ಕೋಳಿ ಫಾರ್ಮ್ ಕಚೇರಿ ಮೇಲೂ ದಾಳಿ
ಕೊಪ್ಪಳ ಜಿಲ್ಲೆಯ ಕುದರಿಮೋತಿ ಸಮೀಪದಲ್ಲಿರುವ ಕೋಳಿ ಸಾಕಾಣಿಕೆ ಮತ್ತು ಮೊಟ್ಟೆ ಉತ್ಪಾದನಾ ಕಂಪನಿಯೊಂದರ ಕಚೇರಿಯಲ್ಲಿಯೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬುಧವಾರ ಶೋಧ ನಡೆಸಿದ್ದಾರೆ. ರಾಜ್ಯದಲ್ಲಿ ಅತ್ಯಧಿಕ ಮೊಟ್ಟೆ ಉತ್ಪಾದಿಸುವ ಕಂಪನಿಗಳಲ್ಲಿ ಇದು ಕೂಡ ಒಂದಾಗಿದೆ. ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನದಲ್ಲಿರುವ ರನ್ಯಾ ರಾವ್ ಅವರ ಮಲತಂದೆ, ಐಪಿಎಸ್ ಅಧಿಕಾರಿ ಆರ್. ರಾಮಚಂದ್ರರಾವ್ ಅವರ ಆಪ್ತರು ಈ ಕಂಪನಿಯ ಮಾಲೀಕರು ಎಂಬ ಮಾಹಿತಿ ಲಭ್ಯವಾಗಿದೆ.