಕ ವಿಧಾನಸಭೆ ವಿರೋಧ ಪಕ್ಷದ ನಾಯಕ
ರಾಮನಗರದ ಹೆಸರು ಬದಲಾವಣೆ ಮಾಡಿದಾಕ್ಷಣ ಅಭಿವೃದ್ಧಿಗೆ ಹೆಚ್ಚು ಹಣ ಹರಿದು ಬರುತ್ತದೆಯೇ? ರಾಜಕೀಯ ಲಾಭಕ್ಕಾಗಿ ಹೆಸರು ಬದಲಾಯಿಸುತ್ತಿದ್ದಾರೆ
ನಿಖಿಲ್‌ ಕುಮಾರಸ್ವಾಮಿ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ
ಮೆಟ್ರೋ ಹಂತ–2ಕ್ಕೆ ₹40,424 ಕೋಟಿ
ಮೆಟ್ರೊ ಹಂತ–2ರ ಯೋಜನೆಯ ಅಂದಾಜು ವೆಚ್ಚವನ್ನು ₹40,424 ಕೋಟಿಗೆ ಪರಿಷ್ಕರಿಸ ಲಾಗಿದ್ದು, ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಶಿವಕುಮಾರ್ ಹೇಳಿದರು. ಕೇಂದ್ರದಿಂದ ಅನುಮೋದಿತ ವೆಚ್ಚ ₹26,405 ಕೋಟಿ ಆಗಿದ್ದು, ಈಗ ₹14,019 ಕೋಟಿಯಷ್ಟು ಹೆಚ್ಚಾಗಿದೆ. ಭೂಸ್ವಾದೀನ ವೆಚ್ಚ ಮತ್ತು ವಿಸ್ತೀರ್ಣದಲ್ಲಿ ಏರಿಕೆ, ಭೂಮಿಯ ಮಾರ್ಗಸೂಚಿ ದರದಲ್ಲಿ ಏರಿಕೆ, ಸಿವಿಲ್ ಕಾಮಗಾರಿಗಳ ವೆಚ್ಚವೂ ಏರಿಕೆ ಆಗಿರುವುದರಿಂದ ಅಂದಾಜು ವೆಚ್ಚ ಪರಿಷ್ಕರಿಸ ಲಾಗಿದೆ ಎಂದರು. ಬೆಂಗಳೂರಿನಲ್ಲಿ ಸುರಂಗ ರಸ್ತೆಯನ್ನು ಹೈಬ್ರಿಡ್‌ ಮಾದರಿಯಲ್ಲಿ ಮಾಡಬೇಕೆ ಅಥವಾ ಬೇಡವೇ ಎಂಬುದನ್ನು ಮುಖ್ಯಮಂತ್ರಿ ಜತೆ ತಾಂತ್ರಿಕ ಅಂಶ ಚರ್ಚಿಸಿ ನಿರ್ಧರಿಸುತ್ತೇವೆ. ಇದಕ್ಕೆ ಜಾಗತಿಕ ಟೆಂಡರ್‌ ಕರೆಯಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT